ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಇಲ್ಲಿನ ಸೊರಬ ರಸ್ತೆಯ ಚಂದ್ರಮಾವಿನಕೊಪ್ಪಲು ಸಮೀಪ ಆನಂದ್ ಎಂಬುವವರ ಮನೆ ಹಿಂಭಾಗದ ಸುಮಾರು 20 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಗೂಳಿಯನ್ನು (Bull Rescued)  ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಗೂಳಿಯು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ತಂಡವು ಸುಮಾರು ಎರಡು ಗಂಟೆ ಕಠಿಣ ಕಾರ್ಯಾಚರಣೆ ನಡೆಸಿ ಗೂಳಿಯನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.

Bull-rescued-from-the-well-in-Sagara

ಇದನ್ನೂ ಓದಿ » ಜೋಡಿ ಕೊಲೆ ಪ್ರಕರಣ, ಘಟನೆಗೆ ಕಾರಣವೇನು? ಇಲ್ಲಿದೆ ಎಸ್‌ಪಿ ಫಸ್ಟ್‌ ರಿಯಾಕ್ಷನ್

ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಪ್ರಮೋದ್ ಜೋಗಲೆಕ‌ರ್, ಸಿಬ್ಬಂದಿ ನಂದಕುಮಾರ್, ಸಂತೋಷ್, ಜಯಂತ್, ಸತೀಶ್, ಶ್ರೀನಿವಾಸ್, ಸುನೀಲ್ ಮೋರೆ, ಶಿವರಾಜ್, ಭೀಮರಾಜ್ ಪಾಲ್ಗೊಂಡಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment