VISLನಲ್ಲಿ ದಿಢೀರ್‌ ನಡೆಯಿತು ಎರಡನೇ ಮೀಟಿಂಗ್‌, ಕುಮಾರಸ್ವಾಮಿ ನೀಡಿದ ಭರವಸೆ ಏನು?

291125-Central-Minister-HD-Kumaraswamy-visit-VISL

ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಪುನಶ್ಚೇತನ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy), ಬಳಿಕ ಕಾರ್ಖಾನೆಯ ವಿವಿಧ ಘಟಕಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಒಂದೇ ಭೇಟಿಯಲ್ಲಿ ಎರಡು ಸಭೆ ವಿಐಎಸ್‌ಎಲ್‌ ವಸತಿ ಗೃಹದಲ್ಲಿ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮೊದಲ ಹಂತದ ಸಭೆ ನಡೆಸಿದರು. ಈ ಸಭೆಯಲ್ಲಿ ಕಾರ್ಖಾನೆಯ ಪ್ರಸ್ತುತ ಸ್ಥಿತಿ, ಪುನಶ್ಚೇತನದ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ … Read more

ಭದ್ರಾವತಿ VISLಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ, ಮಹತ್ವದ ಸಭೆ, ಯಾರೆಲ್ಲ ಇದ್ದರು?

Central-Minister-HD-Kumaraswamy-Visit-VISL-with-BY-Raghavendra

ಭದ್ರಾವತಿ: ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಇಂದು ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ (VISL) ಭೇಟಿ ನೀಡಿದ್ದರು. ಕಾರ್ಖಾನೆ ಪುನಶ್ಚೇತನ ಕುರಿತು ಮಹತ್ವದ ಸಭೆ ನಡೆಸಿದರು. ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shimoga Airport) ಆಗಮಿಸಿದರು. ಸಂಸದ ಬಿ.ವೈ.ರಾಘವೇಂದ್ರ (BY Raghavendra) ಕೇಂದ್ರ ಸಚಿವರನ್ನು ಸ್ವಾಗತಿಸಿದರು. ಈ ಸಂದರ್ಭ ಶಾಸಕರಾದ ಎಸ್‌.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್‌, … Read more

ಶಿವಮೊಗ್ಗಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ, VISLನಲ್ಲಿ ನಡೆಯಲಿದೆ ಮಹತ್ವದ ಮೀಟಿಂಗ್‌

hd-kumaraswamy-visit-to-visl-in-bhadravathi

ಶಿವಮೊಗ್ಗ: ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ (Shimoga) ವಿವಿಧ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ನ.29ರಂದು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shimoga Airport) ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆವರೆಗೆ VISL ಕಾರ್ಖಾನೆಯಲ್ಲಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ 6.15ಕ್ಕೆ … Read more

ಭದ್ರಾವತಿ VISLಗೆ ನೂತನ ಕಾರ್ಯಪಾಲಕ ನಿರ್ದೇಶಕ, ಅಧಿಕಾರ ಸ್ವೀಕಾರ

Anoop-Kumar-new-managing-director-for-VISL.

ಭದ್ರಾವತಿ: VISL ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಅನೂಪ್ ಕುಮಾ‌ರ್ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಅವರು ಅಧಿಕಾರ ವರ್ಗಾಯಿಸಿದರು. ನಂತರ ಕಾರ್ಖಾನೆ ಆಡಳಿತ ಮಂಡಳಿ ಆವರಣ ದಲ್ಲಿರುವ ಸರ್‌.ಎಂ.ವಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅನೂಪ್ ಕುಮಾರ್ ಅವರು ಬಿಎಸ್ಸಿ ಎಂಜಿನಿಯರಿಂಗ್ (ಲೋಹಶಾಸ್ತ್ರ) ಪದವೀಧರರಾಗಿದ್ದು, ಇಂದೋರ್‌ನಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪ್ರಮಾಣಪತ್ರ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಬರ್ನ್‌ಪುರದಲ್ಲಿರುವ ಇಸ್ಕೋ ಸ್ಟೀಲ್ ಪ್ಲಾಂಟ್‌ನಲ್ಲಿ ಮ್ಯಾನೇಜ್‌ಮೆಂಟ್‌ ಟ್ರೈನಿಯಾಗಿ, 2017ರಲ್ಲಿ ಜನರಲ್ ಮ್ಯಾನೇಜರ್ ಮತ್ತು 2022ರಲ್ಲಿ ಕಾರ್ಯಪಾಲಕ ನಿರ್ದೇಶಕ … Read more

ಭದ್ರಾವತಿ VISLನಿಂದ 1100 ಸಸಿ ವಿತರಣೆ, ಏನಿದು ಕಾರ್ಯಕ್ರಮ?

