ತುಮಿಳುನಾಡಿನಿಂದ ಬಂದ ಲಾರಿ ಮೇಲೆ ಶಿವಮೊಗ್ಗ DySP ನೇತೃತ್ವದಲ್ಲಿ ದಾಳಿ, ಲಕ್ಷ ಲಕ್ಷದ ವಸ್ತುಗಳು ಸೀಜ್
ಶಿವಮೊಗ್ಗ: ಸಾರಿಗೆ ಅಧಿಕಾರಿಗಳಿಂದ ಪರವಾನಗಿ ಪಡೆಯದೆ, ಸುರಕ್ಷಿತ ಕ್ರಮ ಕೈಗೊಳ್ಳದೆ ಪಟಾಕಿ ಸಾಗಿಸುತ್ತಿದ್ದ ಲಾರಿಯನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ₹4,15,741 ಮೌಲ್ಯದ ಪಟಾಕಿ ಜಫ್ತಿ ಮಾಡಲಾಗಿದೆ. ತಮಿಳುನಾಡಿನ ಶಿವಾಕಾಶಿಯಿಂದ ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗೋಡೋನ್‌ಗಳಿಗೆ ಪಟಾಕಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ವಿರೂಪಿನಕೊಪ್ಪ ಬಳಿ ದಾಳಿ ನಡೆಸಿದ ಪೊಲೀಸರು, ದಾಖಲೆಗಳ ಪರಿಶೀಲನೆ ನಡೆಸಿದರು. ಸ್ಪೋಟಕ ವಸ್ತುಗಳ ಸಾಗಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ಲಾರಿಯಲ್ಲಿ ಅಗ್ನಿ ನಿರೋಧಕ ವಸ್ತುಗಳು … Read more