ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 AUGUST 2023
NITTURU : ಮಳೆ ಹಿನ್ನೆಲೆ ಪ್ರವಾಸಿಗರು (Tourism), ಭಕ್ತರ ಸುರಕ್ಷತೆ ದೃಷ್ಟಿಯಿಂದ ಪ್ರಮುಖ ಪ್ರವಾಸಿ ತಾಣ ಕೊಡಚಾದ್ರಿಗೆ (Kodachadri) ವಿಧಿಸಿದ್ದ ನಿರ್ಬಂಧವನ್ನು ವನ್ಯಜೀವಿ ವಿಭಾಗ ತೆರವುಗೊಳಿಸಿದೆ. ಭಾನುವಾರದಿಂದಲೆ ಗಿರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಜೀಪ್ (Jeep) ಮಾಲೀಕರು ಮುಚ್ಚಳಿಕೆ ಬರೆದು ಕೊಟ್ಟರೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಿರ್ಬಂಧ ತೆರವು
ಮಳೆ ಹಿನ್ನೆಲೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜು.30ರಂದು ವನ್ಯಜೀವಿ ವಿಭಾಗ ನಿರ್ಬಂಧ ವಿಧಿಸಿತ್ತು. ಪ್ರವಾಸಿ ತಾಣ ಮತು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದರಿಂದ ಸಾವಿರಾರು ಪ್ರವಾಸಿಗರು ನಿರಾಸೆ ಅನುಭವಿಸಿದ್ದರು. ಅಲ್ಲದೆ ಕೊಡಚಾದ್ರಿ ಗಿರಿಯನ್ನು ನಂಬಿಕೊಂಡು ನೂರಾರು ಕುಟುಂಬಗಳಿವೆ. ಇದೇ ಕಾರಣಕ್ಕೆ ಕಟ್ಟಿನಹೊಳೆ (Kattinahole) ಬಳಿ ಕೊಡಚಾದ್ರಿ ವ್ಯವಸ್ಥಾಪನ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಈಗ ಮಳೆ ಕಡಿಮೆಯಾಗಿದ್ದು ನಿರ್ಬಂಧ ತೆರವು ಮಾಡಲಾಗಿದೆ.
ಜೀಪ್ಗೆ ಕಂಡೀಷನ್
ಕೊಡಚಾದ್ರಿಗೆ ತೆರಳುವ ಜೀಪ್ಗಳಿಗೆ ವನ್ಯಜೀವಿ ವಿಭಾಗ ಷರತ್ತು ವಿಧಿಸಿದೆ. ವಾಹನ ಮಾಲೀಕರು ಮುಚ್ಚಳಿಕೆ ಬರೆದುಕೊಡಬೇಕು ಎಂದು ಸೂಚಿಸಿದೆ. ಮುಚ್ಚಳಿಕೆಯಲ್ಲಿ, ವಾಹನದಲ್ಲಿ ತೆರಳುವ ಸಂದರ್ಭ ಭಕ್ತಾಧಿಗಳು, ಪ್ರವಾಸಿಗರಿಗೆ ಅನಾಹುತವಾದಲ್ಲಿ, ವಾಹನಕ್ಕೆ ಹಾನಿಯಾದರೆ ಮಾಲೀಕರೆ ಹೊಣೆ. ನಿಗದಿತ ಸಮಯದ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಬೇಕು, ನಿಗದಿತ ಸಮಯದೊಳಗೆ ಪ್ರವಾಸಿಗರನ್ನು ಕರೆತರಬೇಕು, ಧ್ವನಿವರ್ಧಕ ಬಳಕೆ ಮಾಡದಿರುವುದು, ಮಾದಕ ವಸ್ತು ನಿರ್ಬಂಧ ಸೇರಿದಂತೆ ವಿವಿಧ ಸೂಚನೆಗಳನ್ನು ಪಾಲಿಸುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಡಬೇಕಿದೆ.
ಇದನ್ನೂ ಓದಿ – ರಾತ್ರೋರಾತ್ರಿ ರೆಸಾರ್ಟ್ ಮೇಲೆ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ, ಏನೇನೆಲ್ಲ ಸಿಕ್ತು?
ಸದ್ಯ ಕೊಡಚಾದ್ರಿ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವಾಗಿರುವುದು ಪ್ರವಾಸಿಗರ ಖುಷಿ ಹೆಚ್ಚಿಸಿದೆ. ಕೇರಳ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರ ಆಗಮನ ಶುರುವಾಗಿದೆ.