ಸೂಳೆಬೈಲಿನ ಮನೆಯಲ್ಲಿ ಬೆಂಕಿ, ಸ್ಥಳೀಯರಲ್ಲಿ ಆತಂಕ, ತಪ್ಪಿದ ಅನಾಹುತ

251125-incident-at-sulebailu-in-Shivamogga-city.

ಶಿವಮೊಗ್ಗ: ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಗರದ ಸೂಳೆಬೈಲು ಬಡಾವಣೆಯ ಈದ್ಗಾ ನಗರದ 5ನೇ ಅಡ್ಡರಸ್ತೆಯ ಅಮ್ರೀನ್‌ ತಾಜ್‌ ಎಂಬುವವರ ಮನೆಯಲ್ಲಿ ಸಂಜೆ ವೇಳೆಗೆ ದಟ್ಟ ಹೊಗೆ ಆವರಿಸಿತ್ತು. ಸ್ವಲ್ಪ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್‌ ದೊಡ್ಡ ಹಾನಿ ತಪ್ಪಿದಂತಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತುಂಗಾ ನಗರ ಪೊಲೀಸ್‌ … Read more

ಮನೆಯಲ್ಲಿ ನೇಣು ಬಿಗಿದು ಯುವಕ ಕೊನೆಯುಸಿರು

crime name image

SHIMOGA NEWS, 16 NOVEMBER 2024 : ಸೂಳೆಬೈಲ್‌ನ ಕುಂಚೆಟಗೇರಿಯ ಮನೆಯಲ್ಲಿ ವ್ಯಕ್ತಿಯೊಬ್ಬ (Youth) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಂಚೆಟಗೇರಿಯ ವಿನಯ್‌ಕುಮಾರ್(33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಸರ್ಕಾರಿ ಆಸ್ಪತ್ರೆಯ ತೊಟ್ಟಿಗೆ ಬಿದ್ದು ಬಾಲಕ ಸಾವು

ಶಿವಮೊಗ್ಗದ ಸೂಳಬೈಲಿನಲ್ಲಿ ಪೊಲೀಸರ ದಾಳಿ, ಹೊಳಲೂರಿನ ‘ಸಾಂಬಾ’ ಅರೆಸ್ಟ್‌

shimoga-cen-police-arrest-one-at-sulebailu-in-the-city

SHIVAMOGGA LIVE NEWS | 18 AUGUST 2023 SHIMOGA : ನಗರದ ಸೂಳೆಬೈಲು ಸಮೀಪ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಸಿಇಎನ್‌ ಠಾಣೆ ಪೊಲೀಸರು ದಾಳಿ (Police Raid) ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ – ರಾತ್ರೋರಾತ್ರಿ ಅಡಿಕೆ ಕಳ್ಳತನ ಮಾಡುತ್ತಿದ್ದವರನ್ನು ಬೆನ್ನಟ್ಟಿ ಹಿಡಿದ ಗ್ರಾಮಸ್ಥರು ಸೂಳೆಬೈಲಿನ ಪುಟ್ಟಪ್ಪ ಕ್ಯಾಂಪ್‌ನಲ್ಲಿ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ದಾಳಿ (Police Raid) … Read more

ಸದ್ಯ ಸೂಳೆಬೈಲು ಶಾಂತ, ಹೇಗಿದೆ ಬಂದೋಬಸ್ತ್? ಇಲ್ಲಿ ಹೊಸ ಪೊಲೀಸ್ ಠಾಣೆ ಸ್ಥಾಪನೆಯಾಗುತ್ತಾ?

Car-Glass-break-at-Sulebailu-in-Shimoga-City

SHIVAMOGGA LIVE NEWS | CRIME | 10 ಮೇ 2022 ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರೆದಿದೆ. ಮೂರು ದಿನದ ಅಂತರದಲ್ಲಿ ನಾಲ್ಕು ಕಾರುಗಳ ಗಾಜು ಒಡೆಯಲಾಗಿದೆ. ಇದರಿಂದ ನಗರದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗ ಭೀತಿ ಎದುರಾಗಿದೆ. ಹಾಗಾಗಿ ಬಡಾವಣೆಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. ಘಟನೆ 1 : ಮೇ 6ರಂದು ರಾತ್ರಿ ಶಿವಮೊಗ್ಗದಿಂದ ಮತ್ತೂರು ಗ್ರಾಮಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ರಾಡ್’ನಿಂದ ದಾಳಿ ಮಾಡಲಾಗಿತ್ತು. ಇದರಿಂದ ಸೂಳೆಬೈಲು ವ್ಯಾಪ್ತಿಯಲ್ಲಿ ಬಿಗುವಿನ … Read more

