ತೋಟದ ಮನೆಯ ನಾಯಿ ಕಾಣೆಯಾಗಿದೆ ಅಂತಾ CCTV ಚೆಕ್‌ ಮಾಡಿದಾಗ ಕಾದಿತ್ತು ಆಘಾತ

 ಶಿವಮೊಗ್ಗ  LIVE 

ಭದ್ರಾವತಿ: ಹಿರಿಯೂರು ಗ್ರಾಮದ ಪತ್ರಕರ್ತ ಸುರೇಶ್ ಅವರ ಶಿವಾನಿ ಮಕ್ರೂಮ್ ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆಯು (leopard) ಕೊಂದುಹಾಕಿದೆ.

ಶನಿವಾರ ರಾತ್ರಿ ತೋಟದ ಮನೆಯಲ್ಲಿ ಕಾವಲುಗಾರ ಸೇರಿದಂತೆ ಯಾರೂ ಇರಲಿಲ್ಲ. ತೋಟದಲ್ಲಿದ್ದವರು ನಾಯಿಯನ್ನು ಕಟ್ಟಿ ಹಾಕಿ ಹೋಗಿದ್ದರು. ಭಾನುವಾರ ಬಂದಾಗ ನಾಯಿ ಕಾಣೆಯಾಗಿತ್ತು. ಅನುಮಾನ ಗೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಎರಡು ಮೂರು ಬಾರಿ ಓಡಾಡಿದೆ. ನಂತರ ಬೊಗಳುತ್ತಿದ್ದ ನಾಯಿಯ ಹೊಟ್ಟೆ ಬಗೆದು ಕೊಂದು ಹೊತ್ತೊಯ್ದಿದೆ. ಬುಧವಾರ ಆ ಸ್ಥಳದಲ್ಲಿ ಬೋನ್ ಇಡುವುದಾಗಿ ಅರಣ್ಯಾಧಿಕಾರಿ ದಿನೇಶ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ » ಗೃಹಿಣಿಗೆ ಅಪರಿಚಿತ ನಂಬರ್‌ಗಳಿಂದ ಫೋನ್‌, ಇನ್‌ಸ್ಟಾಗ್ರಾಂ ತೆಗೆದಾಗ ಕಾದಿತ್ತು ಬಿಗ್‌ ಶಾಕ್

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment