ಶಿಕಾರಿಪುರದ ಗ್ರಾಮೀಣ ಭಾಗದಲ್ಲೂ ಕರೋನ ಅಬ್ಬರ, ಯವ್ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟೆಷ್ಟಿದೆ ಪ್ರಕರಣ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021 ಶಿಕಾರಿಪುರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೂ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ 700ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಕರೋನ ಹರಡುವುದನ್ನು ತಡೆಯಲು ತಾಲೂಕಿನ ವಿವಿಧೆಡೆ ಲಾಕ್ ಡೌನ್ ಕೂಡ ಮಾಡಲಾಗಿದೆ. ಯಾವ್ಯಾವ ಹಳ್ಳಿಯಲ್ಲಿ ಎಷ್ಟಿದೆ ಕೇಸ್? ಶಿಕಾರಿಪುರ ತಾಲೂಕಿನ ಬಳ್ಳಿಗಾವಿ, ಅಂಬಾರಗೊಪ್ಪ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಹಿರೆಜಂಬೂರು, ಕಪ್ಪನಹಳ್ಳಿ, ನಲೆವಾಗಿಲು ವ್ಯಾಪ್ತಿಯಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣಗಳಿವೆ. ಚಿಕ್ಕಮಾಗಡಿ, ಹಾರೊಗೊಪ್ಪ, … Read more

ಹೊಸನಗರದಲ್ಲೂ ಹಳ್ಳಿ ಹಳ್ಳಿಗೆ ವ್ಯಾಪಿಸಿದ ಕರೋನ, ಯಾವ್ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟೆಷ್ಟಿದೆ ಪ್ರಕರಣ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021 ಹೊಸನಗರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲೂ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳಿವೆ. ಕರೋನ ಹರಡುವುದನ್ನು ತಡೆಯಲು ತಾಲೂಕಿನ ವಿವಿಧೆಡೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಯಾವ್ಯಾವ ಹಳ್ಳಿಯಲ್ಲಿ ಎಷ್ಟಿದೆ ಕೇಸ್? ಹೊಸನಗರ ತಾಲೂಕಿನ ಮಾರುತಿಪುರ, ರಿಪ್ಪನ್‍ಪೇಟೆಯಲ್ಲಿ 30ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಬಾಳೂರು, ಜೇನಿ, ಹೆದ್ದಾರಿಪುರ, ಎಂ.ಗುಡ್ಡೇಕೊಪ್ಪ, ಮುಂಬಾರು, ಮೂಡುಗುಪ್ಪ- ನಗರ ವ್ಯಾಪ್ತಿಯಲ್ಲಿ 20ಕ್ಕಿಂತಲೂ ಹೆಚ್ಚು ಕರೋನ … Read more

ಶಿವಮೊಗ್ಗ ತಾಲೂಕಿನ ಯಾವ್ಯಾವ ಹಳ್ಳಿಯಲ್ಲಿ ಎಷ್ಟೆಷ್ಟಿದೆ ಕರೋನ ಕೇಸ್? ಇಲ್ಲಿದೆ ಡಿಟೇಲ್ಸ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MAY 2021 ಕರೋನ ಈಗ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ಸಾವು, ನೋವು ಉಂಟು ಮಾಡುತ್ತಿದೆ. ಇದು ಜನರಲ್ಲಿ ಭೀತಿ ಹೆಚ್ಚಿಸಿದೆ. ಈ ನಡುವೆ ಕರೋನ ತಡೆಗೆ ಹಲವು ಕಡೆ ಸೀಲ್‍ ಡೌನ್ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 700 ಸಕ್ರಿಯ ಕರೋನ ಪ್ರಕರಣಗಳಿವೆ. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುವುದನ್ನು ನಿಯಂತ್ರಿಸಲು ಇನ್ನಿಲ್ಲದ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವ್ಯಾವ ಹಳ್ಳಿಯಲ್ಲಿ … Read more

ಮದುವೆ ವಾರ್ಷಿಕೋತ್ಸವದ ಮುನ್ನಾ ದಿನ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆ

Suicide-Hanging-General

ಶಿವಮೊಗ್ಗ ಲೈವ್.ಕಾಂ | AGUMBE NEWS | 25 MAY 2021 ಮದುವೆ ವಾರ್ಷಿಕೋತ್ಸವದ ಮುನ್ನಾ ದಿನವೇ ಗೃಹಿಣಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಂಡ ಮತ್ತು ಅತ್ತೆಯೆ ಹತ್ಯೆ ಮಾಡಿ, ನೇಣು ಬಿಗಿದಿದ್ದಾರೆ ಎಂದು ಗೃಹಿಣಿಯ ಪೋಷಕರು ಆರೋಪಿಸಿದ್ದಾರೆ. ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಮದ ಬಿಳಿಗಿರಿಯಲ್ಲಿ ಘಟನೆ ಸಂಭವಿಸಿದೆ. ಜ್ಯೋತಿ (25) ಮೃತಳು. ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಜ್ಯೋತಿ ಪೋಷಕರು ದೂರು ನೀಡಿದ್ದು, ವರದಕ್ಷಿಣೆ ಕಿರುಕುಳದ … Read more

ಕುಂಚೇನಹಳ್ಳಿಯಲ್ಲಿ ಶಿವಮೊಗ್ಗ ಸಂಸದರಿಂದ ಕರೋನ ಜಾಗೃತಿ

210521 Kunchenahalli MP Raghavendra Corona Jagruthi 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 MAY 2021 ಜಿಲ್ಲೆಯಲ್ಲಿ ಕೊರೋನ ಸೋಂಕು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಹಾಗೆಂದು ಮೈಮರೆಯದೆ ಸದಾ ಎಚ್ಚರವಾಗಿದ್ದು, ಕೊರೋನ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗ  ತಾಲೂಕಿನ ಕುಂಚೇನಹಳ್ಳಿಯ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕರೋನ ಜನಜಾಗೃತಿ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಮಾತನಾಡಿದರು. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ, ಅಧಿಕಾರಿಗಳು, ಜನಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ. ಈ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕಾರ … Read more

ಮಂಡಗದ್ದೆ ಹೋಬಳಿಯಲ್ಲಿ ಕಲ್ಲು, ಮಣ್ಣು ಮಿಶ್ರಿತ ಗೋಧಿ ವಿತರಣೆ, ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 27 MARCH 2021 ನ್ಯಾಯಬೆಲೆ ಅಂಗಡಿಯಲ್ಲಿ  ಕಲ್ಲು, ಮಣ್ಣು ಮಿಶ್ರಿತ ಗೋಧಿ ವಿತರಣೆ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಕಲಬೆರಕೆ ಗೋಧಿಯನ್ನು ತಾಲೂಕು ಕಚೇರಿಯಲ್ಲಿರುವ ಆಹಾರ ವಿಭಾಗದ ಶಿರಸ್ತೇದಾರ್‌ ಅವರಿಗೆ ಪ್ರದರ್ಶಿಸಿ ಕ್ರಮಕ್ಕೆ ಆಗ್ರಹಿಸಿದರು. ಮಂಡಗದ್ದೆ ಹೋಬಳಿ ಸಿಂಗನಬಿದಿರೆ ನ್ಯಾಯಬೆಲೆ ಅಂಗಡಿಯಲ್ಲಿ ಕಲಬೆರಕೆ ಗೋಧಿ ವಿತರಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಟಿ.ಟಿ.ತಿಮ್ಮಪ್ಪ  ಆರೋಪಿಸಿದ್ದಾರೆ. ತಾಲೂಕು ಪಂಚಾಯಿತಿಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪ್ರಕಾಶ್‌ ಅವರಿಗೂ … Read more

ಸಿಗಂದೂರು ಲಾಂಚ್ ಸಿಬ್ಬಂದಿಗಳ ಮೇಲೆ ಹೊಳೆಬಾಗಿಲಲ್ಲಿ ಪ್ರವಾಸಿಗರಿಂದ ಹಲ್ಲೆ

Sigandur-Launch-General-Image

ಶಿವಮೊಗ್ಗ ಲೈವ್.ಕಾಂ | SAGARA NEWS | 24  MARCH 2021 ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರು ಸಿಗಂದೂರು ಲಾಂಚ್ ಸಿಬ್ಬಂದಿಗಳ ಮೇಲೆ ಹೊಳೆಬಾಗಿಲಿನಲ್ಲಿ ಹಲ್ಲೆ ನಡೆಸಿದ್ದಾರೆ. ತುಮರಿ ಗ್ರಾಮ ಪಂಚಾಯಿತಿ ಹಂಗಾಮಿ ನೌಕರರಾದ ರಾಜೇಶ್ ಮತ್ತು ಶ್ರವಣ್ ಕುಮಾರ್‍ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ಕಾರಣವೇನು? ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಗೋವಿಂದ ಕೃಷ್ಣ ಮತ್ತು ರಾಜು ಎಂಬುವವರು ಕ್ಷುಲಕ ಕಾರಣಕ್ಕೆ ಗೇಟ್ ಸಿಬ್ಬಂದಿ ಜೊತೆ ಜಗಳವಾಡಿದ್ದಾರೆ. ಬೆಂಗಳೂರಿನಿಂದ ಬಂದಿದ್ದ ತಮ್ಮ ಟಿಟಿ ವಾಹನವನ್ನು ಲಾಂಚ್‍ಗೆ ಬಿಡಲಿಲ್ಲ  ಎಂಬ … Read more

THIRTHAHALLI | ರೈತರಿಂದ ಹಣ ವಸೂಲಿ, ಅಡಕೆ ಸಸಿಗಳಿಗೆ ಕೊಡಲಿ, ಅರಣ್ಯ ರಕ್ಷಕನ ಮನೆ ಬಾಗಿಲಲ್ಲೇ ಗ್ರಾಮಸ್ಥರ ಧರಣಿ

130221 Yadavatti Villagers Protest at Kannangi 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 13 FEBRUARY 2021 ಅಡಕೆ ಸಸಿಗಳನ್ನು ಕಡಿದ ಅರಣ್ಯ ರಕ್ಷಕನ ಮನೆ ಮುಂದೆಯೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಅತನನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಎರಡು ದಿನ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ ರೈತರು, ಅರಣ್ಯ ಇಲಾಖೆ ಅಧಿಕಾರಿಗಳ ಕಿರಕುಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಏನಿದು ಘಟನೆ? ಎಲ್ಲಿ ಪ್ರತಿಭಟನೆ? ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಗ್ರಾಮದ ರೈತ ಪ್ರಭಾಕರ್ ಎಂಬುವವರು ಅಡಕೆ ಸಸಿಗಳನ್ನು ನೆಟ್ಟಿದ್ದರು. ಆ … Read more

SHIMOGA | ಊರಿಗೂರೆ ಖಾಲಿ, ಗ್ರಾಮದ ಸುತ್ತಲು ಬೇಲಿ, ಇಡೀ ದಿನ ಯಾರೂ ಇಲ್ಲಿ ಕಾಲಿಡುವಂತಿಲ್ಲ, ಏನಿದು? ಯಾಕಿಂಗೆ?

100221 Mandagatta Horabidu Jathre in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 FEBRUARY 2021 ಮೂರು ವರ್ಷಕ್ಕೊಮ್ಮೆ ಗ್ರಾಮಸ್ಥರೆಲ್ಲ ಊರು ಬಿಡ್ತಾರೆ. ಇಡೀ ಗ್ರಾಮಕ್ಕೆ ಬೇಲಿ ಹಾಕ್ತಾರೆ. ದನಕರು, ನಾಯಿ, ಕೋಳಿಗಳನ್ನು ಕೂಡ ಊರಲ್ಲಿ ಬಿಡದೆ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಇದು ಹೊರಬೀಡು ಜಾತ್ರೆಯ ವಿಶೇಷ. ಶಿವಮೊಗ್ಗ ತಾಲೂಕು ಮಂಡಘಟ್ಟ ಗ್ರಾಮದಲ್ಲಿ ಈ ಜಾತ್ರೆ ನಡೆಯಲಿದೆ. ಗ್ರಾಮಸ್ಥರೆಲ್ಲ ಊರಾಚೆಗೆ ಇದ್ದು ಒಟ್ಟಿಗೆ ಬೆರೆತು, ಊಟ, ತಿಂಡಿ ಮಾಡಿ ಸಾಮಾರಸ್ಯದಿಂದ ಹಬ್ಬ ಆಚರಿಸುತ್ತಾರೆ. ಮಂಗಳವಾರ ಹೊರಬೀಡು ಜಾತ್ರೆ ನಡೆಯಿತು. ಹೇಗಿರುತ್ತೆ ಹೊರಬೀಡು ಜಾತ್ರೆ … Read more

ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣ, ಮೃತರೆಲ್ಲ ಹೊರ ರಾಜ್ಯದ ಕಾರ್ಮಿಕರು

220121 Hunasodu Blast Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021 ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಗಣಿಯಲ್ಲಿದ್ದ ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿದೆ. ಇಲ್ಲಿ ಕಾರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರೆಲ್ಲ ಹೊರ ರಾಜ್ಯದವರಾಗಿದ್ದಾರೆ. ಕಲ್ಲು ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಬಿಹಾರ, ಅಸ್ಸಾಂ ಮೂಲದವರು ಎಂದು ಹೇಳಲಾಗುತ್ತಿದೆ. ಆದರೆ ಯಾರೊಬ್ಬರ ದೇಹಗಳನ್ನು ಗುರುತಿಸಲಾಗದ ಸ್ಥಿತಿ ಇದೆ. ಸ್ಥಳೀಯರು ಕೆಲಸ ಮಾಡುತ್ತಿರಲಿಲ್ಲ ಗಣಿಗಾರಿಕೆಗೆ ಸ್ಥಳೀಯರ ವಿರೋಧವಿದೆ ಹಾಗಾಗಿ ಸ್ಥಳೀಯರನ್ನು ಇಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಿರಲಿಲ್ಲ. ಹೊರ ರಾಜ್ಯದಿಂದ ಹಲವರನ್ನು ಇಲ್ಲಿ … Read more