VISL-Distributes-free-saplings-to-forest-department

ಭದ್ರಾವತಿ: ಸೈಲ್ – ವಿಐಎಸ್‌ಎಲ್ ಆಡಳಿತವು ಅರಣ್ಯ ಇಲಾಖೆ ಸಹಯೋಗದಲ್ಲಿ ‘ಹಸರೀಕರಣದೆಡೆಗೆ ವಿಐಎಎಲ್ ನಡಿಗೆ’ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಸಿಗಳ (Saplings) ವಿತರಣೆ ಮೂಲಕ ಸಾಮಾಜಿಕ ಅರಣೀಕರಣಕ್ಕೆ ಮುಂದಾಗಿದೆ. ‘ಹಸರೀಕರಣದೆಡೆಗೆ’ ಮತ್ತು ‘ಸ್ವಚ್ಛತಾ ಹಿ ಸೇವಾ’ ಕಾರ್ಯದ ಅಂಗವಾಗಿ ಸಾಮಾಜಿಕ ಅರಣೀಕರಣದಡಿ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಅವರಿಗೆ 1100 ಸಸಿಗಳನ್ನು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಹಸ್ತಾಂತರಿಸಿದರು. ಕಾರ್ಖಾನೆ ಆವರಣ ಮತ್ತು ನಗರ ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ಕೊಡುಗೆ ನೀಡುವುದಲ್ಲದೆ, ಗಣರಾಜ್ಯೋತ್ಸವ, ಸೈಲ್ ದಿನಾಚರಣೆ, … Read more

ಭದ್ರಾವತಿ VISLಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ನಿಯೋಗ, ಎಲ್ಲೆಲ್ಲಿ ಭೇಟಿ ನೀಡಿದರು? ಯಾರನ್ನೆಲ್ಲ ಭೇಟಿಯಾದರು?

Steel-Ministry-Officials-visit-VISL-at-Bhadravathi

ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ (VISL) ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿಯೋಗ ಭೇಟಿ ನೀಡಿತ್ತು. ವಿವಿಧ ವಿಭಾಗಕ್ಕೆ ತೆರಳಿದ ಅಧಿಕಾರಿಗಳು ವಸ್ತುಸ್ಥಿತಿಯನ್ನು ವರದಿ ಮಾಡಿಕೊಂಡಿದ್ದಾರೆ. ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಕಾರ್ಖಾನೆ ಪುನಶ್ಚೇತನಕ್ಕೆ ಹಣ ಹೂಡಿಕೆ ಮಾಡುವುದಾಗಿ ತಿಳಿಸಿದ ಬಳಿಕ ಅಧಿಕಾರಿಗಳ ಭೇಟಿ ಅತ್ಯಂತ ಮಹತ್ವ ಪಡೆದಿದೆ. ಉಕ್ಕು ಪ್ರಾಧಿಕಾರಿದ ಅಧ್ಯಕ್ಷ ಅಮರೇಂದು ಪ್ರಕಾಶ್‌, ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್‌ ಪಾಂಡ್ರಿಕ್‌, ಜಂಟಿ ಕಾರ್ಯದರ್ಶಿ ಅಭಿಜಿತ್‌ ನರೇಂದ್ರ … Read more

