ಶಿವಮೊಗ್ಗದ ಉಪನೋಂದಣಾಧಕಾರಿ ಕಚೇರಿ ಸ್ಥಳಾಂತರ, ಇಲ್ಲಿದೆ ಹೊಸ ವಿಳಾಸ

Shimoga-News-update

ಶಿವಮೊಗ್ಗ: ಈವರೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿಯು (Office) ಈಗ ಹೊಸ ವಿಳಾಸಕ್ಕೆ ಸ್ಥಳಾಂತರಗೊಂಡಿದೆ. ಸಾಗರ ರಸ್ತೆಯಲ್ಲಿರುವ ಎಪಿಎಂಸಿ ವಾಣಿಜ್ಯ ಸಂಕೀರ್ಣದ ಮೊದಲನೇ ಮಹಡಿಯಲ್ಲಿರುವ ಮಳಿಗೆ ಸಂಖ್ಯೆ 108 ಮತ್ತು 109ಕ್ಕೆ ಉಪ ನೋಂದಣಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದೆ. ಹಿರಿಯ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವಂತೆ, ಈ ಹೊಸ ಕಚೇರಿಯಲ್ಲಿ ಜೂನ್ 9ರಿಂದ ಕಾರ್ಯಾರಂಭ ಮಾಡಲಿದೆ. ಇದನ್ನೂ ಓದಿ » ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಶಿವಮೊಗ್ಗದಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಬೆಳ್ಳಿ ಮತ್ತಷ್ಟು ದುಬಾರಿ, ಚಿನ್ನದ ಬೆಲೆಯು ಹೆಚ್ಚಳ, ಎಷ್ಟಾಗಿದೆ ರೇಟ್‌?

BUSINESS-NEWS.webp

ಮಾರುಕಟ್ಟೆ ಮಾಹಿತಿ: ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ದರವು (Silver Price) ಹೊಸ ದಾಖಲೆ ನಿರ್ಮಿಸಿದೆ. ಪ್ರತಿ ಕೆ.ಜಿ ಬೆಳ್ಳಿ 2,000 ರೂ. ಏರಿಕೆಯಾಗಿ 1.04 ಲಕ್ಷ ರೂ.ಗೆ ಮಾರಾಟವಾಗಿದೆ. ಈ ಹಿಂದೆ ಮಾರ್ಚ್ 19ರಂದು 1.03 ಲಕ್ಷ ರೂ. ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಚಿನ್ನದ ದರದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. ಶುದ್ಧ ಚಿನ್ನ (ಶೇ 99.9 ಪರಿಶುದ್ಧತೆ) 10 ಗ್ರಾಂಗೆ 430 ರೂ. ಏರಿಕೆಯಾಗಿ 99,690 ರೂ.ಗೆ ತಲುಪಿದೆ. ಹಾಗೆಯೇ, ಆಭರಣ ಚಿನ್ನದ … Read more

ಖರೀದಿಸಿ, ಮಾರಿ, ಅಧಿಕ ಲಾಭ ಗಳಿಸಿ, ಆಮಿಷಕ್ಕೆ ಮಾರುಹೋದ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ದೊಡ್ಡ ಆಘಾತ

Online-Fraud-Case-image

ಶಿವಮೊಗ್ಗ: ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಿ ಮಾರಾಟ (Sell) ಮಾಡಿ ಅಧಿಕ ಲಾಭಾಂಶ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 17.74 ಲಕ್ಷ ರೂ. ಹಣ ವಂಚಿಸಲಾಗಿದೆ. ಟೆಲಿಗ್ರಾಂನಲ್ಲಿ ನ್ಯೂ ಎಗ್‌ ಕಮ್ಯೂನಿಟಿ ಎಂಬ ಗ್ರೂಪ್‌ಗೆ ಸೇರಿದ್ದ ಶಿವಮೊಗ್ಗದ ವ್ಯಕ್ತಿಗೆ ಅಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಿ, ಮಾರಾಟ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಲಾಗಿತ್ತು. ಯು.ಪಿ.ಐ ಐಡಿ ನೀಡಿ ಹಣ ಹೂಡಿಕೆ ಮಾಡುವಂತೆ ಸೂಚಿಸಲಾಗಿತ್ತು. ಅಧಿಕ ಲಾಭಾಂಶದ ಆಸೆಗಾಗಿ ಶಿವಮೊಗ್ಗದ ವ್ಯಕ್ತಿ ಹಣ ಹೂಡಿಕೆ ಕಳುಹಿಸಿದ್ದಾಗಿ ಎಂದು … Read more

