ಸರ್ಕಾರಿ ಆಸ್ಪತ್ರೆಗೆ ಎಂಎಲ್‌ಎ ದಿಢೀರ್‌ ಭೇಟಿ, ಏನೇನೆಲ್ಲ ಚೆಕ್‌ ಮಾಡಿದರು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 11 JUNE 2024

SAGARA : ಉಪವಿಭಾಗೀಯ ಆಸ್ಪತ್ರೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ವಾರ್ಡ್‌ಗೆ ತೆರಳಿ ರೋಗಿಗಳು, ಅವರ ಸಂಬಂಧಿ ಜೊತೆಗೆ ಮಾತನಾಡಿದರು. ಬಳಿಕ ವೈದ್ಯರು ಮತ್ತು ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. ಈ ಸಂದರ್ಭ ಕೆಲ ವೈದ್ಯರು ವಿಳಂಬವಾಗಿ ಹಾಜರಾಗುತ್ತಿರುವ ವಿಚಾರ ತಿಳಿದು ತರಾಟೆಗೆ ತೆಗೆದುಕೊಂಡರು.

11 ಗಂಟೆಯಾದರೂ ಬರುವುದಿಲ್ಲ

ಪರಿಶೀಲನೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಕೆಲವು ವೈದ್ಯರು ಬೆಳಗ್ಗೆ 11 ಗಂಟೆಯಾದರೂ ಕರ್ತವ್ಯಕ್ಕೆ ಹಾಜರಾಗದ ಕುರಿತು ನನ್ನ ಗಮನಕ್ಕೆ ಬಂದಿದೆ. ಅಂತಹ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇದು ಪುನರಾವರ್ತನೆಯಾದರೆ ಅಮಾನತು ಮಾಡಲಾಗುತ್ತದೆ ಎಂದರು ಎಚ್ಚರಿಸಿದರು.

ಮುತುವರ್ಜಿಯಿಂದ ಕೆಲಸ ಮಾಡಿ

ಡೆಂಗ್ಯು ಪ್ರಕರಣಗಳು ಹೆಚ್ಚಾಗಿವೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಿತ್ಯ 20 ರಿಂದ 30 ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದರ್ಭ ವೈದ್ಯರು ಮತ್ತು ಸಿಬ್ಬಂದಿ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕು. ಉತ್ತಮ ಚಿಕಿತ್ಸೆ ಕಾರಣಕ್ಕೆ ಶಿಕಾರಿಪುರ, ಸೊರಬ ಸೇರಿ ಸುತ್ತಮುತ್ತಲ ತಾಲೂಕಿನ ಜನರು ಇಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಆದ್ದರಿಂದ ವೈದ್ಯರ ಮೇಲೆ ಒತ್ತಡವಿದೆ ಎಂದು ತಿಳಿಸಿದರು.

Beluru Gopalakrishna visit to Sagara Hospital

ಸಿವಿಲ್‌ ಸರ್ಜನ್‌ ಡಾ. ಕೆ.ಪರಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ, ತಾರಾಮೂರ್ತಿ, ಅಶೋಕ್‌ ಬೇಳೂರು, ರವಿಕುಮಾರ್‌ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ – ಕುಮಾರಸ್ವಾಮಿಗೆ ಉಕ್ಕು ಖಾತೆ, ಭದ್ರಾವತಿಯಲ್ಲಿ ಚಿಗುರೊಡೆದ ನಿರೀಕ್ಷೆ, ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment