ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | CRIME | 19 ಏಪ್ರಿಲ್ 2022
ಬಸ್ಸಿನಲ್ಲಿ ಯುವತಿಯೊಬ್ಬಳನ್ನು ಪೀಡಿಸುತ್ತಿದ್ದವನ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಯೊಬ್ಬಳನ್ನು ಹಿಂಬಾಲಿಸಿ ಬಂದು ಬಸ್ಸಿನಲ್ಲಿ ಪೀಡಿಸುತ್ತಿದ್ದ ಆರೋಪ ಸಂಬಂಧ ದೂರು ದಾಖಲಾಗಿತ್ತು.
ಪ್ರವೀಣ ಎಂಬಾತನ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದಾಳೆ. ಯುವತಿ ಕಚೇರಿ ಮುಗಿಸಿ ಬರುವಾಗ ಕಾದು ನಿಂತು, ಆಕೆ ಹತ್ತಿದ ಬಸ್ಸಿಗೆ ಹತ್ತಿ ಯುವಕ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾನಸಿಕ ಹಿಂಸೆ ತಾಳಲಾರದೆ ಯುವತಿಯು ಬಸ್ ಕಂಡಕ್ಟರ್ ಮತ್ತೆ ಡ್ರೈವರ್’ಗೆ ತಿಳಿಸಿದ್ದಾಳೆ. ಅವರು ಕೂಡ ಯುವಕನಿಗೆ ಬುದ್ದಿ ಹೇಳಿದ್ದಾರೆ. ಈ ಹಿಂದೆಯು ಕಿರುಕುಳ ನೀಡುತ್ತಿದ್ದರಿಂದ ಯುವತಿ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಪ್ರವೀಣನಿಗೆ ಪೊಲೀಸರು ಬೈದು ಮುಚ್ಚಳಿಕೆ ಬರೆಸಿಕೊಂಡಿದ್ದರು. ಇದು ಪುನರಾವರ್ತನೆಯಾದ ಹಿನ್ನೆಲೆ ಪ್ರವೀಣನ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ






