ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 21 ಅಕ್ಟೋಬರ್ 2020
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತುರುವುದು ಅಥವಾ ಮಠಗಳಿಗೆ ವಹಿಸಿಕೊಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಲಪ್ಪ, ಸಿಗಂದೂರು ದೇವಸ್ಥಾನಕ್ಕೆ ರಾಮಪ್ಪ ಅವರೆ ಧರ್ಮದರ್ಶಿಯಾಗಿ ಮುಂದುವರೆಯಬೇಕು. ಶೇಷಗಿರಿ ಭಟ್ ಅವರೆ ಪ್ರಧಾನ ಅರ್ಚಕರಾಗಿರಬೇಕು ಎಂದರು.
ರಾಮಪ್ಪ ಅವರ ಮುಗ್ಧತೆ ದುರುಪಯೋಗ
ಚಿಕ್ಕ ವಯಸ್ಸಿನಿಂದಲೂ ಸಿಗಂದರೂ ಕ್ಷೇತ್ರಕ್ಕೆ ಹೋಗಿ ಬರುತ್ತಿದ್ದೇನೆ. ಸಣ್ಣಪುಟ್ಟ ವಿವಾದವಾದರೂ ಹೊಂದಿಕೊಂಡು ಹೋಗುತ್ತಿದ್ದರು. ಆದರೆ ಧರ್ಮದರ್ಶಿ ರಾಮಪ್ಪ ಅವರ ಮುಗ್ಧತೆಯನ್ನು ದುರಪಯೋಗ ಮಾಡಿಕೊಂಡು ಕೆಲವರು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಸ್ವಯಂ ಘೋಷಿತ ಸಂಘಟನೆಗಳು ಇದರ ಹಿಂದಿವೆ ಎಂದು ಆರೋಪಿಸಿದರು.
ಸಂಧಾನಕ್ಕೆ ರಾಮಪ್ಪ ಅವರು ಬರಲಿಲ್ಲ
ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರ ನಡುವೆ ಸಂಧಾನಕ್ಕೆ ಪ್ರಯತ್ನ ನಡೆಸಲಾಯಿತು. ಆದರೆ ಬೇರೆ ಬೇರೆ ಕಾರಣಕ್ಕೆ ರಾಮಪ್ಪ ಅವರು ಸಭೆಗೆ ಬರಲಿಲ್ಲ. ಸಂಧಾನ ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಇರಬೇಕು ಎಂದು ರಾಮಪ್ಪ ಅವರೆ ಕೇಳಿಕೊಂಡಿದ್ದರು. ಆದರೆ ರಾಮಪ್ಪ ಅವರೆ ಸಂಧಾನ ಸಭೆಗೆ ಬರಲಿಲ್ಲ ಎಂದು ಹಾಲಪ್ಪ ಬೇಸರ ವ್ಯಕ್ತಪಡಿಸಿದರು.
ಸಮಾಜ ಒಡೆಯುವ ಕೆಲಸ
2015ರಲ್ಲಿ ಕೆಲವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಆಗ ತಾವಿನ್ನು ಶಾಸಕರಾಗಿರಲಿಲ್ಲ. ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಿಬೇಕು ಎಂದು ಒತ್ತಾಯಿಸಿದ್ದಾರೆ. ಸಿಗಂದೂರು ದೇವಸ್ಥಾನವನ್ನು ಮುಂದಿಟ್ಟುಕೊಂಡು ಕೆಲವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹರತಾಳು ಹಾಲಪ್ಪ ಆರೋಪಿಸಿದರು.
ಎಪಿಎಂಸಿ ಅಧ್ಯಕ್ಷ ಚೇತನ್‍ರಾಜ್ ಕಣ್ಣೂರು, ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಮಧುರಾ ಶಿವಾನಂದ್, ನಾಗರಾಜ್ ಬೊಬ್ಬಿಗೆ, ಬಿ.ಟಿ.ರವೀಂದ್ರ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422