ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಹೇಳಿಕೆ, ‘ಇನ್ನೆರಡು ದಿನ ನಡೆಯಲಿದೆ ಮಹತ್ವದ ಸಭೆʼ

Chief-Minister-Basavaraja-Bommai-at-Tuduru-Village-in-Thirthahalli

SHIVAMOGGA LIVE NEWS | 7 APRIL 2023 SHIMOGA  : ಎರಡು ದಿನದ ಸಭೆ ಬಳಿಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ (Candidate List) ಬಿಡುಗಡೆ ಮಾಡಲಾಗುತ್ತದೆ. ಪ್ರಜಾಪ್ರಭುತ್ವ ರೀತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿಯಲ್ಲಿ ಕೆಳ ಹಂತದ ಕಾರ್ಯಕರ್ತರು, ಜನರ ಭಾನವೆಗಳನ್ನು ಅರಿತು ಅಭ್ಯರ್ಥಿಗಳ (Candidate List) ಆಯ್ಕೆ ಮಾಡಲಾಗುತ್ತಿದೆ. ಜಿಲ್ಲೆ, ತಾಲೂಕು ಹಂತದ ಸಮಿತಿಗಳ ಜೊತೆಗೆ … Read more

ಕಾರಿಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಲಾರಿ, ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್

Truck-Car-Accident-At-Tuduru-in-Thirthahalli

SHIVAMOGGA LIVE NEWS | ACCIDENT | 30 ಮೇ 2022 ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ನಡು ರಸ್ತೆಯಲ್ಲಿ ಲಾರಿ ಪಲ್ಟಿಯಾಗಿದ್ದು, ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಮದ ಬಳಿ ಘಟನೆ ಸಂಭವಿಸಿದೆ. ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾರು ಮತ್ತು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಲಾರಿ ನಡುವ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಲಾರಿ ಪಲ್ಟಿಯಾಗಿದೆ. ಕಾರಿನ ಮುಂಭಾಗ ಜಖಂ ಆಗಿದೆ. ಕಾರು … Read more

ಹೆದ್ದಾರಿಯಲ್ಲಿ ಹರಿಯುತ್ತಿದೆ ತುಂಗಾ ನದಿ ನೀರು, ಶಿವಮೊಗ್ಗ ತೀರ್ಥಹಳ್ಳಿ ಸಂಚಾರ ವ್ಯತ್ಯಯ

230721 Tunga River At Tuduru Road 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 23 ಜುಲೈ 2021 ತುಂಗಾ ನದಿ ಉಕ್ಕಿ ಹರಿದು ರಸ್ತೆ, ಗದ್ದೆಗಳು ಜಲಾವೃತವಾಗಿವೆ. ಇದರಿಂದ ಶಿವಮೊಗ್ಗ ತೀರ್ಥಹಳ್ಳಿ ನಡುವೆ ರಸ್ತೆ ಸಂಚಾರ ವ್ಯತ್ಯಯವಾಗಿದೆ. ತೀರ್ಥಹಳ್ಳಿಯ ತೂದೂರಿನಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಹೊಳೆ ನೀರು ರಸ್ತೆಗೆ ಬಂದಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ನೀರಿನ ರಭಸಕ್ಕೆ ರಸ್ತೆ ಪಕ್ಕದಲ್ಲಿ ನಿಂತಿವೆ. ಹಾಗಾಗಿ ಶಿವಮೊಗ್ಗ ತೀರ್ಥಹಳ್ಳಿ ನಡುವೆ ರಸ್ತೆ ಸಂಚಾರ ವ್ಯತ್ಯಯ ಉಂಟಾಗಿದೆ. ಅಕ್ಕಪಕ್ಕದ ಜಮೀನಿಗೂ ನೀರು ನುಗ್ಗಿದೆ. ನಾಟಿ ಮಾಡಿದ್ದ … Read more

ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿ ನಿವೃತ್ತ ಟೆಲಿಕಾಂ ಅಧಿಕಾರಿ ಸಾವು

Thirrthahalli Taluk Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 7 ಜುಲೈ 2021 ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿ ನಿವೃತ್ತ ಟೆಲಿಕಾಂ ಅಧಿಕಾರಿಯೊಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಮದ ಬಳಿಕ ಘಟನೆ ಸಂಭವಿಸಿದೆ. ಕೃಷ್ಣನ್ ಕುಟ್ಟಿ (65) ಮೃತರು. ತೂದೂರು ಗ್ರಾಮದಿಂದ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ಕಾರು ನಿಂತಿರುವುದು ಗೊತ್ತಾಗದೆ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡಿದ್ದ ಕೃಷ್ಣನ್ ಕುಟ್ಟಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. (ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ … Read more