ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHANKARAGHATTA NEWS | 18 ಜನವರಿ 2022
ಕರೋನ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೆ ಕಂಟೈನ್ಮೆಂಟ್ ಜೋನ್ ನಿರ್ವಹಣೆ ಅಧಿಕಾರಿಯನ್ನು ನೇಮಕ ಮಾಡಿ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.
ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರಘಟ್ಟ ಗ್ರಾಮದಲ್ಲಿ ಕೋವಿಡ್ ಸೋಂಕಿತರ ಪ್ರಾಮಣ ಹೆಚ್ಚಳವಾಗಿದೆ. ಇದೇ ಗ್ರಾಮಕ್ಕೆ ಸೇರುವ ಕುವೆಂಪು ವಿಶ್ವವಿದ್ಯಾಲದಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 24 ಮಂದಿಗೆ ಸೋಂಕು ತಗುಲಿದೆ. ಆದ್ದರಿಂದ ಕುವೆಂಪು ವಿವಿಗೆ ಐದು ದಿನ ರಜೆ ಘೋಷಿಸಲಾಗಿದೆ.
ಶಂಕರಘಟ್ಟ ಗ್ರಾಮದಲ್ಲಿ 214 ಮನೆಗಳಿವೆ. 25 ಅಂಗಡಿಗಳು, ಕಚೇರಿಗಳಿವೆ. 1345 ಜನಸಂಖ್ಯೆ ಇದೆ. ಸೋಂಕು ಹರಡದಂತೆ ತಡೆಯಲು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಆದೇಶ ಹೊರಡಿಸಿದ್ದಾರೆ. ಇನ್ನು, ಈ ಕಂಟೈನ್ಮೆಂಟ್ ಜೋನ್ ನಿರ್ವಹಣೆಗಾಗಿ ಬಿ.ಆರ್.ಪ್ರಾಜೆಕ್ಟ್’ನ ಸಹಾಯಕ ಎಂಜಿನಿಯರ್ ರಾಜಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಅವರ ಮೊಬೈಲ್ ನಂಬರ್ 97427 68098.
ಇದನ್ನೂ ಓದಿ | ಇನ್ನೊಂದು ವಾರ ಕುವೆಂಪು ವಿವಿ ಸಂಪೂರ್ಣ ಬಂದ್, ಆನ್‌ಲೈನ್‌ನಲ್ಲಿ ತರಗತಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422