‘ಮುಸ್ಲಿಂ ಏರಿಯಾಗಳು ಈ ದೇಶದ ಭಾಗವಲ್ಲವಾ? ಸಾವರ್ಕರ್ ಫೋಟೊ ಹಾಕೋಕೆ ನಿಷೇಧವಿದ್ಯಾ?’
ಶಿವಮೊಗ್ಗ| ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಸಾವರ್ಕರ್ ಭಾವಚಿತ್ರ ಹಾಕುವಂತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಸ್ಲಿಮರು ವಾಸಿಸುವ ಬಡಾವಣೆಗಳು ಈ ದೇಶದ ಭಾಗವಲ್ಲವೆ. ಸಾವರ್ಕರ್ ಅವರ ಫೋಟೊ ಹಾಕಲು ಈ ದೇಶದ ಯಾವುದಾದರೂ ಕಡೆಯಲ್ಲಿ ನಿಷೇಧ ವಿಧಿಸಲಾಗಿದೆಯೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸಿದ್ದರಾಮಯ್ಯ ಅವರು ಇಷ್ಟು ವರ್ಷ ರಾಜ್ಯ ನಡೆಸಿದ್ದಾರೆ. ಅವರು ಹೀಗೆ ಮಾತನಾಡುವುದು ಪ್ರಚೋದನೆ ಕೊಟ್ಟ ಹಾಗೆ ಆಗಲಿದೆ … Read more