ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | HOSANAGARA NEWS | 07 ಅಕ್ಟೋಬರ್ 2021
ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೋತ್ಸವ ವೈಭವದಿಂದ ನಡೆಯಿತು. ಹುಣ್ಣಿಮೆಯಂದು ಕಂಕಣ ಧರಿಸುವ ಮೂಲಕ ಆರಂಭಗೊಂಡ ಜಾತ್ರೆ ಮಹಾಲಯ ಅಮಾವಸ್ಯೆಯಂದು ಸಂಪನ್ನಗೊಂಡಿತು.
ಇದನ್ನು ಓದಿ | ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತಿನಿಂದ ನಾಡಹಬ್ಬ ಆಚರಣೆ, ಎಲ್ಲೆಲ್ಲಿ ಹೇಗಿರುತ್ತೆ ವೈಭವ?
ಕರೋನ ಕಾರಣದಿಂದ ಹೆಚ್ಚು ಪ್ರಚಾರವಿಲ್ಲದೆ, ಅದ್ಧೂರಿಯಿಲ್ಲದೆ ಸಂಪ್ರದಾಯ ಬದ್ಧವಾಗಿ ಜಾತ್ರೋತ್ಸವ ನೆರವೇರಿಸಲಾಯಿತು.
ಮೂರು ಮಂಗಳವಾರ, ಎರಡು ಶುಕ್ರವಾರ
ಹುಣ್ಣಿಮೆಯಿಂದ ಮೂರು ಮಂಗಳವಾರ, ಎರಡು ಶುಕ್ರವಾರದರೆಗೆ ವಿಶೇಷ ಪೂಜೆ ನೆರವೇರಿತು. ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ಅವರ ನೇತೃತ್ವದಲ್ಲಿ ಕುಂಕುಮಾರ್ಚನೆ, ಮಡಿಲು ತುಂಬುವುದು, ಮಂಗಳಾರತಿ ಸೇರಿ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಕೋವಿಡ್ ಭೀತಿ ಹಿನ್ನೆಲೆ ಕಳೆದ ಎರಡು ವರ್ಷದಿಂದ ಜಾತ್ರೆಯಲ್ಲಿ ಅದ್ಧೂರಿ ಮಾಯವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರಿ ಭಕ್ತರ ಸಂಖ್ಯೆ ತುಸು ಹೆಚ್ಚಿಗೆ ಇತ್ತು. ಕೋವಿಡ್ ನಿಯಮ ಹಿನ್ನೆಲೆ ದೇವಸ್ಥಾನದ ಬಳಿ ಯಾವುದೆ ಮಳಿಗೆಗಳನ್ನು ಸ್ಥಾಪಿಸಿರಲಿಲ್ಲ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್ ಸೇರಿದಂತೆ ಹಲವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳೀಯರಾದ ಗುರುರಾಜ ಭಟ್, ಚಿದಂಬರ್, ತಾರಕೇಶ ಗೌಡ, ಸುಧೀರ್, ಯೋಗೇಂದ್ರ, ಹೆಚ್.ಸ್ವಾಮಿ, ಎಸ್.ಕೆ.ರಾಜು, ವಿಶ್ವನಾಥ್, ಗಣೇಶ್ ಅಮ್ಮನಘಟ್ಟ ಸೇರಿದಂತೆ ಹಲವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422