ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 28 JUNE 2023
ANANDAPURA : ಇಬ್ಬರು ಹೆಣ್ಮಕ್ಕಳ ಮದುವೆಗೆ (Marriage) ಅಂತಿಮ ಸಿದ್ಧತೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆ ಹಿಂದಿನ ದಿನ ಘಟನೆ ಸಂಭವಿಸಿದ್ದು, ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕ ಆವರಿಸಿದೆ.
ಬನವಾಸಿ ನಿವಾಸಿ ಮಂಜುನಾಥ ಗೌಡ (58) ಮೃತ ದುರ್ದೈವಿ. ಆನಂದಪುರ ಸಮೀಪದ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದು ಹೋಗುತ್ತಿದ್ದಾಗ ಮಂಜುನಾಥ ಗೌಡ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಅವರು ಅಸುನೀಗಿದ್ದಾರೆ.
ಹೆಣ್ಮಕ್ಕಳ ಮದುವೆಗೆ ಅಂತಿಮ ಸಿದ್ಧತೆ
ಮಂಜುನಾಥ ಗೌಡ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇಬ್ಬರ ಮದುವೆಯು (Marriage) ಇಂದು ನಿಗದಿಯಾಗಿತ್ತು. ಈ ಹಿನ್ನೆಲೆ ಮದುವೆ ಕಾರ್ಯದ ಅಂತಿಮ ಸಿದ್ಧತೆ ನಡೆಸುತ್ತಿದ್ದರು. ಕಾರ್ಯಕ್ರಮಕ್ಕೆ ಬೇಕಾದ ಸಾಮಗ್ರಿ ಖರೀದಿಸಲು ಅವರು ಮಂಗಳವಾರ ಆನಂದಪುರಂಗೆ ತೆರಳಿದ್ದರು. ಅಲ್ಲಿಂದ ಮನೆಗೆ ಮರಳುವಾಗ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲೇ ಮಡಿದಿದ್ದರು ಪತ್ನಿ
ಮಂಜುನಾಥ ಗೌಡ ಅವರ ಪತ್ನಿ ಕೂಡ ಇದೆ ರೀತಿ ದುರ್ಘಟನೆಯಲ್ಲಿ ಮೃತಪಟ್ಟಿದ್ದರು ಎಂದು ತಿಳಿದು ಬಂದುದೆ. ಮೂರು ವರ್ಷದ ಹಿಂದೆ ಬನವಾಸಿಯಲ್ಲಿ ಸಂಭವಿಸಿದ ಟ್ರ್ಯಾಕ್ಟರ್ ಅಪಘಾತದಲ್ಲಿ ಪತ್ನಿ ಮೃತಪಟ್ಟಿದ್ದರು. ಈಗ ಮಂಜುನಾಥ ಗೌಡ ಅವರ ಮೃತರಾಗಿದ್ದು, ಮಕ್ಕಳು ತಂದೆ – ತಾಯಿ ಇಬ್ಬರು ಕಳೆದುಕೊಂಡು ದುಃಖದಲ್ಲಿದ್ದಾರೆ.
ಇದನ್ನೂ ಓದಿ – ಲಂಚದ ಹಣ ಪಡೆಯುತ್ತಿದ್ದಾಗ ಮಹಿಳಾ ಅಧಿಕಾರಿ ಎದುರಿಗೆ ಲೋಕಾಯುಕ್ತ ಪೊಲೀಸರು ಪ್ರತ್ಯಕ್ಷ
ನಿಗದಿಯಂತೆ ಮದುವೆ ಕಾರ್ಯ
ಘಟನೆ ಹಿನ್ನೆಲೆ ಮದುವೆ ಕಾರ್ಯ ನಡೆಸಬೇಕೋ, ಮುಂದೂಡಬೇಕೋ ಎಂಬ ಗೊಂದಲ ಮೂಡಿತ್ತು. ಕೊನೆಗೆ ಹಿರಿಯರ ಸಮಕ್ಷಮದಲ್ಲಿ ಮದುವೆ ಕಾರ್ಯ ಮುಂದುವರೆಸಲು ನಿರ್ಧರಿಸಲಾಯಿತು. ಅದರಂತೆ ಇಂದು ಮಂಜುನಾಥ ಗೌಡ ಅವರ ಇಬ್ಬರು ಹೆಣ್ಣು ಮಕ್ಕಳ ಮದುವೆ ನಡೆಯಲಿದೆ.
ಇದನ್ನೂ ಓದಿ – ಭದ್ರಾವತಿಯ ಯುವಕನಿಗೆ 3 ವರ್ಷ ಜೈಲು, 2.88 ಲಕ್ಷ ರೂ. ದಂಡ, ಕಾರಣವೇನು?
ಮಂಜುನಾಥ ಗೌಡ ಅವರ ಮರಣೋತ್ತರ ಪರೀಕ್ಷೆ ಬಳಿಕ ಬನವಾಸಿಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422