ಉಂಬ್ಳೆಬೈಲು ಬಳಿ ಬೊಲೇರೋ ಪಿಕಪ್‌ ವಾಹನ ಮುಂಭಾಗ ಜಖಂ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

Published On : ಫೆಬ್ರವರಿ 20, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಉಂಬ್ಳೆಬೈಲು ಲಿಂಗಾಪುರ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಾಕ್ಟರ್ (tractor) ಅಪಘಾತ ಎಸಗಿದೆ. ಫೆಬ್ರವರಿ 17ರ ಬೆಳಗ್ಗೆ ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಬೊಲೇರೋ ಪಿಕಪ್‌ ವಾಹನದ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಭದ್ರಾವತಿಯ ಸೋಮನಾಥ ಎಂಬುವವರು ಬೊಲೇರೋ ಪಿಕಪ್‌ ವಾಹನದಲ್ಲಿ ಎನ್.ಆರ್.ಪುರಕ್ಕೆ ಹೊರಟಿದ್ದರು. ಲಿಂಗಾಪುರ ಗ್ರಾಮದ ಬಳಿ ಸಾಗುತ್ತಿದ್ದಾಗ, ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಚಾಲಕ ಅತಿ ವೇಗವಾಗಿ ಚಾಲನೆ ಮಾಡುತ್ತಾ ಟ್ರೈಲರ್‌ನಿಂದ ಬುಲೇರೋ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿಯ ರಭಸಕ್ಕೆ ಬುಲೇರೋ ವಾಹನದ ಮುಂಭಾಗ ಜಖಂಗೊಂಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Tractor-and-Bolero-mishap-near-umblebyle-and-lingapura.

ಅಪಘಾತವೆಸಗಿದ ಬಳಿಕ ಟ್ರಾಕ್ಟರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಸೋಮನಾಥ ಅವರು ಅಲ್ಲಿಗೆ ಬಂದ ಬೈಕ್ ಸವಾರನ ಸಹಾಯದಿಂದ ಬೆನ್ನಟ್ಟಿ ಟ್ರಾಕ್ಟರ್ ತಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಬಾಡಿಗೆ ಬ್ಯಾಂಕ್‌ ಖಾತೆ ಕೇಸ್‌, ಶಿವಮೊಗ್ಗದಲ್ಲಿ ಮತ್ತಿಬ್ಬರು ಅರೆಸ್ಟ್‌, ಏನಿದು ಪ್ರಕರಣ?

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 20, 2026

Leave a Comment