ಶಿವಮೊಗ್ಗ ಲೈವ್.ಕಾಂ | 14 ಮಾರ್ಚ್ 2019
ಭದ್ರಾವತಿಯ ಬೆಡಗಿ ಈಗ ಬಾಲಿವುಡ್ ಸಿನಿಮಾದ ಹೀರೋಯಿನ್. ಈಕೆ ಆಭಿನಯಿಸುತ್ತಿರುವ ಚಿತ್ರ ಹಿಂದಿ ಭಾಷೆಯಲ್ಲಿ ಮಾತ್ರವಲ್ಲ, ಇಂಗ್ಲೀಷ್ ಭಾಷೆಯಲ್ಲೂ ರಿಲೀಸ್ ಆಗಲಿದೆ. ಈ ಮೂಲಕ ಭದ್ರಾವತಿಯ ಆಶಾ ಭಟ್, ಈಗ ಹಾಲಿವುಡ್ ಮತ್ತು ಬಾಲಿವುಡ್’ನಲ್ಲಿ ಏಕಕಾಲದಲ್ಲಿ ಮಿಂಚಲಿದ್ದಾರೆ.

ಜಂಗ್ಲಿ ಅನ್ನುವ ಹಿಂದಿ ಸಿನಿಮಾದಲ್ಲಿ ಭದ್ರಾವತಿಯ ಆಶಾ ಭಟ್ ಅಭಿನಯಿಸುತ್ತಿದ್ದಾರೆ. ಮೀರಾ ಅನ್ನುವ ಪತ್ರಕರ್ತೆಯ ಪಾತ್ರದಲ್ಲಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಜಂಗ್ಲಿ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಮಾರ್ಚ್ 29ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಯಾರಿದು ಆಶಾ ಭಟ್?
ಆಶಾ ಭಟ್ ಮೂಲತಃ ಭದ್ರಾವತಿಯವರು. ಇವರ ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಶ್ಯಾಮಲಾ ಭಟ್. ಭದ್ರಾವತಿಯಲ್ಲಿ ಕ್ಲಿನಿಕಲ್ ಲ್ಯಾಬ್ ನಡೆಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿವರೆಗೂ ಭದ್ರಾವತಿಯ ಸೆಂಟ್ ಚಾರ್ಲ್ಸ್ ಶಾಲೆಯಲ್ಲಿ ಓದಿದ ಆಶಾ ಭಟ್, ಈಗ ಎಂಜಿನಿಯರಿಂಗ್ ಪದವೀಧರೆ. ವಿದ್ಯಾಭ್ಯಾಸದ ಜೊತೆಗೆ ಮಾಡಲಿಂಗ್ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡ ಆಶಾ ಭಟ್, ಅಂತಾರಾಷ್ಟ್ರೀಯ ಮಟ್ಟದ ಮಿಸ್ ಸುಪ್ರನ್ಯಾಷನಲ್ ಪೇಜೆಂಟ್ ಗೆದ್ದರು. ಇದನ್ನು ಗೆದ್ದ ಮೊದಲ ಇಂಡಿಯನ್ ಎಂಬ ಹೆಗ್ಗಳಿಕೆ ಕೂಡ ಅಶಾ ಭಟ್ ಅವರದ್ದಾಗಿದೆ.

ಮಿಸ್ ಸುಪ್ರನ್ಯಾಷನಲ್ ಪೇಜೆಂಟ್ ಗೆದ್ದು ಮರಳಿದ್ದ ಆಶಾ ಭಟ್ ಅವರಿಗೆ, ಭದ್ರಾವತಿಯಲ್ಲಿ ಸಾರ್ವಜನಿಕರು ಖುಷಿಯಿಂದ ಮೆರವಣಿಗೆ ಮಾಡಿದ್ದರು. ದೊಡ್ಡ ಸಮಾರಂಭ ಏರ್ಪಡಿಸಿ, ಸನ್ಮಾನವನ್ನೂ ಮಾಡಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200