ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 28 MAY 2023
BHADRAVATHI : ಶಾಸಕ ಬಿ.ಕೆ.ಸಂಗಮೇಶ್ವರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅವರ ಬೆಂಬಲಿಗರು ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಆಕ್ರೋಶ ಹೊರ ಹಾಕಿದ್ದಾರೆ. ಹೈ ಕಮಾಂಡ್ ವಿರುದ್ಧ ಪೋಸ್ಟ್ಗಳನ್ನು ಪ್ರಕಟಿಸಿದ್ದಾರೆ.
ಬಿ.ಕೆ.ಸಂಗಮೇಶ್ವರ ಅವರು ಭದ್ರಾವತಿಯಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ. ಈ ಹಿಂದೆ ಅವರು ಸಚಿವರಾಗುವ ಅವಕಾಶ ಕೈ ತಪ್ಪಿತ್ತು. ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು, ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡುವ ಭರವಸೆ ನೀಡಿದ್ದರು. ಇದೇ ಕಾರಣಕ್ಕೆ ಕ್ಷೇತ್ರದಲ್ಲಿ ನಿರೀಕ್ಷೆ ಗರಿಗೆದರಿತ್ತು. ಈಗ ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿದ್ದು, ಭದ್ರಾವತಿ ಶಾಸಕ ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ.
ಮತ್ತೊಂದು ಅವಕಾಶ ಮಿಸ್
ಸ್ವಾತಂತ್ರ್ಯ ನಂತರ ಈತನಕ ಭದ್ರಾವತಿ ಕ್ಷೇತ್ರದಿಂದ ಆಯ್ಕೆಯಾದ ಯಾರೊಬ್ಬರಿಗೂ ಸಚಿವ ಸ್ಥಾನ ದಕ್ಕಿಲ್ಲ. ಈ ಬಾರಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿದೆ. ಹಾಗಾಗಿ ಹಿರಿತನ, ಹೆಚ್ಚು ಬಾರಿ ಗೆಲುವಿನ ಆಧಾರದ ಮೇಲೆ ಸಂಗಮೇಶ್ವರ ಅವರಿಗೆ ಸಚಿವ ಸ್ಥಾನ ಲಭಿಸಲಿದೆ ಎಂದೇ ಅಂದಾಜಿಸಲಾಗಿತ್ತು.
ಶಿವಮೊಗ್ಗ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕ ಭದ್ರಾವತಿ MLA ಬಿಕೆ ಸಂಗಮೇಶ(2004, 2008, 2018, 2023), 2018ರಲ್ಲಿ ಜಿಲ್ಲೆಯ ಏಕೈಕMLA ಖುದ್ದು ಯಡಿಯೂರಪ್ಪ ಮಂತ್ರಿ ಮಾಡುತ್ತೇನೆ ಅಂದ್ರು ಪಕ್ಷ ಬಿಡಲಿಲ್ಲ,ಆದ್ರೂ ಮಂತ್ರಿ ಸ್ಥಾನವಿಲ್ಲ. ಮಧು ಇತ್ತೀಚೆಗೆ ಕಾಂಗ್ರೆಸ್ ಬಂದ ಮಂತ್ರಿ ಸ್ಥಾನ ಸಿಕ್ತು. ಮಧು ಯಾವತ್ತೂ ಅಹಿಂದ ಪರವಾಗಿ ಮಾತನಾಡಿಲ್ಲಾ
— ರಕ್ತ❤️ (@rakthaaa) May 27, 2023
ಬೆಂಬಲಿಗರು, ಕಾರ್ಯಕರ್ತರ ಆಕ್ರೋಶ
ಸಂಗಮೇಶ್ವರ ಅವರಿಗೆ ಸಚಿವ ಸ್ಥಾನ ಸಿಗದೆ ಇದ್ದರೆ ಕ್ಷೇತ್ರದಲ್ಲಿ ಹೋರಾಟ ನಡೆಸುವುದಾಗಿ ಬೆಂಬಲಿಗರು ಈ ಮೊದಲೆ ತಿಳಿಸಿದ್ದರು. ಇನ್ನು, ಪೂರ್ಣ ಪ್ರಮಾಣದ ಸಂಪುಟದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಸಂಗಮೇಶ್ವರ ಅವರ ಬೆಂಬಲಿಗರು, ಭದ್ರಾವತಿಯ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ (Social Media) ಫೋಸ್ಟ್ಗಳನ್ನ ಪ್ರಕಟಿಸಿ ಪಕ್ಷದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ – ಬೈಪಾಸ್ ರಸ್ತೆಯಲ್ಲಿ ಹಿಟ್ ಅಂಡ್ ರನ್ ಅಪಘಾತ, ತಪ್ಪಿದ ಭಾರಿ ಅನಾಹುತ, ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422