ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 JANUARY 2021
ಭದ್ರಾವತಿಯಲ್ಲಿ ಆರಂಭವಾಗುತ್ತಿರುವ 97ನೇ ಬಟಾಲಿಯನ್ ಕ್ಷಿಪ್ರ ಕಾರ್ಯಪಡೆ (ಆರ್ಎಎಫ್) ಬಗ್ಗೆ ಜನರಲ್ಲಿ ನಿರೀಕ್ಷೆ ಗರಿಗೆದರಿದೆ. ಪಟ್ಟಣದ ಆರ್ಥಿಕತೆಗೆ ಅನುಕೂವಾಗಲಿದೆ ಎಂಬ ಚರ್ಚೆಗಳು ಶುರುವಾಗಿದೆ. ಈ ನಡುವೆ ಕ್ರಿಡಿಟ್ಗಾಗಿ ರಾಜಕಾರಣಿಗಳ ನಡುವೆ ಸ್ಪರ್ಧೆ ಶುರುವಾಗಿದೆ.
ಹೇಗಿರುತ್ತೆ ಭದ್ರಾವತಿ ಬಟಾಲಿಯನ್?
ಭದ್ರಾವತಿ ಬಟಾಲಿಯನ್ನಲ್ಲಿ 445 ಸಿಬ್ಬಂದಿಗಳು ಇರಲಿದ್ದಾರೆ. ಬುಳ್ಳಾಪುರದಲ್ಲಿ ಇವರಿಗಾಗಿ ಕ್ವಾರ್ಟರ್ಸ್ ನಿರ್ಮಾಣವಾಗಲಿದೆ. ‘ಇಲ್ಲೊಂದು ಬೃಹತ್ ಟೌನ್ ಶಿಪ್ ನಿರ್ಮಾಣವಾಗಲಿದೆ’ ಎಂದು ಸಂಸದ ರಾಘವೇಂದ್ರ ಅವರು ತಿಳಿಸಿದ್ದಾರೆ. ಇದಕ್ಕಾಗಿಯೇ ಈಗ ಶಂಕುಸ್ಥಾಪನೆ ನೆರವೇರುತ್ತಿದೆ. ಭದ್ರಾವತಿ ಬಟಾಲಿಯನ್ ಕುರಿತು ಸಂಸದ ರಾಘವೇಂದ್ರ ಅವರು ಹೇಳಿಕೆಯ ವಿಡಿಯೋ ರಿಪೋರ್ಟ್ ಇಲ್ಲಿದೆ.
ಕ್ರೆಡಿಟ್ಗಾಗಿ ಪಕ್ಷಗಳ ಜಿದ್ದಾಜಿದ್ದಿ
ಆರ್ಎಎಫ್ ಘಟಕ ಸ್ಥಾಪನೆ ಸಂಬಂಧ ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ಕ್ರೆಡಿಟ್ ಫೈಟ್ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಬೆಂಬಲಿಗರ ನಡುವೆ ಕಮೆಂಟ್ ವಾರ್ ನಡೆಯುತ್ತಿದೆ. ಆರ್ಎಎಫ್ ಘಟಕ ಸ್ಥಾಪನೆಗೆ ಕಾಂಗ್ರೆಸ್ ಸರ್ಕಾರ ಅಸ್ತು ಅಂದಿತಾದರೂ, ಕೆಲಸ ಆರಂಭವಾಗಿರಲಿಲ್ಲ. ಸಂಸದ ರಾಘವೇಂದ್ರ ಅವರ ಪ್ರಯತ್ನದಿಂದಾಗಿ ಭದ್ರಾವತಿಯಲ್ಲಿ ಆರ್ಎಎಫ್ನ 97ನೇ ಬಟಾಲಿಯನ್ ಶುರುವಾಗುತ್ತಿದೆ.
ಪಕ್ಷಗಳಿಗೆ ಪ್ರತಿಷ್ಠೆಯಾದ ಆರ್ಎಎಫ್
ವಿಐಎಸ್ಎಲ್, ಎಂಪಿಎಂ ನಿಷ್ಕ್ರಿಯದಿಂದಾಗಿ ಭದ್ರಾವತಿಯ ಆರ್ಥಿಕತೆ ಕಳೆಗುಂದಿದೆ. ಈಗ ಆರ್ಎಎಫ್ ಘಟಕ ಸ್ಥಾಪನೆಯಾದರೆ ಭದ್ರಾವತಿಯ ಅರ್ಥ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದು ಬಿಂಬಿಸಲಾಗುತ್ತಿದೆ. ಇದರಿಂದ ಜನರಲ್ಲಿ ಬಿಜೆಪಿ ಪರವಾದ ಒಲವು ರೂಪುಗೊಳ್ಳುವ ಸಾದ್ಯತೆ ಇದೆ. ಆದರೆ ಹೀಗಾಗಲು ಅವಕಾಶ ನೀಡಬಾರದು ಎಂಬುದು ವಿರೋಧಿಗಳ ಲೆಕ್ಕಾಚಾರ. ಇದುವೆ ಪ್ರತಿಷ್ಠೆಗೆ ಪ್ರಮುಖ ಕಾರಣವಾಗಿದೆ.
ಇದನ್ನೂ ಓದಿ | ‘ಭದ್ರಾವತಿಯಲ್ಲಿ ಆರ್ಎಎಫ್ ಘಟಕ ಬರಲು ಕಾಂಗ್ರೆಸ್ ಕಾರಣ’, ಈತನಕ ಶಾಸಕರಿಗೆ ಬಂದಿಲ್ಲವಂತೆ ಆಹ್ವಾನ
ಭದ್ರಾವತಿಯಲ್ಲಿ ಅರ್ಥ ವ್ಯವಸ್ಥೆ ಸುಧಾರಿಸುತ್ತಾ?
ಆರ್ಎಎಫ್ ಘಟಕದಿಂದ ಭದ್ರಾವತಿಯ ಆರ್ಥಿಕತೆ ಸುಧಾರಿಸಲಿದೆ ಎಂದು ಬಿಂಬಿಸಲಾಗಿದೆ. ಈ ಸಂಬಂಧ ಸಂಸದ ರಾಘವೇಂದ್ರ ಅವರಿಗೆ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಿದಾಗ, ‘ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತೆ. 1500 ಕೋಟಿ ಹೂಡಿಕೆ ಆಗಲಿದೆ. ಇದರಲ್ಲಿ ಶೇ.25ರಷ್ಟಾದರೂ ಇಲ್ಲಿಯ ಜನರಿಗೆ ಅನುಕೂಲ ಆಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ | ಭದ್ರಾವತಿ ಆರ್ಎಎಫ್ ಬಟಾಲಿಯನ್, ಕ್ರೆಡಿಟ್ಗಾಗಿ ಪಕ್ಷಗಳ ಫೈಟ್, ಬದಲಾಗುತ್ತಾ ಉಕ್ಕಿನ ನಗರಿಯ ಅರ್ಥ ವ್ಯವಸ್ಥೆ?
ಆದರೆ ಉಳಿದೆಲ್ಲ ಸೇನಾಪಡೆ ಮತ್ತು ಅರೆಸೇನಾಪಡೆಗಳ ಟೌನ್ಶಿಪ್ನಂತೆ ಆರ್ಎಎಫ್ ಘಟಕದಲ್ಲೂ ಕ್ಯಾಂಟೀನ್ ಇರಲಿದೆ. ಎಲ್ಲವು ಅಲ್ಲಿಯೇ ದೊರೆಯಲಿದೆ. ಹಾಗಾಗಿ ಸಿಬ್ಬಂದಿಗಳು ದಿನನಿತ್ಯದ ಖರೀದಿಗೆ ಹೊರಗೆ ಬರುವ ಅವಶ್ಯಕತೆ ಇರುವುದಿಲ್ಲ ಎಂಬ ಅಭಿಪ್ರಾಯವಿದೆ. ಶಿವಮೊಗ್ಗದಲ್ಲಿರುವ 21 ಕರ್ನಾಟಕ ಎನ್ಸಿಸಿ ಬಟಾಲಿಯನ್ ಸಿಬ್ಬಂದಿಗಳು ಇದೆ ಮಾದರಿ ಅನುಸರಿಸುತ್ತಿದ್ದಾರೆ. ಹಾಲು, ತರಕಾರಿಯನ್ನು ಕೂಡ ಹೋಲ್ಸೇಲ್ನಲ್ಲಿ ಖರೀದಿಸಿ ಕ್ಯಾಂಟೀನ್ನಲ್ಲಿ ಪೂರೈಸುತ್ತಾರೆ. .
ಸದ್ಯ ಆರ್ಎಎಫ್ ಘಟಕದಿಂದ ಭದ್ರಾವತಿಯ ಇಮೇಜು ಬದಲಾಗುತ್ತದೆ. ದಕ್ಷಿಣ ಭಾರತದ ಗಮನ ಸೆಳೆಯವುದು ಸುಳ್ಳಲ್ಲ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶಂಕುಸ್ಥಾಪನೆಗೆ ಬರುತ್ತಿರುವುದು, ದೇಶದ ಚಿತ್ತ ಇತ್ತ ನೆಡುವಂತೆ ಮಾಡಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422