ಆಗುಂಬೆ ಸಮೀಪ ಅಪಘಾತಕ್ಕೀಡಾದ ಕಾರಿನಲ್ಲಿ ಫೋನ್‌ಗಳು, ಪರ್ಸ್, ನಗದು ಕಳ್ಳತನ
ಆಗುಂಬೆ: ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮೊಬೈಲ್ ಫೋನ್‌ಗಳು (Smart Phones) ಮತ್ತು ಪರ್ಸ್ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಜ್ಮಾನ್ ಎಂಬುವವರು ಸಹೋದರನಿಗೆ ತೀರ್ಥಹಳ್ಳಿಯ ನಾಟಿ ವೈದ್ಯರೊಬ್ಬರ ಬಳಿ ಚಿಕಿತ್ಸೆಗೆ ಕರೆತರುತ್ತಿದ್ದರು. ಕೌರಿಹಕ್ಲುವಿನಲ್ಲಿ ಕಾರು ಅಪಘಾತಕ್ಕೀಡಾಗಿ, ಕಾರಿನಲ್ಲಿದ್ದವರನ್ನು ಆಂಬುಲೆನ್ಸ್‌ನಲ್ಲಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಬಳಿಕ ಬಂದು ಪರಿಶೀಲಿಸಿದಾಗ ಕಾರಿನಲ್ಲಿದ್ದ ₹1.17 ಲಕ್ಷದ ಐ ಫೋನ್, ₹30 ಸಾವಿರದ ಸ್ಯಾಮ್‌ಸಂಗ್ ಫೋನ್, ಪರ್ಸ್ ಮತ್ತು ಅದರೊಳಗಿದ್ದ … Read more