ಉಂಬ್ಳೆಬೈಲು ಬಳಿ ಬೊಲೇರೋ ಪಿಕಪ್‌ ವಾಹನ ಮುಂಭಾಗ ಜಖಂ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

Tractor-and-Bolero-mishap-near-umblebyle-and-lingapura.

ಶಿವಮೊಗ್ಗ: ಉಂಬ್ಳೆಬೈಲು ಲಿಂಗಾಪುರ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಾಕ್ಟರ್ (tractor) ಅಪಘಾತ ಎಸಗಿದೆ. ಫೆಬ್ರವರಿ 17ರ ಬೆಳಗ್ಗೆ ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಬೊಲೇರೋ ಪಿಕಪ್‌ ವಾಹನದ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭದ್ರಾವತಿಯ ಸೋಮನಾಥ ಎಂಬುವವರು ಬೊಲೇರೋ ಪಿಕಪ್‌ ವಾಹನದಲ್ಲಿ ಎನ್.ಆರ್.ಪುರಕ್ಕೆ ಹೊರಟಿದ್ದರು. ಲಿಂಗಾಪುರ ಗ್ರಾಮದ ಬಳಿ ಸಾಗುತ್ತಿದ್ದಾಗ, ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಚಾಲಕ ಅತಿ ವೇಗವಾಗಿ ಚಾಲನೆ ಮಾಡುತ್ತಾ ಟ್ರೈಲರ್‌ನಿಂದ ಬುಲೇರೋ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿಯ ರಭಸಕ್ಕೆ ಬುಲೇರೋ ವಾಹನದ ಮುಂಭಾಗ … Read more

ಕ್ಯಾಂಟರ್‌, ಕಾರು ಮುಖಾಮುಖಿ ಡಿಕ್ಕಿ, ಸಹೋದ್ಯೋಗಿಗಳು ಸ್ಥಳದಲ್ಲೇ ಸಾವು

Car-and-cantar-collision-at-sagara.

ಆನಂದಪುರಂ: ಸಮೀಪದ ಉಳ್ಳೂರಿನ ಮುಂಡಿಗೆಮಟ್ಟಿ ಕ್ರಾಸ್ ಬಳಿ ಸೋಮವಾರ ಕ್ಯಾಂಟ‌ರ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ (collision) ಕಾರಿನಲ್ಲಿದ್ದ ಸಾಗರದ ಸಹಕಾರ ಸಂಘದ ಇಬ್ಬರು ಸಹೋದ್ಯೋಗಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಗರ ತಾಲೂಕು ತಡಗಳ ಗ್ರಾಮದ ವೀರೇಶ ಗೌಡ (25) ಮತ್ತು ಸೊರಬ ತಾಲೂಕು ಮಳಲಗದ್ದೆ ಗ್ರಾಮದ ಪವಿತ್ರ (25) ಮೃತಪಟ್ಟವರು. ಆನಂದಪುರಂ ಕಡೆಯಿಂದ ಸಾಗರಕ್ಕೆ ಹೋಗುತ್ತಿದ್ದ ಕಾರು ಮತ್ತು ಸಾಗರ ಕಡೆಯಿಂದ ಆನಂದಪುರಂ ಕಡೆ ಬರುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more