ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
BHADRAVATHI NEWS, 12 OCTOBER 2024 : ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರ (RAIN) ಮುಂದುವರೆದಿದೆ. ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಗೋಡೆ ಕುಸಿತದ ವರದಿಯಾಗಿದೆ.
ಮುಂದುವರೆದ ಮಳೆ ಅಬ್ಬರ
ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ ಸಿಂಗನಮನೆ, ಮಾವಿನಕೆರೆ, ಹಿರಿಯೂರು, ಅರಳಹಳ್ಳಿ, ಕಾಗೆಕೊಡಮಗ್ಗಿ, ತಡಸ, ಬಿಳಕಿ, ನಾಗತಿಬೆಳಗಲು, ಅರೆಬಿಳಚಿ, ಕಲ್ಲಿಹಾಳ್, ಎಮ್ಮೆಹಟ್ಟಿ, ಗುಡುಮಘಟ್ಟ, ಮಂಗೋಟೆ, ನಿಂಬೆಗೊಂದಿ, ದಾಸರಕಲ್ಲಹಳ್ಳಿ, ಯರೆಹಳ್ಳಿ ಸುತ್ತಮುತ್ತ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ.
ಗೋಡೆ ಕುಸಿತ, ಮನೆಗಳಿಗೆ ನೀರು
ಮಳೆ ಮುಂದುವರೆದ ಹಿನ್ನೆಲೆ ಚರಂಡಿಗಳು ತುಂಬಿ, ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿದೆ. ಜನ್ನಾಪುರದ ಕಿತ್ತೂರು ರಾಣಿ ಚೆನ್ನಮ್ಮ ಬ್ಲಾಕ್‌ನ ಮನೆಯೊಂದರೆ ಕಾಂಪೌಂಡ್ ಗೋಡೆ ಕುಸಿದಿದೆ. ಮನೆಗಳಿಗೆ ನುಗ್ಗಿರುವ ನೀರನ್ನು ಹೊರಗೆ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422