ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪ್ರಗತಿ ಪರಿಶೀಲನೆ ವೇಳೆ, ವಿಳಂಬ ಧೋರಣೆ ಅನುಸರಿಸಿದ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಗರಂ ಆದರು. ಇನ್ನು, ಶಾಲಾ ಮಕ್ಕಳ ಬಳಿ ಜಿಎಸ್’ಟಿ ಇದೆಯೇ? ಲೈಸೆನ್ಸ್ ಇದೆಯೇ? ಎಂದು ಬೆದರಿಸಿದ್ದ ಬಿಇಓ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಶಾಸಕರಿಗೆ ಹೆದರಿ ಕೆಲಸ ಮಾಡಬೇಡಿ
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಜ್ಯೋತಿ.ಎಸ್.ಕುಮಾರ್, ಪ್ರೋಟೊಕಾಲ್ ಎಂದರೆ ಏನೆಂದು ತಿಳಿಯದ ನೀವು, ಶಾಸಕರಿಗೆ ಹೆದರಿ ಕೆಲಸ ಮಾಡುವುದನ್ನುಬಿಡಿ. ಕೆಲಸ ಕಲಿಯುವ ಆಸಕ್ತಿ ಇದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕಲಿಯಿರಿ ಅಂತಾ ಅಧಿಕಾರಿಗಳಿಗೆತಿಳಿಸಿದರು. ಇನ್ನು, 2015 – 16ರಲ್ಲಿ ಮಂಜೂರಾದ ಕಾಮಗಾರಿಗಳನ್ನು ಈಗ ಪ್ರಸ್ತಾಪಿಸುತ್ತಿರುವುದಕ್ಕೆ,ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ.ಯೋಗೇಶ್ ಗರಂ ಆದರು.
ಮಕ್ಕಳ ಹತ್ರ ಜಿಎಸ್’ಟಿ ಬಿಲ್ ಕೇಳ್ತೀರೇನ್ರಿ?
ಇನ್ನು, ಖಾಸಗಿ ಶಾಲೆ ಮಕ್ಕಳ ಬಳಿ ಜಿಎಸ್’ಟಿಬಿಲ್ ಇದೆಯೇನ್ರಿ ಅಂತಾ ಕೇಳಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಜಿ.ಪಂ ಸದಸ್ಯ ಜೆ.ಪಿ.ಯೋಗೇಶ್ಆಕ್ರೋಶ ವ್ಯಕ್ತಪಡಿಸಿದರು. ಕೆಲಸ ಮಾಡಿ, ರಾಜಕಾರಣ ಮಾಡಬೇಡಿ ಎಂದು ಎಚ್ಚರಿಸಿದರು. ಅಷ್ಟೇ ಅಲ್ಲ,ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಆಗ್ರಹಿಸಬೇಕಾಗುತ್ತದೆಎಂದರು.
ಐದು ಸರಿ ಹೇಳಿದರೂ ಒಳ್ಳೆ ನೀರು ಸಿಗುತ್ತಿಲ್ಲ
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ, ಕೂಡ್ಲಿಗೆರೆ, ಬಾರಂದೂರು ಗ್ರಾಮಗಳಿಗೆ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಈ ಕುರಿತು ಐದು ಬಾರಿ ತಿಳಿಸಿದರೂ, ಶುದ್ಧ ನೀರು ಪೂರೈಕೆ ಆಗುತ್ತಿಲ್ಲ ಎಂದು ನೀರನ ಬಾಟಲಿ ಪ್ರದರ್ಶಿಸಿ ಜಿ.ಪಂ ಸದಸ್ಯ ಮಣಿಶೇಖರ್ ಬೇಸರ ವ್ಯಕ್ತಪಡಿಸಿದರು. ನೀರು ಪೂರೈಕೆಯ ಪೈಪ್’ಗಳು ಹಳೆಯದ್ದಾಗಿವೆ ಎಂದರು. 18 ಹಳ್ಳಿಗಳಿಗೆ ಒಬ್ಬನೇ ನೀರುಗಂಟಿ ಇದ್ದು, ಆತನಿಗೆ ಪೈಪ್’ಗಳು ಏನಾಗಿದೆ ಎಂಬುದು ಗೊತ್ತಿಲ್ಲ ಅಂದರು. ಇನ್ನು, ತಾಲೂಕಿನಲ್ಲಿ 41 ಹೆಚ್ಚುವರಿ ಶಿಕ್ಷಕರಿದ್ದಾರೆ ಎಂಬ ಅಂಕಿಅಂಶದಲ್ಲಿದೆ. ಆದರೆ ಕುಮಾರನಹಳ್ಳಿ ಶಾಲೆಯಲ್ಲಿ 45 ಮಕ್ಕಳಿಗೆ ಒಬ್ಬರೇ ಶಿಕ್ಷಕರಿರುವುದಕ್ಕೆ ಮಣಿಶೇಖರ್ ಗರಂ ಆದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಕರೆ ಮಾಡಿ | 9964634494
ಈ ಮೇಲ್ | [email protected]
Hi sir am admin