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಶಿವಮೊಗ್ಗದಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

crime name image

ಶಿವಮೊಗ್ಗ: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಇಬ್ಬರು ಯುವಕರ ಮೇಲೆ ಹಲ್ಲೆಯಾಗಿದೆ (Attack). ಗಾಯಾಳುಗಳು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಕೊಂಡಿದ್ದಾರೆ. ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಆರ್‌ಸಿಬಿ ಪಂದ್ಯ ಗೆಲುತ್ತಿದ್ದಂತೆ ಹೊಸಮನೆ ಬಡಾವಣೆಯಲ್ಲಿ ರಾತ್ರಿ ಯುವಕರು ಡೊಳ್ಳು ಹೊಡೆಸಿ ಡಾನ್ಸ್‌ ಮಾಡುತ್ತಿದ್ದರು. ಪಕ್ಕದಲ್ಲಿ ನಿಂತು ಇದನ್ನು ವೀಕ್ಷಿಸುತ್ತಿದ್ದ ಗಣೇಶ, ಅವರ ಸಹೋದರ ಪ್ರಸನ್ನ ಮತ್ತು ಸ್ನೇಹಿತ ಶಿವು ಮೇಲೆ ಹಲ್ಲೆಯಾಗಿದೆ. ನೃತ್ಯ ಮಾಡುತ್ತಿದ್ದರ ಪೈಕಿ ಒಬ್ಬಾತ ಗಣೇಶ್‌ ತಲೆಗೆ ಹೊಡೆದಿದ್ದಾನೆ. ಸಹೋದರ ಪ್ರಸನ್ನನ … Read more

ಶಿವಮೊಗ್ಗದ ಹವಾಮಾನ ವರದಿ | 6 ಜೂನ್‌ 2025 | ಮುಂದುವರೆದ ಥಂಡಿ, ಇವತ್ತು ಎಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದೆ. ಥಂಡಿ ಮುಂದುವರೆದಿದೆ. ತಾಪಮಾನ ಇಳಿಕೆಯಾಗಿದ್ದು ರಾತ್ರಿ ವೇಳೆ ಚಳಿ ಶುರುವಾಗಿದೆ. (Weather Report) ಇವತ್ತು ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ಬಿಸಿಲಿನ ಪ್ರಮಾಣವು ಹೆಚ್ಚಿರಲಿದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಇದನ್ನೂ ಓದಿ » ದಿನ ಭವಿಷ್ಯ | 6 … Read more

ದಿನ ಭವಿಷ್ಯ | 6 ಜೂನ್‌ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

DINA-BHAVISHYA

DINA BHAVISHYA ಮೇಷ ಇಂದು ನೀವು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವಿರಿ. ನಿಮ್ಮ ನಿರ್ಧಾರಗಳು ಫಲಪ್ರದವಾಗುತ್ತವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗುತ್ತದೆ. ಆರ್ಥಿಕವಾಗಿ ಸ್ವಲ್ಪ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಗಮನ ಕೊಡಿ. ಶುಭ ಬಣ್ಣ: ಬಿಳಿ ವೃಷಭ ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ. ಹೂಡಿಕೆ ಮಾಡಲು ಇದು ಸೂಕ್ತ ಸಮಯ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕೆಲಸದಲ್ಲಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಅನಗತ್ಯ ವಾದಗಳಿಂದ ದೂರವಿರಿ. ಶುಭ ಬಣ್ಣ: ತಿಳಿ ಗುಲಾಬಿ … Read more

ಅಡಿಕೆ ಧಾರಣೆ | 5 ಜೂನ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 18205 33330 ಬೆಟ್ಟೆ 50772 59019 ರಾಶಿ 46366 59099 ಸರಕು 51100 96996 ಸಾಗರ ಮಾರುಕಟ್ಟೆ ಕೆಂಪುಗೋಟು 15099 28699 ಕೋಕ 7299 25011 ಚಾಲಿ 21300 39009 ಬಿಳೆ ಗೋಟು 8099 26299 ರಾಶಿ 20899 57599 ಸಿಪ್ಪೆಗೋಟು 5699 18289 ಇದನ್ನೂ ಓದಿ » ಆಪರೇಷನ್‌ ಸಿಂಧೂರದಲ್ಲಿ ಭಾಗವಹಿಸಿದ್ದ ಯೋಧನಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ … Read more

ಶಿವಮೊಗ್ಗ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಒಬ್ಬ ಸಾವು, ಹೇಗಾಯ್ತು ಘಟನೆ?

