SHIVAMOGGA LIVE NEWS | 2 MAY 2024
SAGARA : ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಮೂರು ದಿನಗಳ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ದಿನ ಗಣಪತಿ ಹೋಮ ನಡೆಯಿತು. ವಿದ್ವಾನ್ ಹೃಷಿಕೇಶ ಬಾಯಾರಿ ಬಾರ್ಕೂರ್‌ರವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಜರುಗಿದವು.
ಇದೇ ಸಂದರ್ಭ ಮಾತನಾಡಿದ ವಿದ್ವಾನ್ ಹೃಷಿಕೇಶ ಬಾಯಾರಿ ಬಾರ್ಕೂರ್ ಅವರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಪುಣ್ಯ ಸಂಪಾದಿಸಬೇಕು. ಭಗವಂತ ನಮಗೆ ಎಲ್ಲವನ್ನೂ ಕರುಣಿಸಿದ್ದಾನೆ. ಗಳಿಸಿದ್ದರಲ್ಲಿ ಸ್ವಲ್ಪ ಪಾಲು ದಾನ ಮಾಡಬೇಕು. ಆಗ ಜೀವನಕ್ಕೆ ಅರ್ಥ ಬರಲಿದೆ ಎಂದರು.
40 ವರ್ಷದ ನಂತರ ತಾಯಿ ಮಾರಿಕಾಂಬೆ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವ ನಡೆಯುತ್ತಿದೆ. ಇದು ನಮ್ಮೆಲ್ಲರ ಸುದೈವ. ನಮ್ಮ ಸಮಿತಿ ಊರಿನ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದರ ಜೊತೆಗೆ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ.ಕೆ.ಎನ್.ನಾಗೇಂದ್ರ, ವ್ಯವಸ್ಥಾಪಕ ಸಮಿತಿ ಅಧ್ಯಕ್ಷ
ಇದೇ ಸಂದರ್ಭ ಗಣಪತಿ ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ಮಾರಿಕಾಂಬಾ ದೇವಸ್ಥಾನಕ್ಕೆ ಗಂಗೆಯನ್ನು ತರಲಾಯಿತು. ದೇವಿಯ ತವರು ಮನೆ ಮತ್ತು ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ವಿದ್ವಾನ್ ಹೃಷಿಕೇಶ ಬಾಯರಿ ಬಾರ್ಕೂರ್ ಮತ್ತು ವಾಸುದೇವ ಬಾಯಾರಿ ಅವರ ನೇತೃತ್ವದಲ್ಲಿ ಪೂಜೆ ನೆರವೇರಿತು. ದೇವಸ್ಥಾನ ಸಮಿತಿಯ ಪ್ರಮುಖರು, ಸಾರ್ವಜನಿಕರು ಪೂಜೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಎಷ್ಟಿದೆ ತಾಪಮಾನ? ರಾಜ್ಯದ 5 ಜಿಲ್ಲೆಗಳಿಗೆ ಇವತ್ತು ರೆಡ್ ಅಲರ್ಟ್, 12ಕ್ಕೆ ಆರೆಂಜ್ ಅಲರ್ಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200