ಭದ್ರಾವತಿ VISL ಗುತ್ತಿಗೆ ಕಾರ್ಮಿಕರ ಸಂಘಕ್ಕೆ ಚುನಾವಣೆ

110823 VISL Factory Bhadravathi

ಭದ್ರಾವತಿ: ಮೇ 25ರಂದು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ (VISL) ಗುತ್ತಿಗೆ ಕಾರ್ಮಿಕರ ಸಂಘಕ್ಕೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್? ಮೇ 25ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನ್ಯೂಟೌನ್‌ನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಮತದಾನ ನಡೆಯಲಿದೆ. ನಂತರ ಮತ ಎಣಿಕೆ ಜರುಗಲಿದೆ. ಸಹ ಪ್ರಾಧ್ಯಾಪಕ ಎಸ್.ಸುಮಂತ್ ಕುಮಾರ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.  ಇದನ್ನೂ ಓದಿ » ಶಿವಮೊಗ್ಗ – … Read more

ವಿಐಎಸ್‌ಎಲ್‌, ಭದ್ರಾವತಿಯಲ್ಲಿ ಬಿ.ವಿ.ಶ್ರೀನಿವಾಸ್‌ಗೆ ಮನವಿ

BV-Srinivas-at-Bhadravathi-temple. VISL

SHIVAMOGGA LIVE NEWS | 4 DECEMBER 2024 ಭದ್ರಾವತಿ : ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಪುನಶ್ಚೇತನಗೊಳಿಸಬೇಕು. ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ಕಲ್ಪಿಸಿ ಅವರ ಹಿತರಕ್ಷಣೆ ಮಾಡುವಂತೆ ಯುವ ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಅವರಿಗೆ ಸುರಗಿತೋಪು ನಿವಾಸಿಗಳು ಮನವಿ ಮಾಡಿದರು. ಸುರಗಿತೋಪು ಚೌಡೇಶ್ವರಿ ದೇವಸ್ಥಾನಕ್ಕೆ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಭೇಟಿ ನೀಡಿ ಚೌಡೇಶ್ವರಿ ದೇವಿಯ ದರ್ಶನ ಪಡೆದರು. ಈ ಸಂದರ್ಭ ಅವರನ್ನು ಭೇಟಿಯಾದ … Read more

ಭದ್ರಾವತಿಯಲ್ಲಿ ಏನೇನಾಯ್ತು? ಇಲ್ಲಿದೆ 3 ಫಟಾಫಟ್‌ ನ್ಯೂಸ್‌

BHADRAVATHI-FATAFAT-LAYOUT.webp

BHADRAVATHI NEWS, 30 OCTOBER 2024 : ತಾಲೂಕಿನ ಫಟಾಫಟ್‌ ಸುದ್ದಿಗಳು ಇಲ್ಲಿವೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆ, ತಾಪಮಾನ ತುಸು ಹೆಚ್ಚಳ, ಅಲ್ಲಲ್ಲಿ ತುಂತುರು ಮಳೆ ಸಂಭವ ಇದನ್ನೂ ಓದಿ » ವೈರಲ್‌ ಆದ ದೆವ್ವ, ವಾರ್ನಿಂಗ್‌ ನೀಡಿದ ಶಿವಮೊಗ್ಗ ಪೊಲೀಸ್‌

VISLನಲ್ಲಿ ಕೆಜಿಗಟ್ಟಲೆ ತಾಮ್ರ ಕದ್ದವರು ಅರೆಸ್ಟ್‌, ಯಾರದು ಬಂಧಿತರು?

110823 VISL Factory Bhadravathi

BHADRAVATHI NEWS, 8 OCTOBER 2024 : ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ತಾಮ್ರದ ತಂತಿ (COPPER WIRE) ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಬೈಕ್‌, ಆಟೋ ಮತ್ತು ತಾಮ್ರದ ತಂತಿಯನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಖಾನೆಯ ಸೆಂಟ್ರಲ್‌ ಎಲೆಕ್ಟ್ರಿಕ್‌ ವರ್ಕ್‌ ಶಾಪ್‌ ರಿಪೇರಿಗೆ ತರಿಸಲಾಗಿದ್ದ ವೆಲ್ಡಿಂಗ್‌ ಮೆಷಿನ್‌ನಲ್ಲಿದ್ದ 50 ಕೆ.ಜಿ ತೂಕದ ತಾಮ್ರದ ತಂತಿ ಕಳುವಾಗಿತ್ತು. ಈ ಸಂಬಂಧ ವಿಐಎಸ್‌ಎಲ್‌ ಕಾರ್ಖಾನೆಯ ಭದ್ರತಾ ಸಿಬ್ಬಂದಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. … Read more