SHIVAMOGGA LIVE NEWS | 16 MARCH 2023
MYSORE : ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ರಾಜ ಮನೆತನದ ಗಮನ ಸೆಳೆಯಲು ಭದ್ರಾವತಿಯ ವ್ಯಾಪಾರಿಯೊಬ್ಬರು ಮೈಸೂರಿನಲ್ಲಿ (Mysore) ಧರಣಿ ನಡೆಸಿದರು. ಗಾಂಧಿ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣೆ ಮಾಡಿದರು.
ಭದ್ರಾವತಿಯ ವ್ಯಾಪಾರಿ ದಯಾನಂದ್ ಅವರು ಮೈಸೂರಿನಲ್ಲಿ (Mysore) ರಾಜಮನೆತನದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಅವರ ಹೋರಾಟ ವಿಐಎಸ್ಎಲ್ ಕಾರ್ಮಿಕರು ಮತ್ತು ಭದ್ರವತಿಯಲ್ಲಿ ಜನ ಮೆಚ್ಚುಗೆ ಪಡೆದಿದೆ.
![]() |
ಗಮನ ಸೆಳೆಯಲು ಕಾರಣವೇನು?
ವಿಐಎಸ್ಎಲ್ ಕಾರ್ಖಾನೆಯನ್ನ ಸ್ಥಾಪನೆ ಮಾಡಿದ್ದು ಮೈಸೂರಿನ ರಾಜ ಮನೆತನದವರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್. ಎಂ.ವಿಶ್ವೇಶ್ವರಯ್ಯ ಅವರು ಕಾರ್ಖಾನೆಯನ್ನು ಆರಂಭಿಸಿದ್ದರು. ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ನೀಡಿದ್ದ ಕಾರ್ಖಾನೆ ಶತಮಾನೋತ್ಸವ ಆಚರಣೆ ಮಾಡಬೇಕಿತ್ತು. ಆದರೆ ಸರ್ಕಾರ ಕಾರ್ಖಾನೆ ಮುಚ್ಚಲು ಮುಂದಾಗಿದೆ. ಕಾರ್ಖಾನೆ ಪುನಶ್ಚೇತನ ಮಾಡಲು ರಾಜ ಮನೆತನದ ಗಮನ ಸೆಳೆಯಲು ದಯಾನಂದ್ ಅವರು ಮೈಸೂರಿನಲ್ಲಿ ಧರಣಿ ನಡೆಸಿದರು.
ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು
ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಭದ್ರವತಿ ವ್ಯಾಪಾರಿ ದಯಾನಂದ್ ಅವರು ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದರು. ಕಾರ್ಖಾನೆಯನ್ನು ಪುನಾರಂಭ ಮಾಡಬೇಕು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ದಯಾನಂದ್ ಅವರು ಆಗ್ರಹಿಸಿದ್ದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಕಾರ್ಮಿಕರಿಂದ ವಿಐಎಸ್ಎಲ್ ಕಾರ್ಖಾನೆ ಅಪ್ಪಿಕೋ ಚಳವಳಿ
ಇದಕ್ಕೂ ಮೊದಲು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ವಿಐಎಸ್ಎಲ್ ಉಳಿವಿಗಾಗಿ ಪ್ರಾರ್ಥಿಸಿ, ಕಾರ್ಮಿಕರು ಪೂಜೆ ಸಲ್ಲಿಸಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200