ವಿನೋಬನಗರದಲ್ಲಿ ತರಕಾರಿ ಮಾರಾಟ ಮಾಡಿ ತೆರಳುತ್ತಿದ್ದ ಮಹಿಳೆಗೆ ಆಗಂತುಕನಿಂದ ಆಘಾತ, ಆಗಿದ್ದೇನು?
ಶಿವಮೊಗ್ಗ: ತರಕಾರಿ ಮಾರಾಟ ಮಾಡಿ ಮನೆಗೆ ನಡೆದು ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಸಿದ ಕಳ್ಳರು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಶಿವಮೊಗ್ಗ ವಿನೋಬನಗರ 16ನೇ ಕ್ರಾಸ ತಿರುವಿನಲ್ಲಿ ಘಟನೆ ಸಂಭವಿಸಿದೆ. ಹೊನ್ನಮ್ಮ ಎಂಬುವವರು ಎಪಿಎಂಸಿ ಮುಂಭಾಗ ಮರದ ಅಡಿ ಕುಳಿತು ತರಕಾರಿ ವ್ಯಾಪಾರ ಮಾಡುತ್ತಾರೆ. ಎಂದಿನಂತೆ ವ್ಯಾಪಾರ ಮುಗಿಸಿ ಮನೆಗೆ ಮಧ್ಯಾಹ್ನ ಮನೆಗೆ ನೆಡದು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಹೊನ್ನಮ್ಮ ಅವರ ಹಿಂದಿನಿಂದ ಬಂದ ಯುವಕನೊಬ್ಬ ಕೊರಳಲಿದ್ದ ಸರ ಕಸಿದುಕೊಂಡು ಓಡಿಹೋಗಿದ್ದಾನೆ. ಸ್ವಲ್ಪ ದೂರದಲ್ಲಿ ಮತ್ತೊಬ್ಬ … Read more