ಸೊರಬ ತಾಲೂಕಿನಲ್ಲಿ ಮರ ಕಡಿತಲೆಗೆ ಜಿಲ್ಲಾಧಿಕಾರಿಯಿಂದ ತಾತ್ಕಾಲಿಕ ನಿಷೇಧ

200520 Shimoga DC KB Shivakumar 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಆಗಸ್ಟ್ 2021 ಸೊರಬ ತಾಲೂಕಿನ ವ್ಯಾಪ್ತಿಯಲ್ಲಿ ಮಳೆ ಬೀಳುತ್ತಿರುವ ಸಂದರ್ಭ ಮತ್ತು ಮಳೆ ಬಿದ್ದ ನಂತರದ ಎರಡು ದಿನ ಭಾರಿ ವಾಹನಗಳ ಮೂಲಕ ಮರ, ನಾಟಾ ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಿಸಿದ್ದಾರೆ. ಆಗಸ್ಟ್ 16ರಿಂದ ಅಕ್ಟೋಬರ್ 31ರವರೆಗೆ ಈ ನಿರ್ಬಂಧವಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಾಗರ ಅರಣ್ಯ ವಿಭಾಗದ ಸೊರಬ ತಾಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಹಿಡುವಳಿ, ಖಾಸಗಿ, ಖಾನೇಷುಮಾರಿ ಜಮೀನಿನ ಪ್ರದೇಶದಲ್ಲಿರುವ ಮರಗಳನ್ನು … Read more

ಕೆರೆ ಏರಿ ಮೇಲೆ ಕಸ ಸುರಿದವರಿಂದಲೇ ಕಸ ತೆಗೆಸಿದ ಪೊಲೀಸರು

soraba anavatti graphics

ಶಿವಮೊಗ್ಗ ಲೈವ್.ಕಾಂ | SORABA NEWS | 23 ಆಗಸ್ಟ್ 2021 ಕೆರೆ ದಂಡೆ ಮೇಲೆ ಕಸ ಸುರಿದು ಹೋಗುತ್ತಿದ್ದವರಿಂದಲೇ ಪೊಲೀಸರು ಕಸ ತೆಗಿಸಿದ್ದಾರೆ. ಅಲ್ಲದೆ ಇದು ಪುನರಾವರ್ತನೆಯಾದರೆ ಹತ್ತು ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಸೊರಬ ತಾಲೂಕು ಆನವಟ್ಟಿಯ ಕುಬಟೂರಿನ ದೊಡ್ಡಕೆರೆ ಮತ್ತು ಆನವಟ್ಟಿ ತಾವರೆಕೆರೆ ದಂಡೆ ಮೇಲೆ ಕೆಲವು ಅಂಗಡಿ ಮಾಲೀಕರು, ಸಾರ್ವಜನಿಕರು ನಿತ್ಯ ಕಸ ಸುರಿಯುತ್ತಿದ್ದರು. ಭಾನುವಾರ ಕೆಲವರು ಕೆರೆ ಏರಿ ಮೇಲೆ ಕಸ ಸುರಿದು ಹೋಗುತ್ತಿದ್ದರು. ಇವರನ್ನು ತಡೆದ … Read more

ಕಾಂಗ್ರೆಸ್ ಸೇರ್ಪಡೆ ಬಳಿಕ ಶಿವಮೊಗ್ಗಕ್ಕೆ ಮೊದಲ ಭೇಟಿ, ಮಧು ಬಂಗಾರಪ್ಪಗೆ ಅದ್ಧೂರಿ ಸ್ವಾಗತ, ಎಂಆರ್‌ಎಸ್‌ನಿಂದ ಬೈಕ್ ರಾಲಿ

040821 Mahdu Bangarappa Welcome in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಆಗಸ್ಟ್ 2021 ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮೊದಲ ಬಾರಿ ಜಿಲ್ಲೆಗೆ ಆಗಮಿಸಿದ ಮಾಜಿ ಶಾಸಕ ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮೆರವಣಿಗೆ ಮಾಡಿದರು. ಭದ್ರಾವತಿ ಬೈಪಾಸ್ನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾಗತ ಕೋರಲಾಯಿತು. ಮಧು ಬಂಗಾರಪ್ಪ ಅವರಿಗೆ ಸನ್ಮಾನ ಮಾಡಿ ಶುಭ ಹಾರೈಸಲಾಯಿತು. ಇನ್ನು, ಮಲವಗೊಪ್ಪದ  ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾಂಗ್ರೆಸ್ ಕಾರ್ಯಕರ್ತರು, ಮಧು … Read more

ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಲಕ್ಷಾಂತರ ಮೌಲ್ಯದ ಶುಂಠಿ, ನಾಟ ಭಸ್ಮ

020821 Soraba Fire Incident Lakhs Of Rupees Loss 1

ಶಿವಮೊಗ್ಗ ಲೈವ್.ಕಾಂ | SORABA NEWS | 2 ಆಗಸ್ಟ್ 20210 ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಮನೆಯ ಪಕ್ಕದ ಗೋದಾಮಿನಲ್ಲಿ ಸಂಗ್ರಹಿಸಿಟ್ಟದ್ದ ಲಕ್ಷಾಂತರ ರೂ. ಮೌಲ್ಯದ ಒಣ ಶುಂಠಿ, ಭತ್ತ ಹಾಗೂ ನಾಟ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾದ ದುರ್ಘಟನೆ ತಾಲ್ಲೂಕಿನ ಆಗಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ವಾರಹಳ್ಳಿಯಲ್ಲಿ ನಡೆದಿದೆ. ದ್ವಾರಹಳ್ಳಿ ಗ್ರಾಮದ ವಕೀಲ ಶಿವಪ್ಪ ಅವರ ಮನೆಯ ಪಕ್ಕದಲ್ಲಿ ದಾಸ್ತಾನು ಇರಿಸಿದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಶಬ್ದ … Read more

ಮನೆಯಲ್ಲಿ ನೇಣು ಬಿಗಿದು ಪಿಯುಸಿ ವಿದ್ಯಾರ್ಥಿನಿ ಸಾವು

Suicide-Hanging-General

ಶಿವಮೊಗ್ಗ ಲೈವ್.ಕಾಂ | SORABA NEWS | 31 ಜುಲೈ 2021 ಹೊಟ್ಟೆನೋವು ತಾಳಲಾರದೆ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ. ನಾಗರಾಜ ಮರಡಿ ಅವರ ಪುತ್ರಿ ಸುಚಿತ್ರಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ದ್ವಿತೀಯ ವರ್ಷದ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಸುಚಿತ್ರಾಗೆ, ಕೆಲ ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಳ್ಳುತಿತ್ತು. ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು. ಆದರೆ ಹೊಟ್ಟೆನೋವು ಕಡಿಮೆಯಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಕುಟುಂಬದವರು ಹೊಲಕ್ಕೆ ಹೋದ ಸಂದರ್ಭ ಮನೆಯಲ್ಲಿಯೇ … Read more

ಪರೀಕ್ಷೆ ಭಯ, ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

Suicide-Hanging-General

ಶಿವಮೊಗ್ಗ ಲೈವ್.ಕಾಂ |SORABA NEWS | 28 ಜುಲೈ 2021 ಪರೀಕ್ಷೆ ಭೀತಿಯಿಂದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿತಿನ್ ದಾಸ್ (20) ಮೃತ ವಿದ್ಯಾರ್ಥಿ. ಬೆಂಗಳೂರಿನ ಕಾಲೇಜಿನಲ್ಲಿ ನಿತಿನ್ ದಾಸ್ ಬಿಇ ಪದವಿ ಅಧ್ಯಯನ ಮಾಡುತ್ತಿದ್ದ. ಲಾಕ್ ಡೌನ್ ಹಿನ್ನೆಲೆ ಸೊರಬ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿರುವ ಮನೆಗೆ ಬಂದಿದ್ದ. ಆನ್‍ಲೈನ್ ಮೂಲಕ ನಿತಿನ್ ದಾಸ್ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದ. 2ನೇ ವರ್ಷದ ಬಿಇ ಪರೀಕ್ಷೆ ಬರೆಯಬೇಕಿತ್ತು. ಆದರೆ ಪರೀಕ್ಷೆ ಕುರಿತು … Read more

ಲಕ್ಕವಳ್ಳಿಯ ಮೋಕ್ಷ ಮಂದಿರ ಸಂಸ್ಥಾನ ಮಠಕ್ಕೆ ಜಲದಿಗ್ಬಂಧನ, ಸ್ಥಳೀಯರಿಂದ ಸ್ವಾಮೀಜಿ ರಕ್ಷಣೆ

260721 Lakkavalli Jain Mutt Drowned in Water 1

ಶಿವಮೊಗ್ಗ ಲೈವ್.ಕಾಂ | SORABA NEWS | 26 ಜುಲೈ 2021 ತಾಲ್ಲೂಕಿನ ವರದಾ ನದಿಯ ಜಲಪ್ರಳಯದಿಂದ ಲಕ್ಕವಳ್ಳಿಯ ಜೈನರ ಪವಿತ್ರ ಕ್ಷೇತ್ರ ಮೋಕ್ಷ ಮಂದಿರ ಜೈನ ಮಠದ ಆವರಣ ಜಲದಿಗ್ಬಂದನವಾಗಿದ್ದು, ಮಠದ ಪೀಠಾಧಿಪತಿ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿನ ಲಕ್ಕವಳ್ಳಿಯ ಶ್ರೀ ಮೋಕ್ಷ ಮಂದಿರ ಸಂಸ್ಥಾನ ಜೈನ ಮಠವು ವರದಾ-ದಂಡಾವತಿ ಸಂಗಮ ಕ್ಷೇತ್ರದ ನದಿಯ ದಂಡೆಯ ಮೇಲಿದ್ದು, ಪ್ರತಿ ಬಾರಿ ನರೆ ಉಂಟಾದಾಗ ಮಠ ಮುಳುಗಡೆಯಾಗುತ್ತದೆ. ಕಳೆದೆರಡು ದಿನಗಳಿಂದ … Read more

