THIRTHAHALLI | ಮುಖ್ಯರಸ್ತೆಯಲ್ಲೇ ನಾಲ್ಕು ಲಕ್ಷ ರೂ. ಅಪಹರಣ, ಪೊಲೀಸ್ ಜಾಗೃತಿಯ ಮರುದಿನವೇ ಅವಾಂತರ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI | 27 ನವೆಂಬರ್ 2019 ಆಗುಂಬೆ ರಸ್ತೆಯಲ್ಲಿರುವ ಹಾರ್ಡ್‌ವೇರ್ ಅಂಗಡಿಯೊಂದರ ಸಮೀಪ ಬೈಕ್‌ನಲ್ಲಿ ಇಟ್ಟಿದ್ದ 4 ಲಕ್ಷ ರೂ. ಹಣವನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪಹರಿಸಿದ್ದಾರೆ. ಮಲೆನಾಡು ಕ್ಲಬ್‌ನ ಮ್ಯಾನೇಜರ್ ಶರತ್‌ ಬ್ಯಾಂಕ್‌ನಿಂದ ಡ್ರಾ ಮಾಡಿ ತಂದಿದ್ದ ಹಣವನ್ನು ತಮ್ಮ ಬೈಕ್‌ನ ಸೈಡ್ ಬ್ಯಾಗಿನಲ್ಲಿ ಇಟ್ಟು ಹಾರ್ಡ್‌ವೇರ್ ಅಂಗಡಿಗೆ ಹೋಗಿದ್ದಾರೆ. ಇವರನ್ನೇ ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದಿದ್ದ ಇಬ್ಬರಲ್ಲಿ ಒಬ್ಬ ಬೈಕ್‌ನಿಂದ ಇಳಿದು ಹಣದ ಬ್ಯಾಗನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಕಳವು ಮಾಡುತ್ತಿದ್ದ ದೃಶ್ಯ … Read more

ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಮತ್ತೆ ಶುರುವಾಯ್ತು ಸರಗಳ್ಳರ ಹಾವಳಿ, ‘ಪಲ್ಸರ್ ಗ್ಯಾಂಗ್’ ಮೇಲೆ ಶಂಕೆ

041019 Chain Snatchers In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 5 ಅಕ್ಟೋಬರ್ 2019 ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ್ದ ‘ಪಲ್ಸರ್ ಗ್ಯಾಂಗ್’ ಶಿವಮೊಗ್ಗಕ್ಕು ಕಾಲಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಸಾಲು ಸಾಲು ಸರಗಳ್ಳತನವಾಗುತ್ತಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಎರಡು ದಿನದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಎಲ್ಲೆಲ್ಲಿ ಸರಗಳ್ಳತನವಾಗಿದೆ? ದಿನಾಂಕ : 4 ಅಕ್ಟೋಬರ್ 2019 ಸ್ಥಳ : ಭದ್ರಾವತಿ ಬಾರಂದೂರು ಹಳ್ಳಿಕೆರೆ ರಸ್ತೆಯಲ್ಲಿ ನಿಂತಿದ್ದ ಅನುಸೂಯಮ್ಮ ಎಂಬುವವರ ಕೊರಳಲ್ಲಿದ್ದ ಸರವನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಬೈಕ್’ನಲ್ಲಿ ಬಂದಿದ್ದ ಇಬ್ಬರು ಈ … Read more

ಮನೆ ಬಾಗಿಲ ಬೀಗ ಒಡೆದು, ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಬಾಟಲಿ ಕದ್ದ ಕಳ್ಳ..!

