ಜಾನುವಾರು ಮೈ ತೊಳೆಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಕೊನೆಯುಸಿರು

youth-missing-at-soraba.

SORABA NEWS, 18 OCTOBER 2024 : ಜಾನುವಾರ ಮೈ ತೊಳೆಯಲು ಹೋಗಿದ್ದ ಯುವಕ (Youth) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸೊರಬ ತಾಲೂಕು ಭೈರೆಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇಲ್ಲಿನ ಮಿಥುನ್‌ ಆರ್‌. ಪಾಟೀಲ್‌ (21) ಮೃತ ದುರ್ದೈವಿ. ಇಂದು ಬೆಳಗ್ಗೆ ಮಿಥುನ್‌ ಜಾನುವಾರುಗಳ ಮೈ ತೊಳೆಯಲು ಕೆರೆಗೆ ಹೋದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಕೊನೆ ಉಸಿರೆಳೆದಿದ್ದಾನೆ. ಮಿಥುನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದರು. ಘಟನೆ ಸಂಬಂಧ ಸೊರಬ ಪೊಲೀಸ್‌ ಠಾಣೆಯಲ್ಲಿ … Read more

ನಡುರಾತ್ರಿ ಮನೆಗೆ ಬಂದ ಕುಟುಂಬ, ಕೊಠಡಿಯಲ್ಲಿ ಅಡ್ಡಡ್ಡ ಬಿದ್ದಿತ್ತು ಬೀರು

crime name image

SORABA NEWS, 22 SEPTEMBER 2024 : ಕುಟುಂಬದವರೆಲ್ಲ ಈದ್‌ ಮಿಲಾದ್‌ ಮೆರವಣಿಗೆ ನೋಡಲು ತೆರಳಿದ್ದಾಗ ಮನೆಯ ಬಾಗಿಲಿನ ಚಿಲಕ ಮುರಿದು ಕಳ್ಳತನ ಮಾಡಲಾಗಿದೆ. ಕೊಠಡಿಯಲ್ಲಿದ್ದ (ROOM) ಬೀರುವನ್ನು ಅಡ್ಡಲಾಗಿ ಬೀಳಿಸಿ, ಬಾಗಿಲನ್ನು ಮೀಟಿ ತೆಗೆದು ಚಿನ್ನಾಭರಣ, ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಸೊರಬ ತಾಲೂಕು ಆನವಟ್ಟಿ ಸಮೀಪದ ತಲಗಡ್ಡೆ ಗ್ರಾಮದ ಮೊಹಮದ್‌ ಸಾದಿಕ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬೀರುವಿನಲ್ಲಿದ್ದ 70 ಸಾವಿರ ರೂ. ನಗದು, ಚಿನ್ನದ ಸರ, ಉಂಗುರುಗಳು ಸೇರಿ 75 ಸಾವಿರ ರೂ. ಮೌಲ್ಯದ … Read more

ಅಡಿಕೆ ತೋಟದಲ್ಲಿ ಔಷಧ ಸಿಂಪಡಿಸುವಾಗ ವಿದ್ಯುತ್‌ ಶಾಕ್‌, ಸ್ಥಳದಲ್ಲೇ ವ್ಯಕ್ತಿ ಸಾವು

Areca-Farm-Adike-tota-in-Shimoga

SORABA, 26 AUGUST 2024 : ತೋಟದಲ್ಲಿ ಅಡಿಕೆ (Areca) ಮರಗಳಿಗೆ ಔಷಧ ಸಿಂಪಡಿಸುವ ವೇಳೆ ವಿದ್ಯುತ್‌ ಪ್ರವಹಿಸಿ ರೈತ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೊರಬ ತಾಲೂಕು ಓಟೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅಡಿಕೆ ಮರಗಳ ಹಿಂಗಾರಕ್ಕೆ ಕೊಳೆ ಔಷಧ ಸಿಂಪಡಿಸುವಾಗ ವಿದ್ಯುತ್ ತಂತಿಗೆ ಕೊಳೆ ಔಷಧ ತಗುಲಿದೆ. ಅದರಿಂದ ವಿದ್ಯುತ್‌ ಪ್ರವಹಿಸಿ ಆನವಟ್ಟಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಕಾಂತ (35) ಮೃತಪಟ್ಟಿದ್ದಾರೆ. ತಂದೆ ಮತ್ತು ಅಣ್ಣನ ಜತೆ ಭಾನುವಾರ ಓಟೂರು ಗ್ರಾಮದ ವಿಶ್ವ ಎಂಬುವರ ತೋಟದ ಅಡಿಕೆಗೆ ಕೊಳೆ … Read more

ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಆಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲು ಪ್ರಕಟ

VIDHANA-SOUDHA-GENERAL-IMAGE.jpg

SHIMOGA, 5 AUGUST 2024 : ವಿವಿಧ ಜಿಲ್ಲೆಗಳ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲು (Reservation) ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ವಿವಿಧ ನಗರಸಭೆಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳಿಗು ಮೀಸಲು ಪ್ರಕಟಿಸಲಾಗಿದೆ. ಎಲ್ಲೆಲ್ಲಿಗೆ ಮೀಸಲಾತಿ ಪ್ರಕಟವಾಗಿದೆ? » ಭದ್ರಾವತಿ ನಗರಸಭೆ – ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲು. » ಸಾಗರ ನಗರಸಭೆ – ಅಧ್ಯಕ್ಷ ಸ್ಥಾನವನ್ನು ಜನರಲ್ ಮಹಿಳೆ, … Read more

ತಳಿರು ತೋರಣದಿಂದ ಅಲಂಕಾರ, ಪಟಾಕಿ ಸಿಡಿಸಿ ಸಂಭ್ರಮ, ಊರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

Retired-Army-man-shivamurthy-welcombed-by-villagers-at-soraba

SORABA, 5 AUGUST 2024 : 22 ವರ್ಷ ಭಾರತೀಯ ಸೇನೆಯಲ್ಲಿ ಯೋಧರಾಗಿ (Soldier) ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಸೊರಬ ತಾಲೂಕು ಹೆಸರಿ ಗ್ರಾಮದ ಯೋಧ ಶಿವಮೂರ್ತಿ ಅವರನ್ನು ಗ್ರಾಮಸ್ಥರು ಭಾನುವಾರ ಅದ್ದೂರಿ‌‌ಯಾಗಿ ಸ್ವಾಗತಿಸಿದರು. ಯೋಧ ಶಿವಮೂರ್ತಿ ಆಗಮನದ ಹಿನ್ನೆಲೆ ಗ್ರಾಮಸ್ಥರು ಗ್ರಾಮವನ್ನು ತಳಿರು, ತೋರಣಗಳಿಂದ ಸಿಂಗರಿಸಿದ್ದರು. ಶಿವಮೂರ್ತಿ ಅವರು ಭಾನುವಾರ ಸಂಜೆ ಗ್ರಾಮಕ್ಕೆ ಬರುತ್ತಿದ್ದಂತೆ ಆರತಿ ಬೆಳಗಿ, ಸಿಡಿಮದ್ದು ಸಿಡಿಸಿ ಸಂಭ್ರಮಪಟ್ಟರು. ಶಿವಮೂರ್ತಿ ಅವರಿಂದ ಕೇಕ್‌ ಕತ್ತರಿಸಿ ಪರಿಸ್ಪರ ಹಂಚಿ ಖುಷಿ ಪಟ್ಟರು. ಎಲ್ಲೆಲ್ಲಿ ಸೇವೆ … Read more

BREAKING NEWS – ಸೊರಬ ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ

soraba breaking

SORABA, 26 JULY 2024 : ಸೊರಬ ತಾಲೂಕಿನಲ್ಲಿ ಭಾರಿ ಮಳೆ, ಗಾಳಿ ಮುಂದುವರೆದಿದೆ. ಈ ಹಿನ್ನೆಲೆ ಜು.27ರಂದು ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ (HOLIDAY) ಘೋಷಿಸಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ. ಈಗಾಗಲೇ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ ⇓ ಶಿವಮೊಗ್ಗ ಜಿಲ್ಲೆಗೆ ಜು.27ರಂದು ಆರೆಂಜ್‌ ಅಲರ್ಟ್‌, 3 ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ

BREAKING NEWS – ಸೊರಬದಲ್ಲಿಯು ಶಾಲೆ, ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

soraba breaking

SHIVAMOGGA LIVE NEWS | 17 JULY 2024 SORABA : ನಿರಂತರ ಮಳೆ ಹಿನ್ನೆಲೆ ಸೊರಬ ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ (Holiday) ಘೋಷಿ ಗ್ರೇಡ್‌ 2 ತಹಶೀಲ್ದಾರ್‌ ಆದೇಶ ಹೊರಡಿಸಿದ್ದಾರೆ. ಸೊರಬ ತಾಲೂಕಿನ ವ್ಯಾಪ್ತಿಯಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆ ಜು.18ರಂದು ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಎಲ್ಲಾ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ ⇓ ಸಾಗರ ತಾಲೂಕಿನ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ನಾಳೆ … Read more

ಡೆಂಗ್ಯುಗೆ ತುತ್ತಾಗಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವು

Sagara Government Hospital

SHIVAMOGGA LIVE NEWS | 22 JUNE 2024 SORABA : ಡೆಂಗ್ಯು (Dengue) ಜ್ವರದಿಂದ ಬಳಲುತ್ತಿದ್ದ ಸೊರಬ ತಾಲ್ಲೂಕಿನ ಶಿಗ್ಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಸಂತಾ (40) ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜ್ವರ, ವಾಂತಿ ಹಿನ್ನೆಲೆ ವಸಂತಾ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಡೆಂಗ್ಯು ಪತ್ತೆಯಾಗಿತ್ತು. ಶುಕ್ರವಾರ ಅವರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ – ರಾತ್ರೋರಾತ್ರಿ ಪೊಲೀಸ್‌ ಠಾಣೆಗೆ ಬಂದು ಪೊಲೀಸರ … Read more

ಚಂದ್ರಗುತ್ತಿ ದೇಗುಲಕ್ಕೆ ಸಾವಿರ ಸಾವಿರ ಭಕ್ತರು, ದೇವಿಗೆ ವಿಶೇಷ ಪೂಜೆ

-agi-hunnime-at-Chandragutti-temple-in-Soraba

SHIVAMOGGA LIVE NEWS | 22 JUNE 2024 SORABA : ಕಾರ ಹುಣ್ಣಿಮೆ ಪ್ರಯುಕ್ತ ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೊಡ್ಡ ಸಂಖ್ಯೆಯ ಭಕ್ತರು ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಸೊರಬ ತಾಲ್ಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು ಹಾಗೂ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮಳೆಯ ನಡುವೆಯೂ ಆಗಮಿಸಿ ರೇಣುಕಾಂಬಾ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. … Read more

ಅಡಿಕೆ ಕಳ್ಳ ಅರೆಸ್ಟ್‌, ಸಿಕ್ತು ಲಕ್ಷ ಲಕ್ಷ ನಗದು, ಒಂದು ವಾಹನ ಸೀಜ್‌

Areca-thief-arrested-in-soraba

SHIVAMOGGA LIVE NEWS | 3 JUNE 2024 SORABA : ಅಡಿಕೆ, ಗೇರುಬೀಜ ಕಳವು ಮಾಡಿದ್ದ ಆರೋಪಿಯನ್ನು (Thief) ಸೊರಬ ಪೊಲೀಸರು ಬಂಧಿಸಿದ್ದು ನಾಲ್ವರು ತಲೆಮರೆಸಿಕೊಂಡಿದ್ದಾರೆ. ಬಂಧಿತನಿಂದ 4.70 ಲಕ್ಷ ರೂ. ನಗದು, 8 ಲಕ್ಷ ರೂ. ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ. ಶಿಕಾರಿಪುರದ ಜಕ್ಕನಹಳ್ಳಿಯ ನಂದೀಶ್‌ ಬಂಧಿತ. ತಾಲೂಕಿನ ಮೂಡುಗೋಡು ಗ್ರಾಮದಲ್ಲಿ ಜಯಕುಮಾರ್ ಎಂಬುವರು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಕೆ, ಗೇರುಬೀಜ ಕಳ್ಳತನ ಆಗಿರುವ ಕುರಿತು ಮೇ 10ರಂದು ಸೊರಬ ಠಾಣೆಗೆ ದೂರು ನೀಡಿದ್ದರು. … Read more