SHIVAMOGGA LIVE NEWS | 2 SEPTEMBER 2023
BHADRAVATHI : ಮಳೆ ಇಲ್ಲದೆ ಭದ್ರಾ ಜಲಾಶಯದಲ್ಲಿ (Bhadra Dam) ನಿರೀಕ್ಷಿತ ನೀರಿನ ಸಂಗ್ರಹವಾಗಿಲ್ಲ. ಆದರೂ ಮುಂಗಾರು ಹಂಗಾಮಿಗೆ 100 ದಿನ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ರೈತ ಸಂಘದ ನೇತೃತ್ವದಲ್ಲಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಯಿತು.
ರೈತ ಮುಖಂಡ ಕೆ.ಟಿ.ಗಂಗಾಧರ್ ಅವರ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ. ಮೊದಲ ದಿನ ಭದ್ರಾವತಿ ತಾಲೂಕಿನ ರೈತರು ಧರಣಿಯಲ್ಲಿ ಭಾಗವಹಿಸಿದ್ದರು. ನೀರು ಹರಿಸುವ ತೀರ್ಮಾನ ಮರು ಪರಿಶೀಲಿಸುವವರೆಗೆ ಅಚ್ಚುಕಟ್ಟು ಪ್ರದೇಶದ ರೈತರು (farmers) ಪಾಳಿ ವ್ಯವಸ್ಥೆಯಲ್ಲಿ ಧರಣಿ ನಡೆಸಲಿದ್ದಾರೆ.
ಅವೈಜ್ಞಾನಿಕ ಸುತ್ತೋಲೆ, ರೈತ ನಾಯಕ ಗರಂ
ಪ್ರತಿಭಟನೆ ವೇಳೆ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ನಾಯಕ ಕೆ.ಟಿ.ಗಂಗಾಧರ್ ಅವರು, ಸರ್ಕಾರದ ಹಂತದಲ್ಲಿ ನೀರಾವರಿ ಸಲಹಾ ಸಮಿತಿ ಅಸ್ತಿತ್ವದಲ್ಲಿದೆ. ಸರಿಯಾದ ಮಾಹಿತಿ ಇಲ್ಲದೆ ಅಧಿಕಾರಿಗಳು 100 ದಿನ ನೀರು ಹರಿಸುವ ಸುತ್ತೋಲೆ ಹೊರಡಿಸಿದ್ದಾರೆ. ಆದರೆ ಈಗನ ಪರಿಸ್ಥಿತಿಯಲ್ಲಿ 100 ದಿನ ನೀರು ಹರಿಸುವುದು ಅಸಾಧ್ಯ. ಇದರಿಂದ ರೈತರು ನಷ್ಟ ಅನುಭವಿಸಿದರೆ ಪರಿಹಾರ ನೀಡುವವರಾರು. ಅರೆ ನೀರಾವರಿ ಬೆಳೆ ಬೆಳೆಯಬೇಕು. ಭತ್ತ ಬೆಳೆದು ನಷ್ಟವಾದರೆ ಸರ್ಕಾರ ಹೊಣೆಯಲ್ಲ ಎಂದು ಸೂತ್ತೋಲೆ ಹೊರಡಿಸಲಾಗಿದೆ. ಇದರು ಅವೈಜ್ಞಾನಿಕ ಸುತ್ತೋಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ಇ-ಬಸ್ ಟಿಕೆಟ್ ರೇಟ್ ಕಡಿತ, ವೀಕೆಂಡ್ಗೆ ಪ್ರತ್ಯೇಕ ದರ ಫಿಕ್ಸ್
ಸಚಿವರ ಸಮಯ ಪಡೆದು ಸಭೆ
ರೈತರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾದ ಸುಜಾತಾ, ನೀರಾವರಿ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಈ ಸಮಿತಿ ಅಧ್ಯಕ್ಷರು. ಅವರ ಸಮಯ ಪಡೆದು ಸಭೆ ನಡೆಸಲಾಗುತ್ತದೆ. ಅಲ್ಲಿ ನೀರು ಹರಿಸುವ ತೀರ್ಮಾನವನ್ನು ಮರುಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ರಕ್ಷಣಾಧಿಕಾರಿ ಭೇಟಿ
ರೈತರ ಧರಣಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನು, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಧರಣಿ ನಿರತ ರೈತರ ಮನವೊಲಿಸಲು ಯತ್ನಿಸಿದರು.
ರೈತ ಮುಖಂಡ ಭದ್ರಾವತಿ ಮಂಜಪ್ಪ ಗೌಡ, ಯಶವಂತರಾವ್ ಘೋರ್ಪಡೆ, ವೀರೇಶ್, ಜಗದೀಶ್, ಪುಟ್ಟಪ್ಪ ಸೇರಿದಂತೆ ಹಲವರು ಧರಣಿಯಲ್ಲಿ ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200