ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 21 ಸೆಪ್ಟಂಬರ್ 2020
ಹಿನ್ನೀರು ಭಾಗದಲ್ಲಿ ಮಳೆ ಕಡಿಮೆಯಾಗಿದ್ದು ಭದ್ರಾ ಜಲಾಶಯದ ಒಳ ಮತ್ತು ಹೊರ ಹರಿವಿನ ಪ್ರಮಾಣ ಇವತ್ತು ತಗ್ಗಿದೆ. ಭದ್ರಾವತಿ ಸೇರಿದಂತೆ ನದಿ ಪಾತ್ರದ ಜನರಲ್ಲಿ ಉಂಟಾಗಿದ್ದ ನೆರೆ ಆತಂಕ ದೂರಾಗಿದೆ. ಮತ್ತೊಂದೆಡೆ ಜಲಾವೃತವಾಗಿದ್ದ ಭದ್ರಾವತಿ ಹೊಸ ಸೇತುವೆಗೆ ಹಾನಿಯಾಗಿದೆ.
ಸೇತುವೆಗೆ ಹಾನಿ, ಹೇಗೆ?
ಭದ್ರಾ ಜಲಾಶಯದಿಂದ 60 ಸಾವಿರ ಕ್ಯೂಸೆಕ್‍ಗಿಂತಲೂ ಹೆಚ್ಚು ಪ್ರಮಾಣದ ನೀರನ್ನು ಹೊರಬಿಟ್ಟಿದ್ದರಿಂದ ಹೊಸ ಸೇತುವೆ ಮುಳುಗಿತ್ತು. ನೀರಿನ ರಭಸ ಮತ್ತು ತೇಲಿ ಬಂದ ಮರದ ದಿಮ್ಮಿಗಳು ಅಪ್ಪಳಿಸಿ ಸೇತುವೆ ಹಾನಿಗೀಡಾಗಿದೆ. ಸೇತುವೆ ಎರಡು ಕಡೆಯಿದ್ದ ತಡೆಗೋಡೆ ಮತ್ತು ನೀರಿನ ಪೈಪ್‍ಲೈನ್ ಹಾನಿಯಾಗಿದೆ.
ಸೇತುವೆ ಮುಂದೆ ಧರೆಗುರುಳಿದ ಮರ
ಮಳೆ ಮತ್ತು ಭಾನುವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ಸೇತುವೆ ಮುಂದೆ ಇದ್ದ ಮರವೊಂದು ಬುಡಮೇಲಾಗಿದೆ. ಇವತ್ತು ನಗರಸಭೆ ಸಿಬ್ಬಂದಿಗಳು ಮರವನ್ನು ತೆರವು ಮಾಡಿದರು.
ಎಷ್ಟು ನೀರು ಹೊರಬಿಡಲಾಗ್ತಿದೆ?
ಇವತ್ತು ಬೆಳಗ್ಗೆ ವರದಿ ಪ್ರಕಾರ ಭದ್ರಾ ಜಲಾಶಯದಿಂದ 59 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗ್ತಿತ್ತು. ಒಳ ಹರಿವು 46 ಕ್ಯೂಸೆಕ್ ಇತ್ತು. ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ತುಸು ತಗ್ಗಿದ್ದು, ಜಲಾಶಯದ ಒಳ ಹರಿವು ಕಡಿಮೆಯಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422