theft case general image

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 21 ಸೆಪ್ಟೆಂಬರ್ 2019 ಸಾಗರ ತಾಲೂಕಿನ ಬಚ್ಚಗಾರ ಗ್ರಾಮದ ಮನೆಯೊಂದರಲ್ಲಿ ಕಳ್ಳನಿಗೆ ಒಡವೆ, ಹಣ ಸಿಗದ ಕಾರಣ ಮಾವಿನ ಮಿಡಿ ಉಪ್ಪಿನಕಾಯಿಯನ್ನೇ ಕದ್ದೊಯ್ದ ಕುತೂಹಲಕಾರಿ ಘಟನೆ ಗುರುವಾರ ರಾತ್ರಿ ನಡೆದಿದೆ. ಸಾಗರ-ಜೋಗಫಾಲ್ಸ್ ಮಾರ್ಗದಲ್ಲಿರುವ ಬಚ್ಚಗಾರು ಗ್ರಾಮದ ಶುಂಠಿ ಸತ್ಯನಾರಾಯಣಭಟ್ಟರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಏನೂ ಸಿಕ್ಕಿಲ್ಲ. ಆದರೆ, ಸುವಾಸನೆ ಬೀರುವ ಅಪ್ಪೆ ಮಾವಿನ ಮಿಡಿಯ ಉಪ್ಪಿನಕಾಯಿ ಕಂಡಿದೆ. ಅದರ ರುಚಿಯನ್ನು ಸವಿದ ಕಳ್ಳ ಬಾಟಲಿಯನ್ನೇ … Read more

ಒಂದೇ ಒಂದು ಬೈಕ್ ಕಳ್ಳತನ ಕೇಸಲ್ಲಿ ನಡೆಯಿತು ವಿಚಾರಣೆ, ಆರೋಪಿ ಬಾಯಿಬಿಟ್ಟದ್ದನ್ನು ಕೇಳಿ ಪೊಲೀಸರಿಗೆ ಆಯ್ತು ಶಾಕ್

police jeep

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 22 ಜುಲೈ 2019 ತನಿಕೆ ಆರಂಭವಾಗಿದ್ದು ಕಳುವಾಗಿದ್ದ ಒಂದು ಬೈಕ್ ಪತ್ತೆಗೆ. ಆದ  ರೆ ಭೇದಿಸಿದ್ದು ಹತ್ತು ಬೈಕ್ ಕಳ್ಳತನ ಕೇಸುಗಳನ್ನು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು, ವಿವಿಧ ಠಾಣೆಯಲ್ಲಿ ದಾಖಲಾಗಿರುವ ಹತ್ತು ಬೈಕ್ ಕಳವು ಪ್ರಕರಣದ ಆರೋಪಿಯನ್ನು ಬೈಕುಗಳ ಸಹಿತ ವಶಕ್ಕೆ ಪಡೆದಿದ್ದಾರೆ. ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ? ಬೆಳಲಕಟ್ಟೆ ಗ್ರಾಮದ ಹಾಲೇಶಪ್ಪ ಎಂಬುವವರು ಮೇಲಿನಹನಸವಾಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ದಿಢೀರ್ ನಾಪತ್ತೆಯಾಗಿತ್ತು. ಈ ಕುರಿತು ಗ್ರಾಮಾಂತರ … Read more

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ಮೆಷಿನ್ ಒಡೆದು ಹಣ ದೋಚಲು ಯತ್ನ

ಶಿವಮೊಗ್ಗ ಲೈವ್.ಕಾಂ | 01 ಏಪ್ರಿಲ್ 2019 ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ದೋಚಲು ವಿಫಲ ಯತ್ನ ನಡೆದಿದೆ. ಎಟಿಎಂ ಯಂತ್ರವನ್ನು ಹಾನಿಗೊಳಿಸಿರುವ ಕಳ್ಳರು, ತಮ್ಮ ಪ್ರಯತ್ನ ಕೈಗೊಡದೆ ಬರಿಗೈಯಲ್ಲಿ ತೆರಳಿದ್ದಾರೆ. ಹೊಸ ಸಿದ್ದಾಪುರ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಕಳ್ಳರು ನುಗ್ಗಿದ್ದಾರೆ. ಎಟಿಎಂ ಮೆಷಿನ್ ಒಡೆದು, ಹಣ ದೋಚಲು ಯತ್ನಿಸಿದ್ದಾರೆ. ಇದರಿಂದ ಎಟಿಎಂ ಮೆಷಿನ್’ಗೆ ಹಾನಿಯಾಗಿದೆ. ಆದರೆ ಕಳ್ಳರಿಗೆ ಹಣ ದೋಚಲು ಸಾದ್ಯವಾಗಿಲ್ಲ. ಹಾಗಾಗಿ ಬರಿಗೈಯಲ್ಲಿ ತೆರಳಿದ್ದಾರೆ. ನ್ಯೂಟೌನ್ ಪೊಲೀಸ್ … Read more