ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 DECEMBER 2023
HOSANAGARA : ಗ್ರಾಹಕರೊಬ್ಬರು ಡೆಪಾಸಿಟ್ ಇಟ್ಟ ಹಣವನ್ನು ಬ್ಯಾಂಕ್ ಸಿಬ್ಬಂದಿಯೊಬ್ಬ ತನ್ನ ತಂದೆ ಮತ್ತು ಪತ್ನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ವಿದೇಶದಲ್ಲಿರುವ ಬ್ಯಾಂಕ್ ಗ್ರಾಹಕ ಈ ಮೇಲ್ ಮೂಲಕ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಹಕನ ಹಣ ನಾಪತ್ತೆ
ಹೊಸನಗರ ತಾಲೂಕು ಯಡೂರಿನ ಕೆನರಾ ಬ್ಯಾಂಕ್‌ನಲ್ಲಿ ಗಣೇಶ್ ಜಿ.ಎಸ್.ಗೌಡ ಎಂಬುವವರು ಫಿಕ್ಸೆಡ್ ಡೆಪಾಸಿಟ್ ಖಾತೆಗಳನ್ನು ಹೊಂದಿದ್ದಾರೆ. ಇವರ ಖಾತೆಯಿಂದ ಹಣ ನಾಪತ್ತೆಯಾಗಿತ್ತು. ವಿದೇಶದಲ್ಲಿ ನೆಲೆಸಿರುವ ಗಣೇಶ್ ಜಿ.ಎಸ್. ಗೌಡ ಅವರು ಈ ಮೇಲ್ ಮೂಲಕ ಡೆಪ್ಯೂಟಿ ಜನರಲ್ ಮ್ಯಾನೇಜರ್ ಅವರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಯಡೂರು ಬ್ರಾಂಚ್‌ನ ಸಿಬ್ಬಂದಿ ಸುನಿಲ್ ಎಂಬಾತ ಡಿ.1 ರಿಂದ 15ರವರೆಗೆ ಹತ್ತು ಬಾರಿ ಒಟ್ಟು 49,87,874 ರೂ. ಹಣವನ್ನು ತನ್ನ ತಂದೆ ಮತ್ತು ಪತ್ನಿಯ ಹೆಸರಿನ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು ಬೆಳಕಿಗೆ ಬಂದಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ
ಬ್ಯಾಂಕ್ ಸಿಬ್ಬಂದಿ ಸುನಿಲ್, ತಂದೆ ಮತ್ತು ಪತ್ನಿಯ ಖಾತೆಗೆ ಹಣ ವರ್ಗಾಯಿಸಿ ಅದನ್ನು ಗ್ರೋ ಸ್ಟಾಕ್ಸ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ. ಈ ಸಂಬಂಧ ವಿಚಾರಣೆಗೆ ಡೆಪ್ಯೂಟಿ ಜನರಲ್ ಮ್ಯಾನೇಜರ್ ಯಡೂರು ಬ್ರಾಂಚ್‌ಗೆ ತೆರಳಿದ್ದಾಗ ಸಿಬ್ಬಂದಿ ಸುನಿಲ್ ಅನಾರೋಗ್ಯ ಕಾರಣ ಹೇಳಿ ಬ್ಯಾಂಕ್‌ನಿಂದ ಹೋಗಿದ್ದರು. ಆದರೆ ಮನೆಗೂ ತೆರಳಿರಲಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಾಯಿ ಮೇಲೆ ಗುಂಡಿನ ದಾಳಿ, CCTVಯಲ್ಲಿ ದೃಶ್ಯ ಸೆರೆ, ಒಬ್ಬನ ವಿರುದ್ಧ ಕೇಸ್, ಏನಿದು ಪ್ರಕರಣ?
ಆಸ್ಪತ್ರೆಗೆ ದಾಖಲಾಗಿರುವ ಸುನಿಲ್
ಸಾಗರದ ಲಾಡ್ಜ್ ಒಂದರಲ್ಲಿ ಉಳಿದಿದ್ದ ಸುನಿಲ್ ಅಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಆತನನ್ನು ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು, ಗ್ರಾಹಕರ ಹಣ ಸುರಕ್ಷಿತವಾಗಿದೆ. ಈ ಬಗ್ಗೆ ಗ್ರಾಹಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಕೆನರಾ ಬ್ಯಾಂಕ್ ಸ್ಪಷ್ಟಪಡಿಸಿದೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422