ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 ಅಕ್ಟೋಬರ್ 2021 (FILE PHOTO)
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ರಾಮ ಮಂದಿರ ನಿರ್ಮಾಣ ಸಂಬಂಧದ ಲೆಕ್ಕವನ್ನು ಜನತೆ ಮುಂದಿಡಬೇಕು. ನಿಷ್ಠೆ, ಪಾರದರ್ಶಕತೆ ಬಗ್ಗೆ ಮಾತನಾಡುವವರು ಲೆಕ್ಕ ಕೊಡಲು ಹಿಂದೇಟು ಹಾಕುವುದೇಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಭದ್ರಾವತಿಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು, ಮೊದಲ ಹಂತದಲ್ಲಿ 1989 ರಿಂದ 91ರವರೆಗೆ ಅಡ್ವಾಣಿ ಅವರು ರಥಯಾತ್ರೆ ನಡೆಸಿದ್ದರು. ಆ ಸಂದರ್ಭ ಸಂಗ್ರಹವಾದ ಹಣದ ಬಗ್ಗೆ ಲೆಕ್ಕ ಯಾರಿಟ್ಟಿದ್ದಾರೆ. ಅದನ್ನು ಜನತೆಯ ಮುಂದಿಡಬೇಕಾಲ್ಲ ಎಂದು ಪ್ರಶ್ನಿಸಿದರು.
ನಿಷ್ಠೆ, ಪ್ರಮಾಣಿಕತೆ ಬಗ್ಗೆ ಮಾತನಾಡುವವರು ಮೊದಲು ರಾಮಮಂದಿರಕ್ಕೆ ಸಂಗ್ರಹವಾದ ಹಣದ ಲೆಕ್ಕ ಕೊಡಬೇಕು ಎಂದು ಸವಾಲು ಹಾಕಿದರು.

ಐದಾರು ವಿಷಯ ಪ್ರಸ್ತಾಪಿಸಿದ್ದೇನೆ
ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತಿದೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಅಲ್ಪಸಂಖ್ಯಾತರ ಕುರಿತು ಸಿದ್ದರಾಮಯ್ಯ ಅವರ ನಿಲುವುಗಳು ಏನಾಗದ್ದವು ಅನ್ನುವ ಐದಾರು ವಿಚಾರಗಳನ್ನು ನಾನು ಪ್ರಸ್ತಾಪ ಮಾಡಿದ್ದೇನೆ. ಅವರು ಈ ವಿಚಾರವನ್ನು ನಿಲ್ಲಿಸುವುದಾದರೆ ನಾನು ಕೂಡ ನಿಲ್ಲಿಸುತ್ತೇನೆ ಎಂದು ತಿಳಿಸಿದರು.

ಆರ್.ಎಸ್.ಎಸ್ ಪ್ರಚಾರಕರು ಹೇಳಿದ್ದು
ಇನ್ನು, ಆರ್.ಎಸ್.ಎಸ್ ಕುರಿತು ತಮ್ಮ ಹೇಳಿಕೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಆರ್.ಎಸ್.ಎಸ್ ಪ್ರಚಾರಕರು ಲೇಖಕರ ಮುಂದೆ ಹೇಳಿದ್ದನ್ನೆ ನಾನು ಹೇಳಿದ್ದೇನೆ. ಆರ್.ಎಸ್.ಎಸ್ ಪ್ರಚಾರಕರ ಹೇಳಿಕೆಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಅದನ್ನೆ ನಾನು ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.
ಮದುವೆ ಸಮಾರಂಭದ ಬಳಿಕ ಮಾಜಿ ಶಾಸಕ ಅಪ್ಪಾಜಿಗೌಡ ನಿವಾಸಕ್ಕೆ ಭೇಟಿ ನೀಡಿದ್ದರು.

LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






