ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 MAY 2023
NITTURU : ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಹಸುವಿನ ಕಾಲು ಕಡಿದಿದ್ದಾರೆ. ಕತ್ತಲಾದರು ಹಸು (Cow) ಮನೆಗೆ ಬಾರದಿದ್ದರಿಂದ ಮಾಲೀಕರು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಸುವಿಗೆ ಪಶು ವೈದ್ಯರಿಂದ ಚಕಿತ್ಸೆ ಕೊಡಿಸಲಾಗುತ್ತಿದೆ.
ಹೊಸನಗರ ತಾಲೂಕು ಗೌರಿಕೆರೆಯ ಕೊಡಚಾದ್ರಿ ರಸ್ತೆ ತಿರುವಿನಲ್ಲಿ ಘಟನೆ ಸಂಭವಿಸಿದೆ. ಸಿಡ್ಲಕುಣಿ ನಿವಾಸಿ ಸುಭಾಷ್ ಎಂಬುವವರಿಗೆ ಸೇರಿದ ಹಸುವಿನ (Cow) ಕಾಲು ಕಡಿಯಲಾಗಿದೆ.
ಮೇಯಲು ಹೋಗಿದ್ದ ಹಸು
ಎಂದಿನಂತೆ ಸುಭಾಷ್ ಅವರು ತಮ್ಮ ದನವನ್ನು ಮೇಯಲು ಬಿಟ್ಟಿದ್ದರು. ರಾತ್ರಿ ಬಹು ಹೊತ್ತಿನ ತನಕ ದನ ಮನೆಗೆ ಬಾರದ ಹಿನ್ನೆಲೆ ಹುಡುಕಿಕೊಂಡು ಹೋಗಿದ್ದರು. ಆಗ ರಸ್ತೆ ಬದಿಯಲ್ಲಿ ದನ ಪತ್ತೆಯಾಗಿದೆ. ಕಾಲು ಕಡಿದಿದ್ದರಿಂದ ಎರಡು ಕಾಲಿನ ನರ ತುಂಡಾಗಿದೆ. ದನವನ್ನು ಮನೆಗೆ ಕೊಂಡೊಯ್ದು ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ – ಮಹಿಳೆಗೆ 10 ತಿಂಗಳು ಜೈಲು, ಕಾರಣವಾಯ್ತು ಸಾಮಾಜಿಕ ಜಾಲತಾಣದ ಪೋಸ್ಟ್, ಏನಿದು ಪ್ರಕರಣ?
ಕಾರಲ್ಲಿ ದನ ತುಂಬಿಕೊಂಡು ಹೋಗಿದ್ದರು
ಕೆಲ ತಿಂಗಳ ಹಿಂದೆ ಇದೇ ಸ್ಥಳದಲ್ಲಿ ದುಷ್ಕರ್ಮಿಗಳು ಇನ್ನೋವಾ ಕಾರಿನಲ್ಲಿ ಬಂದು ದನಗಳನ್ನು ತುಂಬಿಕೊಂಡು ಹೋಗಿದ್ದರು. ಈಗ ದನದ ಕಾಲು ಕಡಿಯಲಾಗಿದೆ. ಹಾಗಾಗಿ ಸ್ಥಳಿಯರು ತಮ್ಮ ದನಗಳನ್ನು ಮೇಯಲು ಹೊರ ಬಿಡಲು ಹೆದರುವಂತಾಗಿದೆ.
ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422