ಸಾಗರ: ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಕಾಲವಕಾಶ ಕೋರಿ ಮಲೆನಾಡು ಭಾಗದ ಶಾಸಕರಿಂದ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಸಾಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಕ್ಕುಪತ್ರ, ವನ್ಯಜೀವಿಗಳ ಉಪಟಳ, ಅಡಿಕೆಗೆ ರೋಗಬಾಧೆ ಮತ್ತಿತರ ಸಮಸ್ಯೆಗಳು ಮಲೆನಾಡು ಜನರನ್ನು ಪ್ರತಿನಿತ್ಯ ಕಾಡುತ್ತಿವೆ. ಈ ಬಗ್ಗೆ ಶಾಸನ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಲೆನಾಡು ಭಾಗದ ಶಾಸಕರೆಲ್ಲರೂ ಪಕ್ಷಾತೀತವಾಗಿ ಸಹಿ ಮಾಡಿ ಸ್ಪೀಕರಿಗೆ ಪತ್ರ ತಲುಪಿಸಿದ್ದೇವೆ ಎಂದರು.
ಮಾನವ-ವನ್ಯಜೀವಿ ಸಂಘರ್ಷ ಈಚೆಗೆ ತೀವ್ರವಾಗಿದೆ. ವನ್ಯಜೀವಿಗಳಿಂದ ಆದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡುತ್ತಿದೆ. ಮಂಗಗಳ ಹಿಡಿದು ದೊಡ್ಡ ಅರಣ್ಯಗಳಿಗೆ ಬಿಡಲು ಅವಕಾಶ ನೀಡಲಾಗಿದೆ. ಮಂಗನ ಪಾರ್ಕ್ ಬಗ್ಗೆ ಮಾಹಿತಿ ಇಲ್ಲ. ಅದು ನಮ್ಮ ಯೋಜನೆಯೂ ಅಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ » ಶಿವಮೊಗ್ಗದ FDA ಬಳಿ ಕೋಟಿ ಕೋಟಿಯ ಆಸ್ತಿ, ಲೋಕಾಯುಕ್ತ ದಾಳಿಯಲ್ಲಿ ಏನೇನೆಲ್ಲ ಸಿಕ್ತು?
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಗಣಪತಿ ಮಂಡಗಳಲೆ, ಜಾಕೀರ್ ಉಪಸ್ಥಿತರಿದ್ದರು.
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





