SHIVAMOGGA LIVE NEWS | 25 ಮಾರ್ಚ್ 2022
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಈ ಭಾರಿಯೂ ರಾಯಲ್ ಚಾಲೆಂಜರ್ಸ್ (RCB) ಕ್ರೇಜ್ ಜೋರಾಗಿದೆ. ಅಭಿಮಾನಿಯೊಬ್ಬರು RCBಗಾಗಿ ತಮ್ಮ ಕಾರಿಗೆ ಹೊಸ ರೂಪ ಕೊಟ್ಟಿದ್ದಾರೆ.
ಸಾಗರದ ಸದ್ಗುರು ಸಂತೋಷ್ ಅವರು RCB ತಂಡದ ಅಪ್ಪಟ ಅಭಿಮಾನಿ. ಇದೆ ಕಾರಣಕ್ಕೆ ತಮ್ಮ ಫಿಯಟ್ ಕಾರಿಗೆ ಹೊಸ ಲುಕ್ ಕೊಟ್ಟಿದ್ದಾರೆ. ಈ ಕಾರು ಸಾಗರದಲ್ಲಿ ಜನರ ಗಮನ ಸೆಳೆಯುತ್ತಿದೆ. ಸೆಲ್ಫಿ, ಫೋಟೊಗಾಗಿ ಜನರು ಮುಗಿಬಿದ್ದಿದ್ದಾರೆ.
1980ರ ಮಾಡೆಲ್ ಕಾರು
ಸದ್ಗುರು ಹೊಟೇಲ್ ಸಂತೋಷ್ ಅವರು 1980ರ ಫಿಯಟ್ ಕಾರಿಗೆ ಹೊಸ ಲುಕ್ ಕೊಟ್ಟಿದ್ದಾರೆ. ‘ಹಳೆಯದನ್ನೆಲ್ಲ ಉಳಿಸಿಕೊಂಡು ಹೋಗಬೇಕು. ಆ ಕಾರಣಕ್ಕೆ ಹಳೆಯ ಫಿಯಟ್ ಖರೀದಿಸಿದ್ದೇನೆ. ನಾನು RCB ಅಭಿಮಾನಿ. ಆದ್ದರಿಂದ ಕಾರಿಗೆ RCB ಸ್ಟಿಕರ್ ಮಾಡಿಸಿದ್ದೇನೆ’ ಅನ್ನುತ್ತಾರೆ ಸದ್ಗುರು ಸಂತೋಷ್.
‘ಈ ಸಲ ಕಪ್ ನಮ್ದೆ’
ಕಾರಿನ ಮುಂಭಾಗದ ಬಾನೆಟ್ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆಯಿಸಿದ್ದಾರೆ. ಬಾನೆಟ್’ನ ಮುಂಭಾಗ ನಟ ಡಾ.ರಾಜಕುಮಾರ್ ಅವರ ಭಾವಚಿತ್ರದ ಸ್ಟಿಕರಿಂಗ್ ಮಾಡಿಸಿದ್ದಾರೆ. ‘ಕಾರಿನ ಮೇಲೆ ನಟರಾದ ಶಂಕರನಾಗ್, ಡಾ.ವಿಷ್ಣುವರ್ಧನ್, ಡಾ.ಪುನೀತ್ ರಾಜಕುಮಾರ್ ಅವರ ಫೋಟೊಗಳಿವೆ. ಮುಂಭಾಗದಲ್ಲಿ ಡಾ.ರಾಜಕುಮಾರ್ ಅವರ ದೊಡ್ಡ ಫೋಟೊ ಇದೆ’ ಅನ್ನುತ್ತಾರೆ ಸದ್ಗುರು ಸಂತೋಷ್.
ಪೆಟ್ರೋಲ್ ಟ್ಯಾಂಕ್ ಮೇಲೆ ಅಚ್ಚೇ ದಿನ್
ಇವೆಲ್ಲದರ ನಡುವೆ ಪೆಟ್ರೋಲ್ ಟ್ಯಾಂಕ್ ಮೇಲೆ ಬರೆಯಿಸಿರುವ ಪದ ಹಲವರ ಗಮನ ಸೆಳೆಯುತ್ತಿದೆ. ಅಚ್ಚೇ ದಿನ್ ಎಂದು ಸ್ಟಿಕರ್ ಹಾಕಿಸಿದ್ದಾರೆ. ‘ವಿಡಂಬನಾತ್ಮಕವಾಗಿ ಅಚ್ಚೇ ದಿನ್ ಎಂದು ಬರೆಯಿಸಿದ್ದೇನೆ. ಈ ಭಾರಿ ನಮ್ಮ ತಂಡ ಕಪ್ ಗೆಲ್ಲಬಹುದು ಎಂಬ ಕಾರಣಕ್ಕೆ ಅಚ್ಚೇ ದಿನ್ ಎಂದುಕೊಳ್ಳಬಹುದು. ಮತ್ತೊಂದು ಕಡೆ ಪೆಟ್ರೋಲ್ ರೇಟ್ ದುಬಾರಿಯಾಗಿರುವುದು ಅಚ್ಚೇ ದಿನ್ ಎಂದು ತಿಳಿದು ಕೊಳ್ಳಬಹುದು’ ಅನ್ನುತ್ತಾರೆ ಸದ್ಗುರು ಸಂತೋಷ್.
ಕಾರಿನ ವಿಡಿಯೋ ವರೈಲ್
ಇನ್ನು, RCB ಮೇಲಿನ ಅಭಿಮಾನ, ಕಾರಿಗೆ ಹೊಸ ಲುಕ್ ಕೊಟ್ಟಿರುವುದನ್ನು ಸದ್ಗುರು ಸಂತೋಷ್ ಅವರು ವಿಡಿಯೋ ರೆಕಾರ್ಡ್ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. RCB ತಂಡದ ಪರವಾಗಿ ಇರುವ ಅಭಿಮಾನಿಗಳಿಗೆ ಜೋಶ್ ನೀಡಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಐಪಿಎಲ್ ಹೊತ್ತಿಗೆ ತಮ್ಮ ಸ್ಕೂಟರ್’ಗೆ ಐಪಿಎಲ್ ಸ್ಟಿಕರ್ ಮಾಡಿಸಿ ಸಂತೋಷ್ ಅವರು ಸುದ್ದಿಯಾಗಿದ್ದರು. ಈಗಲೂ ಆ ಸ್ಕೂಟರ್ ಹಲವರ ಗಮನ ಸೆಳೆಯುತ್ತಿದೆ. ಈ ಭಾರಿ ಫಿಯಟ್ ಕಾರಿಗೆ ಐಪಿಎಲ್ ಲುಕ್ ಕೊಟ್ಟಿದ್ದಾರೆ. ಇದು ಕೂಡ ಈಗ ಫೋಟೊ, ಸೆಲ್ಫಿ ಪ್ರಿಯರು, RCB ಅಭಿಮಾನಿಗಳನ್ನು ಸೆಳೆಯುತ್ತಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200