Bus-Mishap-at-LLR-Road-in-Shimoga-Vivek-Travels.

ಶಿವಮೊಗ್ಗ: ಖಾಸಗಿ ಬಸ್‌ (Bus) ಮತ್ತು ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ನಗರದ ಎಲ್‌ಎಲ್‌ಆರ್‌ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಪ್ರದೀಪ್‌ ಎಂಬುವವರು ಸಾವನ್ನಪ್ಪಿದ್ದಾರೆ. ಹೇಗಾಯ್ತು ಘಟನೆ? ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಖಾಸಗಿ ಬಸ್‌ ರಾಯಲ್‌ ಆರ್ಕಿಡ್‌ ಹೊಟೇಲ್‌ ಎದುರು ಬಿ.ಹೆಚ್‌.ರಸ್ತೆಯಿಂದ ಎಲ್‌ಎಲ್‌ಆರ್‌ ರಸ್ತೆಯಲ್ಲಿ ತೆರಳುತ್ತಿತ್ತು. ಈ ಸಂದರ್ಭ ಗೋಪಿ ಸರ್ಕಲ್‌ ಕಡೆಯಿಂದ ಸವರ್‌ಲೈನ್‌ ರಸ್ತೆಯಲ್ಲಿ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಬಸ್ಸು ಪಕ್ಕದ ಕಟ್ಟಡಕ್ಕೆ … Read more

ದಿನ ಭವಿಷ್ಯ | 5 ಜೂನ್‌ 2025 | ಇವತ್ತು ಈ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಿದೆ, ಉಳಿದ ರಾಶಿಗೆ ಹೇಗಿದೆ?

DINA-BHAVISHYA

DINA BHAVISHYA ಮೇಷ ಇಂದು ನೀವು ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆಯಿದೆ. ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರ್ಥಿಕವಾಗಿ ಉತ್ತಮ ದಿನ. ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶುಭ ಬಣ್ಣ: ಕೆಂಪು ವೃಷಭ ನಿಮ್ಮ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ, ಅನಾವಶ್ಯಕ ಖರ್ಚುಗಳನ್ನು ತಪ್ಪಿಸಿ. ಪ್ರೀತಿಪಾತ್ರರೊಂದಿಗೆ ಉತ್ತಮ ಬಾಂಧವ್ಯ ಹೆಚ್ಚುತ್ತದೆ. ವ್ಯಾಪಾರದಲ್ಲಿ ಲಾಭ ನಿರೀಕ್ಷಿಸಬಹುದು. ಶುಭ ಬಣ್ಣ: ಬಿಳಿ ಮಿಥುನ ಸೃಜನಾತ್ಮಕ ಕೆಲಸಗಳಲ್ಲಿ … Read more

ಲೋಕಾಯುಕ್ತರ ದಿಢೀರ್‌ ಭೇಟಿ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಡತಗಳ ಪರಿಶೀಲನೆ

Lokayukta-visit-to-shimoga-palike

ಶಿವಮೊಗ್ಗ: ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ಪಾಲಿಕೆಯ ಕಂದಾಯ ವಿಭಾಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದರು. ಇಂದು ಸಂಜೆ ವೇಳೆಗೆ ಲೋಕಾಯುಕ್ತ ಎಸ್‌.ಪಿ. ನೇತೃತ್ವದ ನಿಯೋಗ ಪಾಲಿಕೆಯ ಕಂದಾಯ ವಿಭಾಗಕ್ಕೆ ದಿಢೀರ್‌ ಭೇಟಿ ನೀಡಿತು. ಕಂದಾಯ ವಿಭಾಗದಲ್ಲಿ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಲೋಕಾಯುಕ್ತರ ಭೇಟಿ ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಕಮಿಷನರ್‌ ಕವಿತಾ ಯೋಗಪ್ಪನವರ್‌ ಕೂಡ ಕಂದಾಯ ವಿಭಾಗಕ್ಕೆ ದೌಡಾಯಿಸಿದರು. ಸಂಜೆ 5.30ರವರೆಗೆ ಕಂದಾಯ ವಿಭಾಗದಲ್ಲಿ ಪರಿಶೀಲನೆ ನಡೆಸಿದ … Read more