ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸಾಗರ: ಸಿಗಂದೂರು ಚೌಡೇಶ್ವರಿ (sigandur temple) ದೇವಸ್ಥಾನದಲ್ಲಿ ಸೆ.22ರಿಂದ ಅ.2ವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಏನೆಲ್ಲ ಕಾರ್ಯಕ್ರಮ ಇರಲಿದೆ?
ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿ ದಿನ ದೇವಿಗೆ ಪ್ರಾತಃಕಾಲದಲ್ಲಿ ಪೂಜೆ, ತೈಲಾಭಿಷೇಕ, ಶೈಲಪುತ್ರಿ ಆರಾಧನೆ, ಶುದ್ದಿ ಪುಣ್ಯಾಹ, ಗಣಹೋಮ, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅಲಂಕಾರ ಪೂಜೆ ನೆಡೆಯಲಿದೆ.
ನವರಾತ್ರಿ ಪ್ರಯುಕ್ತ ದೇವಿಗೆ ನಿತ್ಯ ದುರ್ಗಾಹವನ, ಚಂಡಿಕಾ ಹೋಮ, ನವಚಂಡಿಕಾ ಹೋಮ, ಗುರುಗಳ ಆರಾಧನೆ ನೆಡೆಯಲಿದೆ. ಮಧ್ಯಾಹ್ನ 12.30ಕ್ಕೆ ನೈವೇದ್ಯ, ಸಂಜೆ 7.30ರಿಂದ ದೀಪೋತ್ಸವ, 8ರಿಂದ ಅಷ್ಟವಧಾನ ಸೇವೆ, ಮಹಾಮಂಗಳಾರಾತಿ ಜರುಗಲಿದೆ. ಧರ್ಮಾಧಿಕಾರಿ ಎಸ್.ರಾಮಪ್ಪ ನೇತೃತ್ವದಲ್ಲಿ ಕಾರ್ಯಕ್ರಮಗಳು ನೆಡೆಯಲಿವೆ.

ಪ್ರತಿ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಸತಿ ವ್ಯವಸ್ಥೆ, ದರ್ಶನ ನಿತ್ಯ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ » ಪ್ರವಾಸಿಗರಿಗೆ ಗುಡ್ ನ್ಯೂಸ್, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, ಆಗಮನದ ದಿನಾಂಕ ಫಿಕ್ಸ್
navaratri utsava in sigandur temple
LATEST NEWS
- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು















