ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
HOLEHONNURU, 31 AUGUST 2024 : ಆಕಾಶ ಮೇಲೇರಿತು, ಸಿಡಿಲು ಸಿಡಿದೀತು ಎಚ್ಚರ.. ಇದು ಹೊಳೆಹೊನ್ನೂರು ಸಮೀಪದ ಮೈದೊಳಲು ಗ್ರಾಮದ ಹನುಮಂತ ದೇವರ ಕಾರ್ಣಿಕ (Karnika) ವಾಕ್ಯ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ದೇಗುಲದಲ್ಲಿ ಕಾರ್ಣಿಕೋತ್ಸವ ನಡೆಯಲಿದೆ. ಕಾರ್ಣಿಕ ವಾಕ್ಯ ಆಧರಿಸಿ ರೈತರು ವರ್ಷದ ಮಳೆ, ಬೆಳೆಯ ಅಂದಾಜು ಮಾಡುವುದು ವಾಡಿಕೆ. ಶುಕ್ರವಾರ ಈ ಬಾರಿಯ ಕಾರ್ಣಿಕೋತ್ಸವ ನಡೆಯಿತು. ಗೋದೂಳಿ ಲಗ್ನದಲ್ಲಿ ಗಂಗೆ ಪೂಜೆ ಬಳಿಕ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರದ ಕಂಬವೇರಿದ ಗಣಮಗ ಕಾರಣಿಕ ನುಡಿದರು.
ಕಾರ್ಣಿಕದ ಅರ್ಥವೇನು?
ಆಕಾಶ ಮೇಲೇರಿತು, ಸಿಡಿಲು ಸಿಡಿದೀತು, ಎಚ್ಚರ ಎಂದು ಈ ಬಾರಿ ಕಾರ್ಣಿಕ ನುಡಿಯಲಾಗಿದೆ. ಈ ಬಾರಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಲಿವೆ. ಸಿಡಿಲು ಬಡಿದು ಅನಾಹುತ ಸಂಭವಿಸಬಹುದು. ಆಕಾಶದ ಮೇಲುಗೈ ಸಾಧಿಸಬಹುದು. ಬಿಸಿಲು ಜೋರು ಇರಲಿದೆ ಎಂದು ಹಿರಿಯವು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ ⇒ ದಿನ ಭವಿಷ್ಯ | 31 ಆಗಸ್ಟ್ 2024 | ಇವತ್ತು ಯಾವ್ಯಾವ ರಾಶಿಯವರಿಗೆ ಹೇಗಿದೆ?