ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 31 DECEMBER 2020
ಬೆಂಗಳೂರು – ಶಿವಮೊಗ್ಗ – ತಾಳಗುಪ್ಪ ಇಂಟರ್‌ಸಿಟಿ ರೈಲು ಹಳಿ ತಪ್ಪಿದೆ. ಹೊಸನಗರ ತಾಲೂಕು ಸೂಡೂರು ಬಳಿ ಘಟನೆ ಸಂಭವಿಸಿದೆ. ಲೋಕೊ ಪೈಲೆಟ್ (ಚಾಲಕ) ಸಮಯಪ್ರಜ್ಞೆಯಿಂದಾಗಿ ದೊಡ್ಡ ಅಪಾಯ ತಪ್ಪಿದೆ.
ಹಳಿ ತಪ್ಪಿದ್ದು ಹೇಗೆ?
ಶಿವಮೊಗ್ಗದಿಂದ ಸಾಗರದ ತಾಳಗುಪ್ಪ ಕಡೆಗೆ ಇಂಟರ್‌ಸಿಟಿ ರೈಲು ಸಂಚರಿಸುತ್ತಿತ್ತು. ಹೊಸನಗರದ ಸೂಡೂರು ಸಮೀಪ ರೈಲ್ವೆಯ 99ನೇ ಕಿ.ಮೀ.ನಲ್ಲಿ ರೈಲಿನ ಎಂಜಿನ್ ಚಕ್ರಗಳು, ಹಳಿಯಿಂದ ಕೆಳಗಿಳಿದಿವೆ. ಡ್ರಿಲ್ ಮೆಲ್ಟ್ ಆಗಿ ತುಂಡಾಗಿರುವುದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ನಿಧಾನವಾಗಿ ಚಲಿಸುತ್ತು ರೈಲು
ಸೂಡೂರು ರೈಲ್ವೆ ಗೇಟ್ ಮತ್ತು ಅರಸಾಳು ರೈಲ್ವೆ ನಿಲ್ದಾಣದ ನಡುವೆ ತಿರುವು ಇದೆ. ಹಾಗಾಗಿ ಇಲ್ಲಿ ಕೇವಲ 40 ರಿಂದ 50 ಕಿ.ಮೀ ವೇಗದಲ್ಲಿ ರೈಲು ಸಂಚರಿಸಬೇಕು. ಇದೇ ವೇಗದಲ್ಲಿದ್ದ ಇಂಟರ್‌ಸಿಟಿ ರೈಲು ಎಂಜಿನ್ ಹಳಿ ತಪ್ಪಿದೆ. ಲೋಕೋ ಪೈಲೆಟ್ (ರೈಲು ಚಾಲಕ) ಸಮಯ ಪ್ರಜ್ಞೆ ಮರೆದಿದ್ದರಿಂದ ದೊಡ್ಡ ಅಪಾಯ ತಪ್ಪಿದೆ.
ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
ರೈಲಿನಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಂಬಂಧಿಕರು, ಸ್ಥಳೀಯರ ನೆರವಿನೊಂದಿಗೆ ಪ್ರಯಾಣಿಕರು ಸಾಗರ, ತಾಳಗುಪ್ಪದ ಕಡೆಗೆ ತೆರಳುತ್ತಿದ್ದಾರೆ.
ರೈಲಿನ ಕಥೆ ಮುಂದೇನು?
ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಹಳಿಯಿಂದ ಕೆಳಗಿಳಿದಿರುವ ಇಂಟರ್‍ಸಿಟಿ ರೈಲನ್ನು ಕುಂಸಿ ನಿಲ್ದಾಣಕ್ಕೆ ತರಲು ಯೋಜಿಸಲಾಗುತ್ತಿದೆ. ಮತ್ತೊಂದು ಎಂಜಿನ್ ಬಳಸಿ ರೈಲನ್ನು ತರಲು ಚಿಂತಿಸಲಾಗುತ್ತಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422