ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 12 ನವೆಂಬರ್ 2021
ತಾಳಗುಪ್ಪ – ಶಿವಮೊಗ್ಗ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿ 80 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ತಾಳಗುಪ್ಪದಲ್ಲಿ ರೈಲಿಗೆ ಪೂಜೆ ಸಲ್ಲಿಸಿ, ಸಂಭ್ರಮಾಚಾರಣೆ ಮಾಡಲಾಯಿತು.
ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಸಂಭ್ರಮಾಚಾರಣೆ ಮಾಡಲಾಯಿತು. ರೈಲಿಗೆ ಹೂವಿನ ಅಲಂಕಾರ ಮಾಡಿ, ಬಾಳೆ ಕಂದು ಕಟ್ಟಿ ಪೂಜೆ ಸಲ್ಲಿಸಲಾಯಿತು. ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಸರ್ ಎಂ.ವಿ, ಒಡೆಯರ್ ದೂರದೃಷ್ಟಿ
ಇದೆ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಗೂರ್ಲಕೆರೆ, ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ, ಮೈಸೂರು ಒಡೆಯರ್ ಅವರ ಅಭಿವೃದ್ಧಿ ಪರ ಆಲೋಚನೆಯಿಂದ ಶರಾವತಿ ಜಲವಿದ್ಯುತ್ ಯೋಜನೆ ಪ್ರಾರಂಭವಾಯಿತು. ಈ ಸಂದರ್ಭ ತಾಳಗುಪ್ಪ – ಶಿವಮೊಗ್ಗ ರೈಲ್ವೆ ಮಾರ್ಗ ನಿರ್ಮಿಸಲಾಯಿತು. ರೈಲು ಸಂಚಾರ ಆರಂಭಗೊಂಡು 80 ವರ್ಷ ಕಳೆದಿದೆ ಎಂದು ಸ್ಮರಿಸಿಕೊಂಡರು.
ದಟ್ಟ ಕಾಡು, ಸೂರ್ಯರಶ್ಮಿ ನೆಲ ಕಾಣದಂತೆ ಬೆಳೆದಿದ್ದ ಬೃತಹ್ ಮರಗಳ ಸಾಲು, ಭಾರಿ ಮಳೆ, ಮಲೇರಿಯಾದಂತಹ ಸಮಸ್ಯೆಗಳ ನಡುವೆಯು ರೈಲ್ವೆ ಮಾರ್ಗ ನಿರ್ಮಿಸಲಾಗಿತ್ತು. ಇದಕ್ಕೆ ಕಾರಣರಾದ ಎಲ್ಲಾ ಪ್ರಮುಖರನ್ನು ಈಗ ಸ್ಮರಿಸಿಕೊಳ್ಳಬೇಕಿದೆ ಎಂದರು.
ಹೋರಾಟ ಮಾಡುವ ಅಗತ್ಯವಿದೆ
ರೈಲ್ವೆ ಹೋರಾಟ ಸಮಿತಿಯ ಮೂಗಿಮನೆ ಗಣಪತಿ ಹೆಗಡೆ ಮಾತನಾಡಿ, ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಆರಂಭವಾದ ರೈಲ್ವೆ ಮಾರ್ಗ ಈಗಲೂ ಜನರಿಗೆ ಸಹಕಾರಿಯಾಗಿದೆ. ಈ ಮಾರ್ಗವನ್ನು ಕೊಂಕಣ ರೈಲ್ವೆಯೊಂದಿಗೆ ಸಂಪರ್ಕ ಕಲ್ಪಿಸಬೇಕಿದೆ. ಇದಕ್ಕಾಗಿ ಒತ್ತಾಯವು ಇದೆ. ಈಗ ಹೋರಾಟದ ಅಗತ್ಯತೆ ಇದ್ದು, ಜನರು ಸಹಕಾರ ನೀಡಬೇಕಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ, ಆಟೋ ಚಾಲಕರ ಸಂಘ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆ ಪ್ರಮುಖರು, ಸಾರ್ವಜನಿಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422