ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 22 ಅಕ್ಟೋಬರ್ 2020
ತೀವ್ರ ವಿವಾದಕ್ಕೆ ಕಾರಣವಾಗಿದ್ದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನಡುವಿನ ಸಂಘರ್ಷ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಸುಖಾಂತ್ಯ ಕಂಡಿದೆ. ಹೊಂದಿಕೊಂಡು ಹೋಗುವುದಾಗಿ ಎರಡು ಕಡೆಯವರು ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ
ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರಿಗೆ ಹೋಮ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿ ದೇಗುಲದ ಭಕ್ತರಾದ ನವೀನ್ ಜೈನ್ ಮತ್ತು ಸಂದೀಪ್ ಜೈನ್ ಹುಲಿದೇವರಬನ ಅವರು ಸಾಗರದ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪೂಜೆಗೆ ಅವಕಾಶ ನೀಡಬೇಕು, ಧರ್ಮದರ್ಶಿ ರಾಮಪ್ಪ ಮತ್ತು ಅವರ ಮಗ ರವಿಕುಮಾರ್ ವಿರುದ್ಧ ನಿರ್ಬಂಧಕಾಜ್ಞೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಎರಡು ಕಡೆಯವರು ಕೋರ್ಟ್‍ಗೆ ಹಾಜರು
ವಿಚಾರಣೆ ನಡೆಸಬೇಕಿದ್ದ ಹಿನ್ನೆಲೆ ಎರಡು ಕಡೆಯವರನ್ನು ಕೋರ್ಟ್‍ಗೆ ಕರೆಸಿದೆ ನ್ಯಾಯಮೂರ್ತಿ ಫೆಲಿಕ್ಸ್ ಅಲ್ಫಾನ್ಸೋ ಅಂತೋನಿ ಅವರು, ಮಧ್ಯಸ್ಥಗಾರಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಅದರಂತೆ ಮಧ್ಯಸ್ಥಗಾರರ ಮಧ್ಯಸ್ಥಿಕೆಯಲ್ಲಿ ರಾಮಪ್ಪ, ರವಿಕುಮಾರ್ ಮತ್ತು ಶೇಷಗಿರಿ ಭಟ್ ಅವರು ಹೊಂದಿಕೊಂಡು ಹೋಗಲು ಸಮ್ಮತಿ ಸೂಚಿಸಿದರು. ಹಾಗಾಗಿ ನವೀನ್ ಮತ್ತು ಸಂದೀಪ್ ಜೈನ್ ಅವರು ತಮ್ಮ ದಾವೆಯನ್ನು ಹಿಂಪಡೆದಿದ್ದಾರೆ.
ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಚಟುವಟಿಕೆ ನಡೆಯಲಿದೆ. ಎರಡು ಕಡೆಯವರು ಹೊಂದಿಕೊಂಡು ಹೋಗುವುದಾಗಿ ಕೋರ್ಟ್‍ಗೆ ತಿಳಿಸಿದ್ದಾರೆ.
ಸಂದೀಪ್ ಜೈನ್, ನವೀನ್ ಜೈನ್ ಪರವಾಗಿ ನ್ಯಾಯವಾದಿ ರವೀಶ ಕುಮಾರ್ ಮತ್ತು ಧರ್ಮದರ್ಶಿ ರಾಮಪ್ಪ ಅವರ ಪರವಾಗಿ ನ್ಯಾಯವಾದಿ ಎನ್.ವೆಂಕಟರಾಮ್, ಹೆಚ್.ಎನ್.ದಿವಾಕರ್, ಬಿ.ನಾಗರಾಜ್, ಎಂ.ರಾಘವೇಂದ್ರ, ಕೆ.ಬಿ.ಮಹಾಬಲೇಶ ಹಾಜರಿದ್ದರು. ಶೇಷಗಿರಿ ಭಟ್ ಪರವಾಗಿ ಟಿ.ಎಸ್.ರಮಣ ಹಾಜರಿದ್ದರು. ಮಧ್ಯಸ್ಥಗಾರರಾಗಿ ನ್ಯಾಯವಾದಿ ಮರಿದಾಸ್ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]