ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 FEBRUARY 2023
SAGARA : ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ದೇವಿ ಜಾತ್ರೆ (Marikamba Jathre) ಇಂದಿನಿಂದ ಆರಂಭವಾಗಲಿದೆ. ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದೆ. 9 ದಿನದ ಜಾತ್ರೆ ಅವಧಿಯಲ್ಲಿ ತಾಯಿಯು ಒಂದು ದಿನ ತವರು ಮನೆಯಲ್ಲಿ, 8 ದಿನ ಗಂಡನ ಮನೆಯಲ್ಲಿ ದರ್ಶನ ನೀಡುತ್ತಾಳೆ. ದೇವಿಯನ್ನು ಕಣ್ತುಂಬಿಕೊಳ್ಳಲು, ಆಕೆಯ ಆಶೀರ್ವಾದ ಪಡೆಯಲು ನಿತ್ಯ ಸಾವಿರ ಸಾವಿರ ಭಕ್ತರು ಆಗಮಿಸುತ್ತಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇಂದಿನ ಪೂಜೆ, ದರ್ಶನ
ಇವತ್ತು ಸಾಗರದ ಮಹಾಗಣಪತಿ ದೇವಸ್ಥಾನದಲ್ಲಿ ಮಾಂಗಲ್ಯ ಪೂಜೆ, ಬ್ರಾಹ್ಮಿ ಮುಹೂರ್ತದಲ್ಲಿ ತಾಯಿಗೆ ದೃಷ್ಟಿ ಇಡುವುದು, ಮಾಂಗಲ್ಯ ಧಾರಣೆ ಕಾರ್ಯಕ್ರಮ ನಡೆಯಿತು. ಬೆಳಗಿನ ಜಾವ 3 ಗಂಟೆಗೆ ಅರ್ಚಕ ರಮೇಶ್ ಭಟ್ಟ ಅವರ ಮನೆಯಲ್ಲಿ ಪೂಜೆ ನಡೆಯಿತು. ಬಳಿಕ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಮಂಗಳ ದ್ರವ್ಯ ತರಲಾಯಿತು. ದೇವಿಯ ತವರು ಮನೆಯಲ್ಲಿ ಉತ್ಸವ ಮೂರ್ತಿಗೆ ಆಭರಣ ತೊಡಿಸಿ ಪೂಜೆ ಸಲ್ಲಿಸಲಾಯಿತು. ರಾತ್ರಿಯಿಂದಲೆ ಭಕ್ತರು ದೇವಿಯ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು.
ಇವತ್ತು ರಾತ್ರಿ ಮೆರವಣಿಗೆ
ಚಿಕ್ಕಮ್ಮನನ್ನು ಹೊರಡಿಸುವ ಶಾಸ್ತ್ರ ನಡೆಯಲಿದೆ. ಆ ಬಳಿಕ 9 ಮನೆಯಿಂದ ಘಟೇವು ತರಲಾಗುತ್ತದೆ. ಜಾತ್ರೆ ಅವಧಿ ಮುಗಿಯುವವರೆಗು ಅದನ್ನು ತಾಯಿಯ ಮುಂದೆ ಇಡಲಾಗುತ್ತದೆ. ಇನ್ನು, ಇವತ್ತು ರಾತ್ರಿ ಪೋತರಾಜನಿಂದ ಚಾಟಿಸೇವೆ ನಡೆಯಲಿದೆ. ಆ ಬಳಿಕ ಹೆಣ್ಣು ಒಪ್ಪಿಸುವ ಶಾಸ್ತ್ರ ನೆರವೇರಲಿದೆ. ರಾತ್ರಿ ವಿವಿಧ ಕಲಾ ತಂಡಗಳ ಮೂಲಕ ತಾಯಿಯ ಮೆರವಣಿಗೆ ನಡೆಯಲಿದೆ.
ಗಂಡನ ಮನೆಯಲ್ಲಿ ಪ್ರತಿಷ್ಠಾಪನೆ
ಫೆ.8ರಂದು ಗಂಡನ ಮನೆಯಲ್ಲಿ ತಾಯಿಯ ಪ್ರತಿಷ್ಠಾಪನೆ ನೆರವೇರಲಿದೆ. ಉಳಿದ 8 ದಿನ ಶ್ರೀ ಮಾರಿಕಾಂಬ ದೇವಿಯು ಗಂಡನ ಮನೆಯಲ್ಲಿ ದರ್ಶನ ನೀಡಲಿದ್ದಾಳೆ. ಆಕೆಯ ದರ್ಶನಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಧಾರ್ಮಿಕ ವಿಧಿವಿಧಾನ, ಪೂಜೆಗಳು ನಿತ್ಯ ನಡೆಯಲಿವೆ.
ಗಾಂಧಿ ಮೈದಾನದಲ್ಲಿ ಕಲಾ ವೇದಿಕೆ
ಮಾರಿಕಾಂಬ ದೇವಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿರುವ ಗಾಂಧಿ ಮೈದಾನದಲ್ಲಿ ಕಲಾ ವೇದಿಕೆ ನಿರ್ಮಿಸಲಾಗಿದೆ. ಫೆ.8ರಿಂದ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ನೆಹರು ಮೈದಾದನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್
ಈವರೆಗೂ ಗಾಂಧಿ ಮೈದಾನದಲ್ಲಿ ನಡೆಯುತ್ತಿದ್ದ ಅಮ್ಯೂಸ್ಮೆಂಟ್ ಪಾರ್ಕನ್ನು ನೆಹರು ಮೈದಾನಕ್ಕೆ ವರ್ಗಾಯಿಸಲಾಗಿದೆ. ವಿವಿಧ ಆಟಿಕೆಗಳ ಪರಿಕರಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗ್ಯವಿರುವುದರಿಂದ ನೆಹರು ಮೈದಾನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಫೆ.7ರಂದು ಸಂಜೆ 5 ಗಂಟೆಗೆ ಅಮ್ಯೂಸ್ಮೆಂಟ್ ಪಾರ್ಕ್ ಉದ್ಘಾಟನೆ ನೆರವೇರಲಿದೆ. ಫೆ.10ರಂದು ಮಧ್ಯಾಹ್ನ 3 ಗಂಟೆಗೆ ಸಂತ ಜೋಸೆಫರ ಶಾಲೆ ಮುಂಭಾಗದ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.
ಸಾಗರ ಮಾರಿಕಾಂಬ ದೇವಿ ಜಾತ್ರೆಯಲ್ಲಿ (Marikamba Jathre) ಪ್ರತಿ ದಿನ ಸಾವಿರ ಸಾವಿರ ಜನರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆ ವಾಹನ ಸಂಚಾರ, ಜನ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ. ಇನ್ನು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ – ಕೋಟೆ ದೇಗುಲದಲ್ಲಿ ಬ್ರಹ್ಮರಥೋತ್ಸವ | ಶೇ.50 ದಂಡದ ಜಾಗೃತಿಗಿಳಿದ ಇನ್ಸ್ ಪೆಕ್ಟರ್ | ಶಿವಮೊಗ್ಗ ನಗರದ 3 ನ್ಯೂಸ್