SHIVAMOGGA LIVE NEWS | BUS ACCIDENT | 25 ಏಪ್ರಿಲ್ 2022
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಖಾಸಗಿ ಬಸ್’ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಾಗರದ KSRTC ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ.
ಸಾಗರ ಪಟ್ಟಣದ ಅಗಡಿ ಮಠದ ನಿವಾಸಿ ಮಹಾದೇವ ನಾಯ್ಕ್ ಮೃತರು. ಕಾರ್ಗಲ್’ನಲ್ಲಿ ಹೊಟೇಲ್ ಕೆಲಸ ಮುಗಿಸಿ ರಾತ್ರಿ ಖಾಸಗಿ ಬಸ್’ನಲ್ಲಿ ಸಾಗರಕ್ಕೆ ಮರಳುವಾಗ ಘಟನೆ ಸಂಭವಿಸಿದೆ.
KSRTC ಬಸ್ ನಿಲ್ದಾಣ ಬಳಿ ಇಳಿಯಲು ಬಾಗಿಲು ಬಳಿ ಬಂದಾಗ, ಖಾಸಗಿ ಬಸ್ ಚಾಲಕ ಅಜಾಗರೂಕತೆ ಮತ್ತು ವೇಗವಾಗಿ ಚಲಿಸಿದ್ದಾನೆ. ಆಯಾತಪ್ಪಿ ರಸ್ತೆಗೆ ಬಿದ್ದ ಮಹಾದೇವ ನಾಯ್ಕ್ ಅವರ ತಲೆ ಮತ್ತು ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ಕೂಡಲೆ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಿಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಹಾದೇವ ನಾಯ್ಕ್ ಮೃತರಾಗಿದ್ದಾರೆ. ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಕ್ಲಬ್ ಮೇಲೆ ದಾಳಿ, ಕಾರ್ಪೊರೇಟರ್ ಪತಿ, ಮಾಜಿ ಕಾರ್ಪೊರೇಟರ್ ಸೇರಿ ಹಲವರು ವಶಕ್ಕೆ
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