24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 146 ಮಿ.ಮೀ ಮಳೆ, ಸಾಗರದಲ್ಲಿ ಹೆಚ್ಚು, ಭದ್ರಾವತಿ ಕಡಿಮೆ, ಎಲ್ಲೆಲ್ಲಿ ಎಷ್ಟಾಗಿದೆ?

180721 Rain At Shimoga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಪುಷ್ಯಾ ಮಳೆ ಜೋರಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಸರಾಸರಿ 146.91 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 57 ಮಿ.ಮೀ, ಭದ್ರಾವತಿ 50.20 ಮಿಮೀ, ತೀರ್ಥಹಳ್ಳಿ 171.80 ಮಿ.ಮೀ, ಸಾಗರ 228.60 ಮಿ.ಮೀ, ಶಿಕಾರಿಪುರ 120.20 ಮಿ.ಮೀ, ಸೊರಬ 190 ಮಿ.ಮೀ, ಹೊಸನಗರ 210.60 ಮಿ.ಮೀ ಮಳೆಯಾಗಿದೆ. ಈ ತಿಂಗಳಲ್ಲಿ ಇದೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ … Read more

ನಡುರಸ್ತೆಯಲ್ಲೆ ಹೆಂಡತಿಯ ಕತ್ತು ಸೀಳಿ ಕೊಲೆಗೆ ಯತ್ನಿಸಿದ ಪತಿ

200721 Murder Attempt By Husband 1

ಶಿವಮೊಗ್ಗ ಲೈವ್.ಕಾಂ | SORABA NEWS | 20 ಜುಲೈ 2021 ಕೌಟುಂಬಿಕ ಕಲಹದ ಹಿನ್ನೆಲೆ ನಡು ರಸ್ತೆಯಲ್ಲಿ ಗಂಡನೆ ಹೆಂಡತಿಯ ಕೊಲೆ ಮಾಡಲು ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡು, ಜೀವನ್ಮರಣ ಸ್ಥಿತಿಯಲ್ಲಿ ಇರುವ ಮಹಿಳೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಮೀಳಾ ಹಲ್ಲೆಗೀಡಾದ ಮಹಿಳೆ. ಈಕೆಯ ಪತಿ ತುಕಾರಾಮ ಹತ್ಯೆಗೆ ಯತ್ನಿಸಿದ್ದಾನೆ. ಸೊರಬ ಪಟ್ಟಣದ ಹಳೆ ಸೊರಬದ ಗೌರಿಕೆರೆ ಮಠದ ಬಳಿ ಮಧ್ಯಾಹ್ನ ಘಟನೆ ಸಂಭವಿಸಿದೆ. ಕತ್ತು ಕೊಯ್ಯಲು ಯತ್ನಿಸಿದ ಪತಿರಾಯ ಪ್ರಮೀಳಾಗೆ ಪತಿ ತುಕಾರಾಮ … Read more

‘ತೀರ್ಥಹಳ್ಳಿ, ಭದ್ರಾವತಿಯಂತೆ ಜಿಲ್ಲೆಯಾದ್ಯಂತ ಕಾಂಗ್ರೆಸ್​​ಗೆ ಅಧಿಕಾರ, ಮಧು ಬಂಗಾರಪ್ಪ ಸೇರ್ಪಡೆಯಿಂದ ಪಕ್ಷಕ್ಕೆ ಬಲ’

170721 R Prasanna Kumar MLC 1

ಶಿವಮೊಗ್ಗ ಲೈವ್.ಕಾಂ | ANAVATTI  NEWS | 17 ಜುಲೈ 2021 ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಯಾಗಲಿದೆ ಎಂದು ವಿಧಾನ ಪರಿಷತ್‍ ಸದಸ್ಯ ಆರ್. ಪ್ರಸನ್ನಕುಮಾರ್ ತಿಳಿಸಿದ್ದಾರೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಈ ಭಾಗದ ಪ್ರಮುಖ ನಾಯಕರಾಗಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ಬರಲಿದೆ ಎಂದು ತಿಳಿಸಿದರು. ತೀರ್ಥಹಳ್ಳಿ, ಭದ್ರಾವತಿ ಫಲಿತಾಂಶ ಸಾಕ್ಷಿ ಜಿಲ್ಲೆಯಲ್ಲಿ … Read more