ಶಿವಮೊಗ್ಗದಲ್ಲಿ ಧೂಳು ಹಿಡಿಯುತ್ತಿದೆ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಕಟ್ಟಡ, ಏನೆಲ್ಲ ಸಮಸ್ಯೆ ಆಗ್ತಿದೆ?

Multi-level-car-parking-building-usage-delay

SHIVAMOGGA LIVE NEWS, 15 DECEMBER 2024 ಶಿವಮೊಗ್ಗ : ನಗರದ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ನೀಡಲು ನಿರ್ಮಾಣವಾಗಿರುವ ಮಲ್ಟಿ ಲೆವೆಲ್‌ ಪಾರ್ಕಿಂಗ್‌ (Parking) ಕಟ್ಟಡ ಧೂಳು ಹಿಡಿಯುತ್ತಿದೆ. ಉದ್ಘಾಟನೆಯಾಗಿ ವರ್ಷ ಕಳೆದರು ಇದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಬಿ.ಹೆಚ್.‌ರಸ್ತೆಯಲ್ಲಿದ್ದ ಹೂವಿನ ಮಾರುಕಟ್ಟೆ ಸ್ಥಳದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ವತಿಯಿಂದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಮತ್ತೊಮ್ಮೆ ಬಂದರೂ 25 ಕೋಟಿ … Read more

BREAKING NEWS – ಖಾಸಗಿ ಬಸ್‌ ಪಲ್ಟಿ, ಮಂಗಳೂರಿನಿಂದ ಬಂದಿದ್ದವರಿಗೆ ಗಂಭೀರ ಗಾಯ

Private-Bus-incident-at-Muppane-near-Kargal.

SHIVAMOGGA LIVE NEWS, 15 DECEMBER 2024 ಸಾಗರ : ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ (Private Bus) ಅಪಘಾತಕ್ಕೀಡಾಗಿ ಹಲವರಿಗೆ ಗಂಭೀರ ಗಾಯವಾಗಿದೆ. ಸಾಗರ ತಾಲೂಕು ಅರಳಗೋಡಿನ ಮುಪ್ಪಾನೆ ಸಮೀಪ ಘಟನೆ ಸಂಭವಿಸಿದೆ. ಮಂಗಳೂರಿನಿಂದ ಜೋಗಕ್ಕೆ ಪ್ರವಾಸ ಬಂದಾಗ ಅಪಘಾತ ಸಂಭವಿಸಿದೆ. ಮುಪ್ಪಾನೆ ಸಮೀಪದ ಭಟ್ಕಳ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್‌, ಪಲ್ಟಿಯಾಗಿದೆ. ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರ್ಗಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೆ … Read more

ದಿನ ಭವಿಷ್ಯ | 15 ಡಿಸೆಂಬರ್‌ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

DINA-BHAVISHYA

DINA BHAVISHYA, 15 DECEMBER 2024 ಮೇಷ ಮುಂದಾಲೋಚನೆ, ವಿವೇಚನೆಯಿಂದ ನಡೆದುಕೊಂಡಲ್ಲಿ ಕೆಲಸದಲ್ಲಿ ಹೆಚ್ಚಿನ ಏಳಿಗೆ. ಉದ್ಯೋಗ ಸ್ಥಳದಲ್ಲಿ ಬಹುಕಾಲದಿಂದ ತಾಂತ್ರಿಕ ಸಮಸ್ಯೆ ನಿವಾರಣೆ ಆಗಲಿದೆ. ವೃಷಭ ಓದುವ ಹವ್ಯಾಸದಿಂದ ಯೋಚನಾ ಲಹರಿ ಬದಲಾವಣೆ. ದಿನದ ಮೊದಲ ಭಾಗ ಶ್ರಮ ಭರಿತ. ನಂತರ ಬಹಳ ವಿರಾಮ ಲಭಿಸಲಿದೆ. ಮಿಥುನ ಸಂಶೋಧನಾ ಕ್ಷೇತ್ರದಲ್ಲಿ ಪ್ರಗತಿ. ಅಲಂಕಾರಿಕ ವಸ್ತು ಖರೀದಿಸಲು ಹಣ ವ್ಯಯ ಮಾಡುವಿರಿ. ಸಂಬಂಧಿಯಿಂದ ನೆಮ್ಮದಿ. ಕರ್ಕಾಟಕ ಖಚಿತ ನಿರ್ಧಾರದಿಂದ ಯಶ ಸಾಧಿಸಬಹುದು. ಉದ್ದಿಮೆದಾರರಿಗೆ ಸ್ವಲ್ಪ ನಷ್ಟ ಸಂಭವಿಸಬಹುದು. … Read more

ಸರ್ಕಾರಿ ಗೌರವದೊಂದಿಗೆ ಹೆಡ್‌ ಕಾನ್ಸ್‌ಟೇಬಲ್‌ ಅಂತ್ಯ ಸಂಸ್ಕಾರ

Head-Constable-Parashuram-last-rites-at-Soraba

SHIVAMOGGA LIVE NEWS, 14 DECEMBER 2024 ಸೊರಬ : ಕರ್ತವ್ಯದ ವೇಳೆ ಹೃದಯಾಘಾತದಿಂದ ಮೃತಪಟ್ಟ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಪರಶುರಾಮ್‌ ಅವರ ಅಂತ್ಯಕ್ರಿಯೆಯನ್ನು (Last Rites) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅವರ ಹುಟ್ಟೂರು ಸೊರಬ ತಾಲೂಕು ಸಂಪಗೋಡು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಶಿವಮೊಗ್ಗಕ್ಕೆ ಬಂದಾಗ ಹೃದಯಾಘಾತ ಪರಶುರಾಮ್‌ ಅವರು ತೀರ್ಥಹಳ್ಳಿಯ ಹೈವೇ ಪ್ಯಾಟ್ರೋಲ್‌ ವಾಹನದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿದ್ದಾಗ ಹೃದಯಾಘಾತ ಸಂಭವಿಸಿತ್ತು. ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ … Read more

ಶಿವಮೊಗ್ಗದಲ್ಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ನಿವೇಶನ ಅಕ್ರಮ ಮಾರಾಟ

Shimoga-City-MRS-Drone-Shot

SHIVAMOGGA LIVE NEWS, 14 DECEMBER 2024 ಶಿವಮೊಗ್ಗ : ಮಾಲೀಕರಿಗೆ ತಿಳಿಯದೆ ಅವರ ನಿವೇಶನವನ್ನು (Site) ಬೇರೊಬ್ಬರಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗದ ಮಹಿಳೆಯೊಬ್ಬರ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಈಶ್ವರ್‌ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಜಂಟಿ ಖಾತೆಯಲ್ಲಿದ್ದ ನಿವೇಶನವನ್ನು ಅಕ್ರಮವಾಗಿ ಬೇರೊಬ್ಬರ ಹೆಸರಿಗೆ ಪರಭಾರೆ ಮಾಡಿರುವ ಆರೋಪವಿದೆ. ನಕಲಿ ಹೆಸರು, ಮರಣ ಪ್ರಮಾಣ ಪತ್ರ ಮಹಾನಗರ ಪಾಲಿಕೆಯಲ್ಲಿ ಈಶ್ವರ್‌ … Read more

ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ಎರಡು ದಿನ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS, 14 DECEMBER 2024 ಶಿವಮೊಗ್ಗ : ಹೊಳಲೂರು ವಿದ್ಯುತ್ ವಿತರಣಾ ಕೇಂದ್ರದ ಮಾರ್ಗಗಳಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಡಿ.14 ಮತ್ತು 15 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಹೊಳಲೂರು, ಹಾಡೋನಹಳ್ಳಿ, ಹಳೆ ಮತ್ತು ಹೊಸ ಮಡಿಕೆಚೀಲೂರು,  ಬಿ.ಕೆ.ತಾವರೆ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ … Read more

ಎಟಿಎಂನಿಂದ ಹಣ ಬಿಡಿಸಿದ ಮರುದಿನ ಮೊಬೈಲ್‌ಗೆ ಬಂದಿದ್ದ ಮೆಸೇಜ್‌ ನೋಡಿ ಮಹಿಳೆಗೆ ಶಾಕ್

Crime-News-General-Image

SHIVAMOGGA LIVE NEWS, 14 DECEMBER 2024 ಶಿವಮೊಗ್ಗ : ನಗರದ ಎಟಿಎಂ ಒಂದರಲ್ಲಿ ಹಣ ಬಿಡಿಸಿಕೊಂಡ ಮರುದಿನ ಮೊಬೈಲ್‌ ಪರಿಶೀಲಿಸುವಾಗ ಮೆಸೇಜ್‌ ಗಮನಿಸಿದ ಮಹಿಳೆ ಕಕ್ಕಾಬಿಕ್ಕಿಯಾಗಿದ್ದಾರೆ. ಎಟಿಎಂ ಕಾರ್ಡ್‌ (ATM Card) ಪರಿಶೀಲಿಸಿದಾಗ ಆಘಾತಗೊಂಡಿದ್ದಾರೆ. ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಮತ್ತೊಮ್ಮೆ ಮಹಿಳೆಯೊಬ್ಬರನ್ನು ವಂಚಿಸಲಾಗಿದೆ. ಅಷ್ಟಕ್ಕು ಆಗಿದ್ದೇನು? ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣ ವಿತ್‌ ಡ್ರಾ ಮಾಡಲು ರೆಹಾನಾ ಬೇಗಂ (68) ಎಂಬುವವರು ಎಟಿಎಂಗೆ ತೆರಳಿದ್ದರು. ಎಟಿಎಂ ಬಳಿ ಇದ್ದ ವ್ಯಕ್ತಿಯೊಬ್ಬ ಹಣ … Read more

‘ಲಾಠಿ ಚಾರ್ಜ್‌ ಮಾಡಿದ ಪೊಲೀಸರನ್ನು ವಜಾಗೊಳಿಸಬೇಕು, ಸಿಎಂ ರಾಜೀನಾಮೆ ಕೊಡಬೇಕು’

Protest-against-lati-charge-in-Shimoga.

SHIVAMOGGA LIVE NEWS, 13 DECEMBER 2024 ಶಿವಮೊಗ್ಗ : ಪಂಚಮಸಾಲಿ, ದೀಕ್ಷಾ ಮಲೆಗೌಡ-ಗೌಡ ಲಿಂಗಾಯತರಿಗೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಹಾರ (Lati Charge) ನಡೆಸಿದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಶಿವಮೊಗ್ಗ ಶಾಖೆಯಿಂದ ಗುರುವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು.  ಸ್ವತಃ ಹಿರಿಯ ಪೊಲೀಸ್ ಅಧಿಕಾರಿ ಆರ್.ಹಿತೇಂದ್ರ ಅವರು … Read more

ಪೊಲೀಸ್‌ ದಾಳಿ, 20 ಮೆಟ್ರಿಕ್‌ ಟನ್‌ ಮರಳು ವಶಕ್ಕೆ

Holehonnuru-Police-Station-Bhadravathi-jpg

SHIVAMOGGA LIVE NEWS, 13 DECEMBER 2024 ಭದ್ರಾವತಿ : ತಾಲೂಕಿನ ಕಾಟಿಕೆರೆ ಗ್ರಾಮದ ಸಕ್ರೆಬೈಲು ಸಮೀಪ ಭದ್ರಾ ನದಿಯಲ್ಲಿ ಹಾಗೂ ಮಂಗೋಟೆ ಗ್ರಾಮದ ಸಮೀಪ ತುಂಗಾ-ಭದ್ರಾ ನದಿಯಲ್ಲಿ ಅಕ್ರಮವಾಗಿ ಕಳವು ಮಾಡಿ ಸಂಗ್ರಹಿಸಿ ಇಡಲಾಗಿದ್ದ 20 ಮೆಟ್ರಿಕ್ ಟನ್‌ ಮರಳನ್ನು (Sand) ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಸಿಪಿಐ ಲಕ್ಷ್ಮೀಪತಿ ನೇತೃತ್ವದ ತಂಡ ದಾಳಿ ನಡೆಸಿ, ಕಾಟಿಕೆರೆ ಗ್ರಾಮದ ಸಕ್ರೆಬೈಲು ಸಮೀಪ ಭದ್ರಾ ನದಿ ದಡದಲ್ಲಿ 10 ಮೆಟ್ರಿಕ್ ಟನ್ ಮತ್ತು ಮಂಗೋಟೆ ಗ್ರಾಮದ … Read more

ಶಿವಮೊಗ್ಗ – ಮೈಸೂರು ಹೊಸ ರೈಲಿಗೆ ಬೇಡಿಕೆ ಇಟ್ಟ ಸಂಸದ

BY-Raghavendra-meets-Minister-V-Somanna-at-Delhi Discuss about mysore train

SHIVAMOGGA LIVE NEWS, 13 DECEMBER 2024 ನವದೆಹಲಿ : ಶಿವಮೊಗ್ಗದಿಂದ ಮೈಸೂರು ಜಿಲ್ಲೆಗೆ ಪ್ರತಿದಿನ ರಾತ್ರಿ ಅರಸೀಕೆರೆ-ಹಾಸನ-ಕೆ.ಆರ್.ನಗರ ಮಾರ್ಗವಾಗಿ ನೂತನ ರೈಲ್ವೆ (Train) ಸಂಪರ್ಕ ಒದಗಿಸುವಂತೆ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮನವಿ ಮಾಡಿದರು. ದೆಹಲಿಯ ಅವರ ಅಧಿಕೃತ ಕಚೇರಿಯಲ್ಲಿ ಭೇಟಿ ಮಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಯಿಂದ ನಡೆಯುತ್ತಿರುವ ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ ಹಾಗೂ ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರು ನೂತನ … Read more