ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಭದ್ರಾವತಿ: ಹೂವಿನ ಗಿಡ ಕಡಿಯುವ ವಿಚಾರದಲ್ಲಿ ನಡೆದ ಜಗಳದಲ್ಲಿ ತಾಯಿ ಮತ್ತು ಮಗನ ಮೇಲೆ ಮಚ್ಚು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದ ಆರೋಪಿಗೆ ಭದ್ರಾವತಿ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ (Prison) ವಿಧಿಸಿ ಆದೇಶಿಸಿದೆ.
ಗುಡುಮಘಟ್ಟೆ ಗ್ರಾಮದ ರಮೇಶ್ ಪೂಜಾರ್ (42) ಶಿಕ್ಷೆಗೆ ಒಳಗಾದವರು. ಈತನಿಗೆ 2 ವರ್ಷಗಳ ಕಾರಾಗೃಹ ವಾಸ ಹಾಗೂ ₹10,000 ದಂಡ ವಿಧಿಸಿ ಭದ್ರಾವತಿಯ 1ನೇ ಎ.ಸಿ.ಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ರವಿಕುಮಾರ್.ವಿ ಅವರು ತೀರ್ಪು ನೀಡಿದ್ದಾರೆ.
ಹೂವಿನ ಗಿಡಗಳ ವಿಚಾರದಲ್ಲಿ ಜಗಳ
2021ರ ಸೆಪ್ಟೆಂಬರ್ 28ರಂದು ಗುಡುಮಘಟ್ಟೆ ಗ್ರಾಮದ ಸುನಿಲ್ ಕುಮಾರ್ ಎಂಬುವವರು ತಮ್ಮ ಮನೆಯ ಮುಂದಿನ ಖಾಲಿ ಸೈಟಿನಲ್ಲಿ ಹೂವಿನ ಗಿಡಗಳನ್ನು ಹಾಕಿದ್ದರು. ಈ ಗಿಡಗಳು ಪಕ್ಕದ ಮನೆಯ ರಮೇಶ್ ಪೂಜಾರ್ ಅವರ ಗೋಡೆಗೆ ತಾಗಿಕೊಂಡು ಬೆಳೆದಿದ್ದವು ಎಂಬ ಕಾರಣಕ್ಕೆ ರಮೇಶ್ ಗಿಡಗಳನ್ನು ಕಡಿಯಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಲು ಹೋದ ಶಾರದಮ್ಮ ಅವರ ಮೇಲೆ ರಮೇಶ್ ಮಚ್ಚು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ರಕ್ತಗಾಯಗೊಳಿಸಿದ್ದನು. ಅಲ್ಲದೆ, ಸುನಿಲ್ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದ ಸವಾರರೆ ಹುಷಾರ್, ಬೈಕ್‌ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಎಎಸ್ಐ ಕೃಷ್ಣ ನಾಯ್ಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಪರ ಸರ್ಕಾರಿ ಅಭಿಯೋಜಕ ತಿಪ್ಪೇಶ್ ರಾವ್ ಅವರು ವಾದ ಮಂಡಿಸಿದ್ದರು.

LATEST NEWS
- ಭದ್ರಾವತಿಯಲ್ಲಿ ತವರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

- ಸೂಳೆಬೈಲಿನಲ್ಲಿ ಶೆಡ್ ಮೇಲೆ ತುಂಗಾ ನಗರ ಠಾಣೆ ಪೊಲೀಸರ ದಾಳಿ, ದಾಖಲಾಯ್ತು ಕೇಸ್

- ಹಿಟ್ಟೂರು ಸರ್ಕಲ್‌ನಲ್ಲಿ ಬೈಕುಗಳು ಡಿಕ್ಕಿ, ಹೇಗಾಯ್ತು ಘಟನೆ?

- ಕೆನರಾ ಬ್ಯಾಂಕ್ ವಿರುದ್ಧ ಹೋರಾಡಿ ಗೆದ್ದ ಹೊಸನಗರದ ಗ್ರಾಹಕ, ಏನಿದು ಕೇಸ್?

- ಶಿವಮೊಗ್ಗದ 6 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿ ಶೋಭಾ ಬಳಿ ಏನೇನೆಲ್ಲ ಸಿಕ್ತು? ಇಲ್ಲಿದೆ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು












