ಶುಭೋದಯ ಶಿವಮೊಗ್ಗ | 29 ಆಗಸ್ಟ್‌ 2025 | ಉದಾಹರಣೆ ಸಹಿತ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಆದಿಲ್‌ ಶಾಹಿ ಮತ್ತು ಮೊಘಲ್‌ ಸಾಮ್ರಾಜ್ಯದ ವಿರುದ್ಧದ ನಿರಂತರ ಹೋರಾಟದಿಂದ ಮಾರಾಠ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯ ಸೈನ್ಯದ ಸಂಖ್ಯೆ ಕುಸಿತವಾಗಿತ್ತು. ಶಿವಾಜಿಯ ಸೇನೆ ಕಷ್ಟಕ್ಕೆ ಸಿಲುಕಿತ್ತು. ಇಂತಹ ಸಂದರ್ಭ ಶಕ್ತಿಯ ಜೊತೆಗೆ ಯುಕ್ತಿಯ ಬಳಕೆಯಾಯಿತು. ಗೆರಿಲ್ಲಾ ಯುದ್ಧ ತಂತ್ರಗಳನ್ನು ಶಿವಾಜಿಯ ಸೇನೆ ಆರಂಭಿಸಿತು. ತಮ್ಮ ಬುದ್ಧಿಶಕ್ತಿಯಿಂದ ಶತ್ರುಗಳನ್ನು ಸೋಲಿಸಿದರು. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ 5 ತಾಲೂಕುಗಳಲ್ಲಿ ಇಂದು ರಜೆ, ಕಾಲೇಜಿಗೆ ಎಲ್ಲೆಲ್ಲಿ ರಜೆ ಇದೆ? ಇಲ್ಲಿದೆ … Read more

ದಿನ ಪಂಚಾಂಗ | 29 ಆಗಸ್ಟ್‌ 2025 | ಇವತ್ತು ಷಷ್ಠಿ, ರಾಹುಕಾಲ, ಯಮಗಂಡ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಶುಕ್ರವಾರ, 29 ಆಗಸ್ಟ್‌ 2025 – ಷಷ್ಠಿ ಸೂರ್ಯೋದಯ : 6.16 am ಸೂರ್ಯಾಸ್ತ : 6.41 pm ನಕ್ಷತ್ರ : ಚಿತ್ತಾ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.43 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.16ರವರೆಗೆ ಅಭಿಜಿತ್‌ ಮಧ್ಯಾಹ್ನ 12.04 ರಿಂದ 12.53ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.33 ರಿಂದ 3.22ರವರಗೆ ಗೋಧೂಳಿ ಮುಹೂರ್ತ ಸಂಜೆ 6.41 ರಿಂದ 7.04 ರವರೆಗೆ … Read more

ಶಿವಮೊಗ್ಗ ಜಿಲ್ಲೆಯ 5 ತಾಲೂಕುಗಳಲ್ಲಿ ಇಂದು ರಜೆ, ಕಾಲೇಜಿಗೆ ಎಲ್ಲೆಲ್ಲಿ ರಜೆ ಇದೆ? ಇಲ್ಲಿದೆ ಡಿಟೇಲ್ಸ್‌

BREAKING NEWS GENERAL IMAGE 1

ಮಳೆ ವರದಿ: ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಇವತ್ತು ಇಡೀ ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲೆಯ ಐದು ತಾಲೂಕುಗಳಲ್ಲಿ ರಜೆ (Holiday) ಘೋಷಣೆ ಮಾಡಲಾಗಿದೆ. ಎಲ್ಲೆಲ್ಲಿ ರಜೆ ಘೋಷಣೆಯಾಗಿದೆ? ಸಾಗರ: ಆ.29ರಂದು ಸಾಗರ ತಾಲೂಕಿನ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೊಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ. ಹೊಸನಗರ: ಆ.29ರಂದು ಹೊಸನಗರ ತಾಲೂಕಿನ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ … Read more

ಲಿಂಗನಮಕ್ಕಿ ಡ್ಯಾಮ್‌ ಎಲ್ಲ ಗೇಟ್‌ ಓಪನ್‌, ಬದಲಾಯ್ತು ಜೋಗದ ಲುಕ್‌, ಎಷ್ಟು ನೀರು ಹೊರ ಬಿಡಲಾಗ್ತಿದೆ?

linganamakki-dam-gates-opened-and-Jog-falls.

ಸಾಗರ: ಲಿಂಗನಮಕ್ಕಿ ಜಲಾಶಯದ (Linganamakki Dam) ಎಲ್ಲ ಗೇಟುಗಳನ್ನು ಪುನಃ ಮೇಲೆತ್ತಲಾಗಿದೆ. ಇದರಿಂದ ಶರಾವತಿ ನದಿಯಲ್ಲಿ ಪುನಃ ನೀರಿನ ಹರಿವು ಹೆಚ್ಚಳವಾಗಿದೆ. ಜೋಗ ಜಲಪಾತವು (Jog Falls) ಮೈ ದುಂಬಿ ಹರಿಯುತ್ತಿದೆ. ಇವತ್ತು ಒಳ, ಹೊರ ಹರಿವು ಎಷ್ಟಿದೆ? ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ನಿರಂತರ ಮಳೆಯಾಗುತ್ತಿದೆ. ಅದ್ದರಿಂದ ಒಳ ಹರಿವು ಹೆಚ್ಚಳವಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು 47,232 ಕ್ಯೂಸೆಕ್‌ ಒಳ ಹರಿವು ಇದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ ಎಲ್ಲ ರೇಡಿಯಲ್‌ ಗೇಟುಗಳನ್ನು ಮೇಲೆತ್ತಿ … Read more

ಶಿವಮೊಗ್ಗ ಜಿಲ್ಲೆಯ ಹವಾಮಾನ ವರದಿ, ಇವತ್ತೂ ಅಲರ್ಟ್‌ ಪ್ರಕಟ, ತಗ್ಗಿದ ತಾಪಮಾನ

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮಳೆ ಅಬ್ಬರ ಶುರುವಾಗಿದೆ. ಕಳೆದ ಎರಡು ದಿನದಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಇನ್ನು, ಇವತ್ತೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. (Weather Report) ಇವತ್ತು ಯಲ್ಲೋ ಅಲರ್ಟ್‌ ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಜೋರು ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಹವಾಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಇದೆ. ಕರಾವಳಿ ಜಿಲ್ಲೆಗಳ ಜೊತೆಗೆ … Read more

ಶಿವಮೊಗ್ಗ ಸಿಟಿ ಕೇಸರಿಮಯ, ಗಣೇಶೋತ್ಸವಕ್ಕೆ ಸಿದ್ಧತೆ ಜೋರು, ಎಲ್ಲೆಲ್ಲಿ ಹೇಗಿದೆ?

Saffron-flags-and-preparations-for-ganesh-chaturthi

ಶಿವಮೊಗ್ಗ: ಸಿಟಿಯಲ್ಲಿ ಗಣೇಶ ಚತುರ್ಥಿಗೆ ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ನಗರದ ವಿವಿಧೆಡೆ ಗಣಪತಿಯ ಪೆಂಡಾಲ್‌ ರೆಡಿ ಮಾಡಲಾಗಿದೆ. ಕೆಲವು ಕಡೆ ಕೇಸರಿ ‍(Saffron Flags) ಧ್ವಜ, ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ. ಗಣೇಶ ಚತುರ್ಥಿಗೆ ನಗರದಾದ್ಯಂತ ಅದ್ಧೂರಿ ಸಿದ್ಧತೆ ನಡೆಯುತ್ತಿದೆ. ಪ್ರತಿ ಬಡಾವಣೆಯಲ್ಲಿಯು ಸಾರ್ವಜನಿಕವಾಗಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೆ ಪೆಂಡಾಲ್‌ಗಳನ್ನು ನಿರ್ಮಿಸಲಾಗಿದ್ದು, ಅಲಂಕಾರದ ಕೆಲಸಗಳು ನಡೆಯುತ್ತಿವೆ. ಹಿಂದೂ ಮಹಾಸಭಾ, ಸಿದ್ಧತೆ ಜೋರು ಕೋಟೆ ರಸ್ತೆಯ ಶ್ರೀ ಭಿಮೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇದಕ್ಕೆ … Read more

ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಜನವೋ ಜನ, ಹೇಗಿತ್ತು ಹಬ್ಬದ ಖರೀದಿ?

Gandhi-Bazaar-during-Ganesha-Chaturthi.

ಶಿವಮೊಗ್ಗ: ಗೌರಿ – ಗಣೇಶ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ವ್ಯಾಪಾರ, ವಹಿವಾಟು ಬಿರುಸಾಗಿದೆ. ಗಾಂಧಿ ಬಜಾರ್‌ನಲ್ಲಿ (Gandhi Bazaar) ಬೆಳಗ್ಗೆಯಿಂದ ಸಂಜೆವರೆಗೆ ಜನ ಜಂಗುಳಿ ಇತ್ತು. ಹೂವು, ಹಣ್ಣು, ತರಕಾರಿ, ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿ ಖರೀದಿ ಜೋರಿತ್ತು. ಹಬ್ಬದ ಖರೀದಿ ಬಲು ದುಬಾರಿ ಹಬ್ಬದ ಸಂದರ್ಭ ಹೂವು, ಹಣ್ಣು, ತೆಂಗಿನಕಾಯಿ, ತರಕಾರಿ ದರ ದುಬಾರಿಯಾಗಿದೆ. ಗುಣಮಟ್ಟದ ಆಧಾರದಲ್ಲಿ ಹೂವಿನ ದರದಲ್ಲಿ ಏರಿಳಿತವಿದೆ. ತೆಂಗಿನಕಾಯಿ ದರ ₹50 ಮತ್ತು ಮೇಲ್ಪಟ್ಟಿದೆ. ತರಕಾರಿ ದರವು ಜೇಬು ಸುಡುವಂತಿದೆ. ದುಬಾರಿ … Read more

ಶಿವಮೊಗ್ಗದಲ್ಲಿ ಶ್ರದ್ಧೆ ಭಕ್ತಿಯ ಗೌರಿ ಪೂಜೆ, ಮಡಿಲಕ್ಕಿ, ಬಾಗಿನ ಅರ್ಪಣೆ, ಎಲ್ಲೆಲ್ಲಿ ಹೇಗಿತ್ತು ಹಬ್ಬ?

Gowri-Pooje-at-Gandhi-Bazaar-Basaveshwara-temple.

ಶಿವಮೊಗ್ಗ: ನಗರದಲ್ಲಿ ಗೌರಿ (Gowri) ಹಬ್ಬವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಮನೆಗಳಲ್ಲು ಗೌರಿ ಪೂಜೆ ನೆರವೇರಿಸಲಾಗುತ್ತಿದೆ. ಗೌರಿ ಮೂರ್ತಿಗೆ ಪೂಜೆ ಗಾಂಧಿ ಬಜಾರ್‌ನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ವತಿಯಿಂದ 96ನೇ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ದೇವಸ್ಥಾನದ ಸಭಾಂಗಣದಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ನಗರದ ವಿವಿಧೆಡೆ ವಿಶೇಷ ಪೂಜೆ ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. … Read more

ಶಿವಮೊಗ್ಗದಲ್ಲಿ ಮೀಟರ್‌ ಹಾಕದ ಆಟೋ ಚಾಲಕನಿಗೆ ದಂಡದ ಬಿಸಿ, ಏನಿದು ಕೇಸ್?

