ಭದ್ರಾವತಿಯಲ್ಲಿ ಕೋಟಿ ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕಳಪೆ, ಕೆಆರ್‌ಎಸ್‌ ಆಕ್ರೋಶ

300124 KRS Party protest at bhadravathi over road work

SHIVAMOGGA LIVE NEWS, 30 JANUARY 2025 ಭದ್ರಾವತಿ : ನಗರಸಭೆ ವ್ಯಾಪ್ತಿಯಲ್ಲಿ ಪಾದಚಾರಿ ರಸ್ತೆ (Road) ಅಭಿವೃದ್ಧಿಯ ಹೆಸರಲ್ಲಿ ಕಳಪೆ ಹಾಗೂ ಅಸಮರ್ಪಕ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕೆ.ಆರ್‌.ಎಸ್ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.   3.15 ಕೋಟಿ ರೂ. ಮೊತ್ತದ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ. ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಬೇಕು ತೀರ್ಥೇಶ್‌, ಕೆ.ಆರ್‌.ಎಸ್.‌ ಪಕ್ಷ ತಾಲೂಕು ಅಧ್ಯಕ್ಷ ಪೌರಾಯುಕ್ತರು … Read more

‌ಶಿವಮೊಗ್ಗದಲ್ಲಿ ನಾಳೆಯಿಂದ ಮೂರು ದಿನ ABVP ರಾಜ್ಯ ಸಮ್ಮೇಳನ, ಏನೆಲ್ಲ ಕಾರ್ಯಕ್ರಮ ಇರುತ್ತೆ?

300125 abvp state conference press meet at shimoga HK Praveen

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ನಗರದ ಅಲ್ಲಮಪ್ರಭು ಮೈದಾನದಲ್ಲಿ ಜ.31ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ABVP) ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ಶೈಕ್ಷಣಿಕ ಸ್ಥಿತಿಗತಿ, ವಿಶ್ವವಿದ್ಯಾಲಯಗಳ ಸ್ಥಿತಿ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಪರಿಷತ್ ರಾಜ್ಯ ಕಾರ್ಯದರ್ಶಿ ಹೆಚ್.ಕೆ.ಪ್ರವೀಣ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 44ನೇ ರಾಜ್ಯ ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಭಿಷೇಕ್, ಸುಧಾ ಶೆಣೈ, ರಂಜಿನಿ ಇದ್ದರು. ಇದನ್ನೂ ಓದಿ » ಶಿವಮೊಗ್ಗ … Read more

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಡ್ಯೂಟಿಗೆ ತೆರಳಿದ್ದ ವೈದ್ಯ, ಸ್ವಲ್ಪ ಹೊತ್ತಿನ ಬಳಿಕ ಹೊರ ಬಂದಾಗ ಕಾದಿತ್ತು ಆಘಾತ

160125 mc gann hospital general image

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬೈಕ್‌ ಕಳ್ಳರ ಹಾವಳಿ ಹೆಚ್ಚಾಗಿದೆ. ಈಗ ವೈದ್ಯರೊಬ್ಬರ (Doctor) ಬೈಕ್‌ ಕಳುವಾಗಿದ್ದು, ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ. ಭಾರ್ಗವ್‌ ಎಂಬುವವರ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳ್ಳತನವಾಗಿದೆ. ಡಾ. ಭಾರ್ಗವ್‌ ಅವರು ಜ.23ರಂದು ರಾತ್ರಿ 8.45ಕ್ಕೆ ಮೆಗ್ಗಾನ್‌ ಆಸ್ಪತ್ರೆ ಆಡಳಿತ ಭವನದ ಮುಂಭಾಗ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿದ್ದರು. ರಾತ್ರಿ 9.30ರ ಹೊತ್ತಿಗೆ ಗಮನಿಸಿದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. … Read more

ಕಲ್ಯಾಣ ಮಂಟಪದಲ್ಲಿ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Crime-News-General-Image