ಸೂಳೆಬೈಲಿನಲ್ಲಿ ಕಾರು ಗ್ಲಾಸ್ ಒಡೆದ ಕೇಸ್, ಐವರು ಅರೆಸ್ಟ್, ಕೃತ್ಯಕ್ಕೆ ಮೊದಲೇ ನಡೆದಿತ್ತಾ ಸಂಚು?

Car-Glass-break-at-Sulebailu-in-Shimoga-City

SHIVAMOGGA LIVE NEWS | CAR ATTACK | 10 ಮೇ 2022 ಸೂಳೆಬೈಲಿನಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಸಂಚು ರೂಪಿಸಿಯೆ ಕಾರಿನ ಗಾಜು ಒಡೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ‘ಊರುಗಡೂರು ಮುಖ್ಯ ರಸ್ತೆಯಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಕೃತ್ಯ ಎಸಗಿದ ಇಬ್ಬರು ಮತ್ತು ಕೃತ್ಯಕ್ಕೂ ಮೊದಲು ಅವರೊಂದಿಗೆ ಮದ್ಯ ಸೇವಿಸಿದ್ದ ಇನ್ನೂ ಮೂವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. … Read more

ಕಾರಿನ ಮೇಲೆ ದಾಳಿ ಬೆನ್ನಿಗೆ ಸೂಳೆಬೈಲಿನಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ

Stone-Pelting-on-House-in-Shimoga-Sulebailu

SHIVAMOGGA LIVE NEWS | STONE PELTING | 09 ಮೇ 2022 ಕಾರಿನ ಗಾಜು ಒಡೆದ ಪ್ರಕರಣದ ಬೆನ್ನಿಗೆ ಶಿವಮೊಗ್ಗದ ಸೂಳೆಬೈಲಿನ ಹಲವು ಮನೆಗಳ ಮೇಲೆ ಕಲ್ಲು ತೂರಲಾಗಿದೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಮನೆಗಳ ಗಾಜು ಪುಡಿ ಪುಡಿಯಾಗಿದೆ. ಸೂಳೆಬೈಲು ಸಮೀಪದ ಇಂದಿರಾನಗರದ ತೀರ್ಥಪ್ಪನ ಕ್ಯಾಂಪ್ ನಿವಾಸಿ ಹಫೀಜ್ ಉಲ್ಲಾ (21) ಎಂಬುವವರ ಮೇಲೆ ಗುಂಪೊಂದು ದಾಳಿ ನಡೆಸಿದೆ. ಅವರ ಮಾವನ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದು ಆರೋಪಿಸಲಾಗಿದೆ. ಘಟನೆ … Read more

ಶಿವಮೊಗ್ಗದಲ್ಲಿ ಕಾರಿನ ಮೇಲೆ ಕಲ್ಲು ತೂರಾಟ, ಗ್ಲಾಸ್ ಪೀಸ್, ಪೀಸ್, ಬಿಗುವಿನ ವಾತಾವರಣ

Car-Glass-break-at-Sulebailu-in-Shimoga-City

SHIVAMOGGA LIVE NEWS | STONE PELTING| 06 ಮೇ 2022 ಶಿವಮೊಗ್ಗದ ಸೂಳೆಬೈಲು ಸಮೀಪದ ಇಂದಿರಾ ನಗರದಲ್ಲಿ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಕಾರಿನ ಗಾಜು ಪುಡಿಯಾಗಿದೆ. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಜನ ಗುಂಪುಗೂಡಿದರು. ಹಾಗಾಗಿ ಸೂಳೆಬೈಲಿನಲ್ಲಿ ಗೊಂದಲ ಸೃಷ್ಟಿಯಾಯಿತು. ಕೂಡಲೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಏನಿದು ಪ್ರಕರಣ? ಕಾರು ಶಿವಮೊಗ್ಗದಿಂದ ಮತ್ತೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಹಿಂಬದಿಯಿಂದ ಕಲ್ಲು … Read more