ಶಿವಮೊಗ್ಗದ ಲೈವ್.ಕಾಂ | SAGARA / HOSANAGARA NEWS | 23 ಜನವರಿ 2022
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಖಾಸಗಿ ಬಸ್ ಸಂಸ್ಥೆ ಮಾಲೀಕರೊಬ್ಬರು ದಿಢೀರ್ ನಾಪತ್ತೆಯಾಗಿದ್ದಾರೆ. ಅವರ ಕಾರು, ಮೊಬೈಲ್ ಫೋನ್ ಪಟಗುಪ್ಪೆ ಸೇತುವೆ ಮೇಲೆ ಸಿಕ್ಕಿದೆ.
ಸಾಗರದ ಪ್ರಕಾಶ್ ಟ್ರಾವೆಲ್ಸ್ ಸಂಸ್ಥೆ ಮಾಲೀಕ ಪ್ರಕಾಶ್ ಅವರು ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ. ಮನೆಯಿಂದ ಕಾರಿನಲ್ಲಿ ಹೊರಟ ಪ್ರಕಾಶ್ ಅವರು ಹಿಂತಿರುಗಿಲ್ಲ. ಹಾಗಾಗಿ ಕುಟುಂಬದವರು ಕರೆ ಮಾಡಿದ್ದಾರೆ. ಯಾವುದೆ ಕರೆಗಳನ್ನು ಸ್ವೀಕರಿಸದ ಹಿನ್ನೆಲೆ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದ್ದಾರೆ.
♦ ಸೇತುವೆ ಮೇಲಿತ್ತು ಕಾರು, ಮೊಬೈಲ್
ಶನಿವಾರ ಬೆಳಗ್ಗೆ ಪ್ರಕಾಶ್ ಅವರ ಕಾರು ಹೊಸನಗರ ತಾಲೂಕು ಪಟಗುಪ್ಪೆ ಸೇತುವೆ ಮೇಲೆ ಸಿಕ್ಕಿದೆ. ಕಾರಿನ ಒಳಗೆ ಮೊಬೈಲ್ ಫೋನ್ ಇತ್ತು. ಕಾರಿನಿಂದ ಸ್ವಲ್ಪ ದೂರದಲ್ಲಿ ಸೇತುವೆ ಪ್ರಕಾಶ್ ಅವರ ಚಪ್ಪಲಿಗಳೂ ಸಿಕ್ಕಿವೆ.
♦ ಶೋಧ ಕಾರ್ಯ ಆರಂಭ
ಪಟಗುಪ್ಪೆ ಸೇತುವೆ ಸುತ್ತಮುತ್ತ ಶನಿವಾರ ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಡೀ ದಿನ ಹುಡುಕಿದರೂ ಪ್ರಕಾಶ್ ಅವರ ಸುಳಿವು ಸಿಕ್ಕಿಲ್ಲ. ಇವತ್ತೂ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.
♦ ನಾಪತ್ತೆ ದೂರು ದಾಖಲು
ಪ್ರಕಾಶ್ ಅವರು ನಾಪತ್ತೆಯಾಗಿರುವ ಕುರಿತು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕಾಶ್ ಅವರ ಕುಟುಂಬದ ರಂಜಿತ್ ಎಂಬುವವರು ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
ಸಾಗರ ಭಾಗದಲ್ಲಿ ಪ್ರಕಾಶ್ ಟ್ರಾವೆಲ್ಸ್ ಚಿರಪರಿಚಿತ. ಸುಮಾರು 20 ವರ್ಷದಿಂದ ಬಸ್ಸುಗಳ ಸೇವೆ ಇದೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಸಾಗರವನ್ನು ಸಂಪರ್ಕಿಸುತ್ತಿದ್ದವು. ಕೊರೋನ ಲಾಕ್ ಡೌನ್ ಆದ ಬಳಿಕ ಪ್ರಕಾಶ್ ಟ್ರಾವೆಲ್ಸ್ ಸಂಸ್ಥೆ ದೊಡ್ಡ ಪ್ರಮಾಣದ ನಷ್ಟ ಅನುಭವಿಸಿತ್ತು ಎಂದು ಹೇಳಲಾಗುತ್ತಿದೆ.

LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