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಕಲ್ಯಾಣ ಮಂಟಪವೊಂದರಲ್ಲಿ ಮಹಿಳೆಯರ ಕೊಠಡಿಗೆ ನುಗ್ಗಿದ ಕಳ್ಳರು ಸೂಟ್‌ಕೇಸ್‌ನ ಜಿಪ್‌ ಹರಿದು 4.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ (Jewels) ಕಳ್ಳತನ ಮಾಡಿದ್ದಾರೆ. ಎನ್‌.ಟಿ.ರಸ್ತೆಯ ಫಲಕ್‌ ಪ್ಯಾಲೇಸ್‌ನಲ್ಲಿ ಘಟನೆ ಸಂಭವಿಸಿದೆ. ಉದ್ಯಮಿ ನವೀದ್‌ ನವಾಜ್‌ ಎಂಬುವವರು ಪತ್ನಿ ಮತ್ತು ಸಹೋದರಿಯೊಂದಿಗೆ ಸಂಬಂಧಿಯ ಮದುವೆಯಲ್ಲಿ ಭಾಗವಹಿಸಿದ್ದರು. ಮಹಿಳೆಯ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಸೂಟ್‌ ಕೇಸ್‌ ಇರಿಸಿದ್ದರು. ಜಿಪ್‌ಗಳಿಗೆ ಲಾಕ್‌ ಮಾಡಲಾಗಿತ್ತು. ದುಲ್ವಾ ಕಾರ್ಯಕ್ರಮ ಇದ್ದಿದ್ದರಿಂದ ಕುಟುಂಬದವರು ಅದರಲ್ಲಿ ಪಾಲ್ಗೊಂಡಿದ್ದರು. … Read more

ರಿಪ್ಪನ್‌ಪೇಟೆ ಸೇರಿ ಸುತ್ತಮುತ್ತಲು ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಯಾಕೆ?

power cut mescom ELECTRICITY

SHIVAMOGGA LIVE NEWS, 30 JANUARY 2025 ರಿಪ್ಪನ್‌ಪೇಟೆ : ಪಟ್ಟಣದ ಉಪವಿಭಾಗ ಶಾಖೆಯಲ್ಲಿ ಜ.30ರಂದು ರಿಪ್ಪನ್ ಪೇಟೆ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ವಿದ್ಯುತ್ (Power) ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಆದ್ದರಿಂದ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೆ ರಿಪ್ಪನ್ ಪೇಟೆ ಸೇರಿದಂತೆ ಹೆದ್ದಾರಿಪುರ, ಮುಗುಡ್ತಿ, ಬಿದರಹಳ್ಳಿ ಹಾಗೂ ಜಂಬಳ್ಳಿ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಹಲವು ಕಡೆ ಜ.30ರಂದು ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದಲ್ಲಿ ಚಳಿ ಜೋರು, ಇವತ್ತು ಎಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

SHIVAMOGGA LIVE NEWS, 30 JANUARY 2025 ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಮುಂದುವರೆದಿದ್ದು, ಬಿಸಿಲಿನ ಅಬ್ಬರವು ಜೋರಿದೆ. ಹಾಗಾಗಿ ಸಂಜೆಯಾಗುತ್ತಲೆ ತಾಪಮಾನ ತೀವ್ರವಾಗಿ ಕುಸಿತ ಕಾಣುತ್ತಿದೆ. ಬೆಳಗ್ಗೆ ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ (weather). ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 14 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. … Read more

ಶಿವಮೊಗ್ಗದಲ್ಲಿ ಬಸ್‌ ಹತ್ತಿ ಕುಳಿತ ನ್ಯಾಮತಿಯ ಮಹಿಳೆಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-Stand-Shivamogga

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಬಸ್‌ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ, ನಗದು ಕಳ್ಳತನ ಮುಂದುವರೆದಿದೆ. KSRTC ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತುವಾಗ ವ್ಯಾನಿಟಿ ಬ್ಯಾಗ್‌ನಿಂದ ಕಳ್ಳತನವಾಗಿದೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಯ ಆರೋಗ್ಯ ವಿಚಾರಿಸಿದ್ದ ಗೀತಾ ಎಂಬುವವರು ತಮ್ಮೂರು ನ್ಯಾಮತಿಗೆ ಹಿಂತಿರುಗುತ್ತಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತಿದ್ದರು. ಟಿಕೆಟ್‌ ಮಾಡಿಸಲು ವ್ಯಾನಿಟಿ ಬ್ಯಾಗ್‌ ಗಮನಿಸಿದಾಗ ಜಿಪ್‌ ತೆರೆದಿರುವುದು ಗೊತ್ತಾಗಿದೆ. ಒಳಗಿದ್ದ ಪರ್ಸ್‌ ನಾಪತ್ತೆಯಾಗಿತ್ತು. … Read more

ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

DINA-BHAVISHYA

DINA BHAVISHYA, 30 JANUARY 2025 » ಮೇಷ ಉತ್ತಮ ಅವಕಾಶಗಳು ಲಭಿಸಲಿದೆ. ಭೂ ವಿವಾದ ಪರಿಹಾರವಾಗಲಿದೆ. ನೆಮ್ಮದಿಯ ದಿನ ಇರಲಿದೆ. ಕೆಲಸ ಕಾರ್ಯದಲ್ಲಿ ಇವತ್ತು ಸುಲಭವಾಗಿ ಯಶಸ್ಸು ಸಿಗಲಿದೆ. ನಿರೀಕ್ಷಿತ ಸ್ಥಾನಮಾನ ಲಭಿಸುತ್ತದೆ. » ವೃಷಭ ಗುರು ಹಿರಿಯರ ಆಶೀರ್ವಾದದಿಂದ ಆತ್ಮಶಕ್ತಿ ಹೆಚ್ಚಳವಾಗಲಿದೆ. ಮುಂಗೋಪ ಬಿಟ್ಟರೆ ನೆರವು ಸಿಗಲಿದೆ. ಕಷ್ಟ ನಷ್ಟ ಕಡಿಮೆಯಾಗಲಿವೆ. ಅನಿರೀಕ್ಷಿತವಾಗಿ ನಿಮ್ಮ ಕೈಗೆ ಹಣ ಸೇರಲಿದೆ. ಲಾಭದಾಯಕವಾಗಿರಲಿದೆ ದಿನ. » ಮಿಥುನ ಜಾರಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆ ಇರಲಿ. … Read more

ಗಾಂಧಿ ಬಜಾರ್‌ ಬಳಿ ತರಕಾರಿ ಖರೀದಿಸಿ ಕಾರು ಬಳಿ ಹಿಂತಿರುಗಿದ ಮಾಲೀಕನಿಗೆ ಕಾದಿತ್ತು ಆಘಾತ, ಆಗಿದ್ದೇನು?

Shimoga-BH-Road-Near-Karnataka-Sanga

SHIVAMOGGA LIVE NEWS, 30 JANUARY 2024 ಶಿವಮೊಗ್ಗ : ಬಿ.ಹೆಚ್‌.ರಸ್ತೆಯಲ್ಲಿ ಕಾರಿನ ಹಿಂಬದಿ ಗಾಜು (Glass) ಒಡೆದು ಬ್ಯಾಗ್‌ ಕಳ್ಳತನ ಮಾಡಲಾಗಿದೆ. ಖಾಸಗಿ ಕಂಪನಿ ಉದ್ಯೋಗಿ ರೋಹಿತ್‌ ಎಂಬುವವರು ಕಾರು ನಿಲ್ಲಿಸಿ ತರಕಾರಿ ಖರೀದಿಸಿ ಬರುವಷ್ಟರಲ್ಲಿ ಘಟನೆ ನಡೆದಿದೆ. ಕರ್ನಾಟಕ ಸಂಘದ ಮುಂಭಾಗ ರೋಹಿತ್‌ ಅವರು ತಮ್ಮ ಐ20 ಕಾರನ್ನು ಪಾರ್ಕಿಂಗ್‌ ಮಾಡಿದ್ದರು. ತರಕಾರಿ ಖರೀದಿಸಿ ಕಾರಿನ ಬಳಿ ಬಂದಾಗ ಬಲಭಾಗದ ಹಿಂಬದಿ ಗಾಜು ಒಡೆದಿರುವುದು ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಹಿಂಬದಿ ಸೀಟಿನ ಮೇಲಿಟ್ಟಿದ್ದ ಲ್ಯಾಪ್‌ಟಾಪ್‌ … Read more

ಶಿವಮೊಗ್ಗ ಸಿಟಿಯಲ್ಲಿ ಮತ್ತೆ ಎರಡು ಇಂದಿರಾ ಕ್ಯಾಂಟೀನ್‌, ಎಲ್ಲೆಲ್ಲಿ? ಯಾವಾಗ ಶುರುವಾಗುತ್ತೆ?

indira-Canteen-at-vidyanagara-in-Shimoga-city1.

SHIVAMOGGA LIVE NEWS, 29 JANUARY 2025 ಶಿವಮೊಗ್ಗ : ನಗರದಲ್ಲಿ ಮತ್ತೆರಡು ಇಂದಿರಾ ಕ್ಯಾಂಟೀನ್‌ (Indira Canteen) ಸ್ಥಾಪನೆಯಾಗುತ್ತಿವೆ. ಈಗಾಗಲೇ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೆಲವೆ ದಿನದಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆ ಆರಕ್ಕೆ ಏರಿಕೆಯಾಗಲಿದೆ. ಎಲ್ಲೆಲ್ಲಿ ಸ್ಥಾಪನೆಯಾಗುತ್ತಿದೆ ಕ್ಯಾಂಟೀನ್?‌ ಶಿವಮೊಗ್ಗದ ವಿದ್ಯಾನಗರ ಮತ್ತು ನೇತಾಜಿ ವೃತ್ತದಲ್ಲಿ ಮಹಾನಗರ ಪಾಲಿಕೆಯ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ ಕ್ಯಾಂಟೀನ್‌ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತದ … Read more