Traffic-police-fine-auto-driver

ಶಿವಮೊಗ್ಗ: ಆಟೋದಲ್ಲಿ (Auto) ಮೀಟರ್‌ ಹಾಕಲು ಕೇಳಿದ ಪ್ರಯಾಣಿಕನಿಗೆ ಅವಾಚ್ಯವಾಗಿ ನಿಂದಿಸಿದ ಆಟೋ ಚಾಲಕನಿಗೆ ಶಿವಮೊಗ್ಗದ ಸಂಚಾರ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ. ಪ್ರಯಾಣಿಕರು ದೂರು ನೀಡಿದ ಹಿನ್ನೆಲೆ ಪರಿಶಿಲಿಸಿದ ಪೊಲೀಸರು ₹500 ದಂಡ ವಿಧಿಸಿದ್ದಾರೆ. ಪ್ರಯಾಣಿಕರೊಬ್ಬರು ಮೀಟರ್‌ ಹಾಕುವಂತೆ ಚಾಲನಿಗೆ ತಿಳಿಸಿದ್ದು, ಆತನ ನಿರಾಕಸಿದ್ದ. ಈ ಸಂಬಂಧ ಸಂಚಾರ ಠಾಣೆ ಪೊಲೀಸರಿಗೆ ಪ್ರಯಾಣಿಕ ದೂರು ನೀಡಿದ್ದರು. ಆಟೋ ಚಾಲಕನನ್ನು ಗುರುತಿಸಿ ಆತನಿಗೆ ದಂಡ ವಿಧಿಸಿ, ಇನ್ಮುಂದೆ ಮೀಟರ್‌ ಹಾಕುವಂತೆ ಸೂಚಿಸಲಾಗಿದೆ.‌ ಇದನ್ನೂ ಓದಿ » ಭದ್ರಾ ಜಲಾಶಯದಲ್ಲಿ … Read more

ಭದ್ರಾ ಜಲಾಶಯದಲ್ಲಿ ಗಂಗಾ ಪೂಜೆ, ಬಾಗಿನ ಅರ್ಪಣೆ, ನೂತನ ಪರಿವೀಕ್ಷಣಾ ಮಂದಿರ ಲೋಕಾರ್ಪಣೆ

250825 Bagina For Bhadra dam by BK Sangameshwara

ಭದ್ರಾವತಿ: ಭದ್ರಾ ಜಲಾಶಯಕ್ಕೆ ಶಾಸಕ ಬಿ.ಕೆ.ಸಂಗಮೇಶ್ವರ ನೇತೃತ್ವದಲ್ಲಿ ಗಂಗಾ ಪೂಜೆ ನೆರವೇರಿಸಿ ಬಾಗಿನ (Bagina) ಅರ್ಪಣೆ ಮಾಡಲಾಯಿತು. ಇದೇ ವೇಳೆ ನೂತನವಾಗಿ ನಿರ್ಮಾಣವಾಗಿರುವ ಪರಿವೀಕ್ಷಣಾ ಮಂದಿರವನ್ನು ಉದ್ಘಾಟಿಸಲಾಯಿತು. ಇದನ್ನೂ ಓದಿ » ಸಿಗಂದೂರು ಬಳಿ ಹಿನ್ನೀರಿನಲ್ಲಿ ಇಳಿಯಲಿದೆ ವಿಮಾನ, ಶರಾವತಿಯಲ್ಲಿ ವಾಟರ್ ಏರೊಡ್ರೋಮ್‌ಗೆ ಪ್ಲಾನ್ ತಹಶೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಡಿವೈಎಸ್ಪಿ ಕೆ.ಆರ್.ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ನಗರಸಭೆ ಸದಸ್ಯ ಬಿ.ಕೆ.ಮೋಹನ್‌, ಜಾಮಿಯಾ ಮಸೀದಿಯ ಮೌಲಾನ ಖಾದ್ರಿ, ಬಿ.ಎಸ್‌.ಬಸವೇಶ್‌, ಬಿ.ಎಸ್‌.ಗಣೇಶ್‌ ಸೇರಿದಂತೆ ಹಲವರು ಇದ್ದರು. ಇದನ್ನೂ … Read more