ಮೊಬೈಲ್‌ ಸರ್ವಿಸ್‌ ಸೆಂಟರ್‌ ಬೀಗ ಒಡೆದ ಕಳ್ಳರು, ಏನೇನೆಲ್ಲ ಕದ್ದಿದ್ದಾರೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಭದ್ರಾವತಿ: ಮೊಬೈಲ್‌ ಸರ್ವಿಸ್‌ ಸೆಂಟರ್‌ ಒಂದರ ಬಾಗಿಲಿನ ಬೀಗ ಒಡೆದು ಮೊಬೈಲ್‌ ಫೋನ್‌ಗಳು, ಇಯರ್‌ ಬಡ್ಸ್‌, ಸ್ಮಾರ್ಟ್‌ ವಾಚ್‌ಗಳು ಸೇರಿ ಹಲವು ವಸ್ತುಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಯಡೇಹಳ್ಳಿ ಸರ್ಕಲ್‌ನಲ್ಲಿರುವ ಎನ್.ಎಸ್‌.ಮೊಬೈಲ್‌ ಸರ್ವಿಸ್‌ ಪಾಯಿಂಟ್‌ನಲ್ಲಿ ಕಳ್ಳತನವಾಗಿದೆ. ಮಾಲೀಕ ನ್ಯಾಮತುಲ್ಲಾ ಅವರು ಎಂದಿನಂತೆ ಬೆಳಗ್ಗೆ 10.30ಕ್ಕೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಬೀಗ ಮುರಿದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ₹76,500 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಿಪೇರಿಗೆ ಬಂದಿದ್ದ 8 ಹಳೆಯ ಮೊಬೈಲ್‌ ಫೋನ್‌ಗಳು, 15 ಕೀ ಪ್ಯಾಡ್‌ ಮೊಬೈಲ್‌ ಫೋನುಗಳು, 20 ನೆಕ್‌ ಬ್ಯಾಂಡ್‌, 30 ಇಯರ್‌ ಬಡ್ಸ್‌, 15 ಸ್ಮಾರ್ಟ್‌ ವಾಚುಗಳು, ಮಾನಿಟರ್‌, ₹6000 ನಗದು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಟ್ಯಾಂಕರ್‌ ಡಿಕ್ಕಿ, ಅರಣ್ಯ ಕಾವಲುಗಾರ ಸಾವು, ಎಲ್ಲಿ? ಹೇಗಾಯ್ತು ಘಟನೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment